ಆಲಿಯಾ ಭಟ್, ರಣಬೀರ್ ಮದುವೆಯಲ್ಲಿ ಸಪ್ತಪದಿ ಬದಲು ಕೇವಲ 4 ಹೆಜ್ಜೆ ಇತ್ತ ಆಲಿಯಾ ಭಟ್. ಕಾರಣ ತಿಳಿಸಿದ ರಾಹುಲ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಮದುವೆಯಾಗಿರುವ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇಬ್ಬರು ಕೂಡ ಈಗಾಗಲೇ ಟಾಕ್ ಆಫ್ ದ ನೇಶನ್ ಆಗಿದ್ದಾರೆ. ಹೌದು ಇವರಿಬ್ಬರು ಈಗಾಗಲೇ ಸರಳವಾಗಿ ಮದುವೆಯಾಗಿದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರೆಟಿಗಳ ಮದುವೆ ಎಂದರೆ ಅದ್ದೂರಿಯಾಗಿ ದೂರದೂರದ ಬಂಗಲೆಯಲ್ಲಿ ಅಥವಾ ಐಷಾರಾಮಿ ಹೋಟೆಲ್ ಗಳಲ್ಲಿ ನಡೆಯುತ್ತದೆ. ಆದರೆ ರಣಬೀರ್ ಕಪೂರ್ ಹಾಗೂ ಆರ್ಯಭಟ ಇಬ್ಬರು ಕೂಡ ರಣಬೀರ್ ಕಪೂರ್ ಅವರ ನಿವಾಸದಲ್ಲಿ ಸಾಂಪ್ರದಾಯಿಕವಾಗಿ ಹಾಗೂ ಸರಳವಾಗಿ ಮದುವೆಯಾಗಿದ್ದಾರೆ. ಈ ಮದುವೆಯನ್ನು ಎಲ್ಲರ ಕಣ್ಮನವನ್ನು ಸೆಳೆದಿದೆ. ಇನ್ನು ಈ ಮದುವೆಗೆ ಹೊರಗಿನವರು ಕೂಡ ಹೆಚ್ಚಾಗಿ ಬಂದಿಲ್ಲ. ಕರೀನಾ ಕಪೂರ್ ಕರಿಷ್ಮಾ ಕಪೂರ್ ಸೈಫ್ ಆಲಿ ಖಾನ್ ಕರಣ್ ಜೋಹರ್ ಸೇರಿದಂತೆ ಉಳಿದವರು ಎಲ್ಲರೂ ಕುಟುಂಬಸ್ಥರೇ ಆಗಿದ್ದಾರೆ ಎಂಬುದಾಗಿ ಕೇಳಿಬಂದಿದೆ.

alia bhat ranbir 5 | ಆಲಿಯಾ ಭಟ್, ರಣಬೀರ್ ಮದುವೆಯಲ್ಲಿ ಸಪ್ತಪದಿ ಬದಲು ಕೇವಲ 4 ಹೆಜ್ಜೆ ಇತ್ತ ಆಲಿಯಾ ಭಟ್. ಕಾರಣ ತಿಳಿಸಿದ ರಾಹುಲ್ ಹೇಳಿದ್ದೇನು ಗೊತ್ತೇ??
ಆಲಿಯಾ ಭಟ್, ರಣಬೀರ್ ಮದುವೆಯಲ್ಲಿ ಸಪ್ತಪದಿ ಬದಲು ಕೇವಲ 4 ಹೆಜ್ಜೆ ಇತ್ತ ಆಲಿಯಾ ಭಟ್. ಕಾರಣ ತಿಳಿಸಿದ ರಾಹುಲ್ ಹೇಳಿದ್ದೇನು ಗೊತ್ತೇ?? 3

ರಣಬೀರ್ ಕಪೂರ್ ಅವರ ಹೆಸರು ಬಾಲಿವುಡ್ ಚಿತ್ರರಂಗದ ಹಲವಾರು ನಟಿಯರ ಜೊತೆಗೆ ಕೇಳಿಬಂದಿತ್ತು. ಆದರೆ ಯಾವ ಹೆಸರು ಕೂಡ ಮದುವೆ ತನಕ ಬಂದಿರಲಿಲ್ಲ. ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಹಾಗೂ ನಟಿ ಜೋಡಿಗಳಾದ ರಿಷಿ ಕಪೂರ್ ಹಾಗೂ ನೀತು ಸಿಂಗ್ ರವರ ಜೇಷ್ಠ ಪುತ್ರನಾಗಿ ದ್ದಾರೆ ರಣಬೀರ್ ಕಪೂರ್. ಇನ್ನು ಇತ್ತ ಆಲಿಯಾ ಭಟ್ ಕೂಡ ಯಾರಿಗೇನು ಕಡಿಮೆ ಇಲ್ಲ.

ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಆಗಿರುವ ಮಹೇಶ್ ಭಟ್ ರವರ ಮಗಳಾಗಿದ್ದಾರೆ ಆಲಿಯಾ ಭಟ್. ಸ್ಟೂಡೆಂಟ್ ಆಫ್ ದ ಇಯರ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಆಲಿಯಾ ಭಟ್ ರವರು ಮೊದಮೊದಲು ಸಾಕಷ್ಟು ಟ್ರೋಲ್ ಗೆ ಒಳಗಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಪಾತ್ರದ ನಟನೆಯ ಮೂಲಕ ಎಲ್ಲರ ಮನಗೆದ್ದು ಪ್ರಬುದ್ಧ ನಟಿಯಾಗಿ ಎಲ್ಲಾ ಕಡೆ ತಮ್ಮ ಹೆಸರನ್ನು ಸಂಪಾದಿಸಿದ್ದಾರೆ. ಚಿಕ್ಕವಯಸ್ಸಿನಿಂದಲೂ ಕೂಡ ಆಲಿಯಾ ಭಟ್ ರವರು ರಣಬೀರ್ ಕಪೂರ್ ಅವರನ್ನು ತಮ್ಮ ಮೊದಲ ಕ್ರಷ್ ಎನ್ನುವುದಾಗಿ ಹೇಳಿಕೊಂಡು ಬಂದಿದ್ದರು.

ತಮ್ಮ ಗುರಿಯಂತೆ ಆಲಿಯಾ ಭಟ್ ರವರು ರಣಬೀರ್ ಕಪೂರ್ ಅವರನ್ನು ಪ್ರೀತಿಸಿ ಈಗ ಮದುವೆಯಾಗಿದ್ದಾರೆ. ನಿಜಕ್ಕೂ ಕೂಡ ಇದೊಂದು ಸ್ಪೂರ್ತಿದಾಯಕ ಲವ್ ಸ್ಟೋರಿ ಎಂದರೆ ತಪ್ಪಾಗಲಾರದು. ಇನ್ನು ಇವರಿಬ್ಬರ ನಡುವೆ ಹತ್ತು ವರ್ಷದ ವಯಸ್ಸಿನ ಅಂತರವಿದ್ದರೂ ಕೂಡ ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇವರಿಬ್ಬರ ಮದುವೆಯಲ್ಲಿ ನಡೆದಿರುವಂತಹ ವಿಚಿತ್ರ ಪದ್ಧತಿಯೊಂದರ ಕುರಿತಂತೆ ಆಲಿಯಾ ಭಟ್ ಅವರ ಸಹೋದರ ರಾಹುಲ್ ಭಟ್ ಅವರು ಹೇಳಿಕೊಂಡಿದ್ದಾರೆ.

ಸಾಮಾನ್ಯವಾಗಿ ಮದುವೆಯಾಗುವ ಸಂದರ್ಭದಲ್ಲಿ ಸಪ್ತಪದಿ ಅಂದರೆ ಏಳು ಹೆಜ್ಜೆಗಳನ್ನು ಇಡುತ್ತಾರೆ. ಆದರೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರವರ ಮದುವೆ ಸಂದರ್ಭದಲ್ಲಿ ಕೇವಲ ನಾಲ್ಕು ಹೆಜ್ಜೆಗಳನ್ನು ಮಾತ್ರ ಇಟ್ಟಿದ್ದಾರೆ. ಮಾತ್ರವಲ್ಲದೆ ಇದು ರಣಬೀರ್ ಕಪೂರ್ ಅವರ ಕುಟುಂಬಕ್ಕೆ ಹತ್ತಿರವಾಗಿರುವ ಪಂಡಿತರೆ ಸೂಚಿಸಿರುವ ವಿಧಾನವಂತೆ. ಮದುವೆಯಲ್ಲಿ ಏಳು ಹೆಜ್ಜೆಗಳ ಬದಲು ನಾಲ್ಕು ಹೆಜ್ಜೆಗಳನ್ನು ಇಡಬೇಕು ಎನ್ನುವುದಾಗಿ ದಾಖಲೆ ಕೂಡ ಇದೆ ಎಂದು ಹೇಳಲಾಗಿದೆ.

alia bhat ranbir 7 | ಆಲಿಯಾ ಭಟ್, ರಣಬೀರ್ ಮದುವೆಯಲ್ಲಿ ಸಪ್ತಪದಿ ಬದಲು ಕೇವಲ 4 ಹೆಜ್ಜೆ ಇತ್ತ ಆಲಿಯಾ ಭಟ್. ಕಾರಣ ತಿಳಿಸಿದ ರಾಹುಲ್ ಹೇಳಿದ್ದೇನು ಗೊತ್ತೇ??
ಆಲಿಯಾ ಭಟ್, ರಣಬೀರ್ ಮದುವೆಯಲ್ಲಿ ಸಪ್ತಪದಿ ಬದಲು ಕೇವಲ 4 ಹೆಜ್ಜೆ ಇತ್ತ ಆಲಿಯಾ ಭಟ್. ಕಾರಣ ತಿಳಿಸಿದ ರಾಹುಲ್ ಹೇಳಿದ್ದೇನು ಗೊತ್ತೇ?? 4

ಅದೇನೇ ಇರಲಿ ಇವರಿಬ್ಬರು ಈಗಾಗಲೇ ಐದು ವರ್ಷಗಳ ಪ್ರೀತಿಯ ನಂತರ ಮದುವೆಯಾಗಿದ್ದಾರೆ. ಬೇರೆ ಸೆಲೆಬ್ರಿಟಿಗಳ ಹಾಗೆ ಕೆಲವೇ ವರ್ಷಗಳಲ್ಲಿ ಇವರಿಬ್ಬರ ನಡುವೆ ವೈವಾಹಿಕ ಮೈಮನಸ್ಸುಗಳು ಮೂಡದೆ ಇರಲಿ ಸದಾಕಾಲ ಇವರಿಬ್ಬರು ಸುಖ ಸಂತೋಷದಿಂದ ಜೊತೆಯಾಗಿ ಬಾಳಲಿ ಎಂದು ಹಾರೈಸೋಣ. ಸದ್ಯಕ್ಕೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಬ್ರಹ್ಮಾಸ್ತ್ರ ಚಿತ್ರ ಇನ್ನೇನು ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಬಾರಿಗೆ ಈ ಮೂಲಕ ಇವರಿಬ್ಬರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕಾತರತೆ ಅಭಿಮಾನಿಗಳಲ್ಲಿ ಇದೆ.

Comments are closed.