ಚಹಲ್ ಹ್ಯಾಟ್ರಿಕ್ ಪಡೆದಾಗ ಫುಲ್ ಖುಷಿಯಲ್ಲಿ ಕಾಣಿಸಿಕೊಂಡ ಧನುಶ್ರೀ, ಹೇಗಿತ್ತು ಗೊತ್ತಾ ಚಾಹಲ್ ಹೆಂಡತಿ ಪ್ರತಿಕ್ರಿಯೆ??

ನಮಸ್ಕಾರ ಸ್ನೇಹಿತರೇ ಒಂದಕ್ಕಿಂತ ಒಂದು ಪಂದ್ಯಗಳು ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ನಲ್ಲಿ ರೋಮಾಂಚನವನ್ನು ನೀಡುತ್ತಿವೆ. ಪ್ರತಿಯೊಂದು ಪಂದ್ಯಗಳು ಕೂಡ ರೋಚಕತೆಯಿಂದ ಸಾಗಿದೆ. ಅದರಲ್ಲೂ ನಿನ್ನೆಯ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಏಳು ರನ್ಗಳಿಂದ ಗೆಲುವು ಸಾಧಿಸಿದೆ. ರಾಜಸ್ಥಾನ ರಾಯಲ್ಸ್ ಬಲಾಡ್ಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಗೆಲುವನ್ನು ಸಾಧಿಸಲು ಪ್ರಮುಖ ಪಾತ್ರವನ್ನು ಯಜುವೇಂದ್ರ ಚಹಲ್ ರವರು ವಹಿಸಿದ್ದರು ಎಂದರೆ ತಪ್ಪಾಗಲಾರದು.

ಹೌದು ಯಜುವೇಂದ್ರ ಚಹಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಇದ್ದಾಗಲೂ ಕೂಡ ಪ್ರಮುಖ ಸ್ಪಿನ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಈಗ ರಾಜಸ್ತಾನ ರಾಯಲ್ಸ್ ತಂಡದಲ್ಲಿ ಕೂಡ ತಮ್ಮ ಪ್ರಾಮುಖ್ಯತೆಯನ್ನು ಸಾಬೀತುಪಡಿಸುತ್ತಿದ್ದಾರೆ. ನಿಮ್ಮಯ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಯಜುವೇಂದ್ರ ಚಹಾಲ್ ರವರು ತಮ್ಮ 4 ಓವರ್ಗಳಲ್ಲಿ 40 ರನ್ನುಗಳನ್ನು ನೀಡಿ ಐದು ವಿಕೆಟ್ ಗಳನ್ನು ಕಬಳಿಸಿದ್ದಾರೆ. ಇದು ಅವರ ಮೊದಲ 5 ವಿಕೆಟ್ ಹೌಲ್ ಆಗಿದೆ. ಅದರಲ್ಲೂ ನಿನ್ನೆ 17ನೇ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು. ಈಗಾಗಲೇ ಯಜುವೇಂದ್ರ ಚಹಾಲ್ ರವರು ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಆರು ಪಂದ್ಯಗಳಲ್ಲಿ 17 ವಿಕೆಟುಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಅದರಲ್ಲೂ ಈ ಪಂದ್ಯಾಟದ ಸಂದರ್ಭದಲ್ಲಿ ಚಹಲ್ ರವರ ಪತ್ನಿಯಾಗಿರುವ ಧನಶ್ರೀ ಕೂಡ ಉಪಸ್ಥಿತರಿದ್ದರು. ಚಹಾಲ್ ರವರ ಈ ಸಾಧನೆಯನ್ನು ನೋಡಿ ಅವರು ಕೂಡ ಸ್ಟ್ಯಾಂಡ್ ನಲ್ಲಿ ಎದ್ದು ಕುಣಿಯಲು ಆರಂಭಿಸಿದ್ದರು. ಖಂಡಿತವಾಗಿ ತಮ್ಮ ಸಂಗಾತಿ ಮಾಡಿರುವ ಸಾಧನೆಯನ್ನು ಅವರನ್ನು ಬಿಟ್ಟರೆ ಅವರಿಗಿಂತ ಹೆಚ್ಚು ಇನ್ಯಾರು ಕೂಡ ಖುಷಿಪಡಲು ಸಾಧ್ಯವಿಲ್ಲ. ಆದರೂ ಕೂಡ ಧನಶ್ರೀ ಅವರು ಸ್ಟ್ಯಾಂಡ್ ನಲ್ಲಿ ಚಹಾಲ್ ರವರು ವಿಕೆಟನ್ನು ಪಡೆದ ನಂತರ ಕುಣಿದು ಕುಪ್ಪಳಿಸಿದ್ದು ಈಗಾಗಲೇ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಎಲ್ಲರೂ ಕೂಡ ಧನಶ್ರೀ ಅವರು ಸಂತೋಷದಿಂದ ಕುಣಿದಾಡಿ ರುವ ವಿಡಿಯೋವನ್ನು ನೋಡಿ ಭಲೆ ಜೋಡಿ ಎನ್ನುವುದಾಗಿ ಮೆಚ್ಚಿ ಹೊಗಳಿದ್ದಾರೆ.

Comments are closed.