ಸತತ ಗೆಲುವನ್ನು ಕಾಣುತ್ತಿದ್ದರೂ ಕೂಡ ಆರ್ಸಿಬಿ ಗೆ ಕಾಡುತ್ತಿದೆ ಅದೊಂದು ಸಮಸ್ಯೆ, ಅದೊಂದು ನಿವಾರಣೆಯಾದರೆ ಆರ್ಸಿಬಿ ಮತ್ತಷ್ಟು ಬಲಿಷ್ಠ ಎಂದ ಕ್ರಿಕೆಟ್ ಪಂಡಿತರು. ಏನಂತೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಕಳೆದೆಲ್ಲ ಬಾರಿಯ ಐಪಿಎಲ್ ಅನ್ನು ಗಮನಿಸಿದರೆ ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಮತೋಲಿತ ತಂಡವನ್ನು ಹೊಂದಿದೆ ಎಂದು ಹೇಳಬಹುದಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಕೊಂಚಮಟ್ಟಿಗೆ ವಿಫಲತೆಯನ್ನು ಕಾಣುತ್ತಿದೆ ಹೊರತು ಬೌಲಿಂಗ್ನಲ್ಲಿ ಸಕ್ಕತ್ ಸ್ಟ್ರಾಂಗ್ ಆಗಿದೆ ಎಂದು ಹೇಳಬಹುದಾಗಿದೆ. ಅದರಲ್ಲೂ ಹರ್ಷಲ್ ಪಟೇಲ್ ಹೆಝಲ್ ವುಡ್ ತಂಡದ ಬೌಲಿಂಗ್ ಜೀವಾಳವಾಗಿದ್ದಾರೆ ಎಂದರೆ ತಪ್ಪಾಗಲಾರದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಮಸ್ಯೆ ಇರುವುದು ಆರಂಭಿಕ ಆಟಗಾರರಲ್ಲಿ. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ದಿನೇಶ್ ಕಾರ್ತಿಕ್ ಹಾಗೂ ಶಾಬಾಜ್ ಅಹ್ಮದ್ ರವರು ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಾರದು.

ಆರಂಭಿಕ ಬ್ಯಾಟಿಂಗ್ ಕ್ರಮಾಂಕ ವಿಫಲವಾದಾಗಲೆಲ್ಲ ಈ ತ್ರಿಮೂರ್ತಿಗಳು ಬಂದು ತಂಡವನ್ನು ಗೆಲ್ಲಿಸಿದ್ದಾರೆ ಎಂದರೆ ತಪ್ಪಾಗಲಾರದು. ಅದರಲ್ಲೂ ಆರಂಭಿಕ ಆಟಗಾರರು ಸಂಪೂರ್ಣವಾಗಿ ಈ ಬಾರಿಯ ಟೂರ್ನಮೆಂಟ್ ನಲ್ಲಿ ನಿಸ್ತೇಜ ರಾಗಿದ್ದಾರೆ ಎನ್ನುವುದು ನಿಜಕ್ಕೂ ಕೂಡ ವಿಷಾದನೀಯ ವಿಚಾರವಾಗಿದೆ. ನಾಯಕನ ಜವಾಬ್ದಾರಿಯಿಂದ ಕೆಳಗಿಳಿದ ಮೇಲೆ ಈ ಬಾರಿಯಾದರೂ ವಿರಾಟ್ ಕೊಹ್ಲಿ ರವರು ಉತ್ತಮ ಬ್ಯಾಟಿಂಗ್ ಮಾಡಲಿದ್ದಾರೆ ಎನ್ನುವುದಾಗಿ ಎಲ್ಲರೂ ಅಂದುಕೊಂಡಿದ್ದರು. ಮೊದಲ ಪಂದ್ಯದಲ್ಲಿ ಮಿಂಚಿದ್ದು ಬಿಟ್ಟರೆ ಮತ್ತೆ ಕಿಂಗ್ ಕೊಹ್ಲಿ ರವರ ಬ್ಯಾಟ್ನಿಂದ ಯಾವುದೇ ಉತ್ತರ ಬರಲಿಲ್ಲ. ಇನ್ನು ನಾಯಕ ಡುಪ್ಲೆಸಿಸ್ ರವರು ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

rcb lsg 2022 | ಸತತ ಗೆಲುವನ್ನು ಕಾಣುತ್ತಿದ್ದರೂ ಕೂಡ ಆರ್ಸಿಬಿ ಗೆ ಕಾಡುತ್ತಿದೆ ಅದೊಂದು ಸಮಸ್ಯೆ, ಅದೊಂದು ನಿವಾರಣೆಯಾದರೆ ಆರ್ಸಿಬಿ ಮತ್ತಷ್ಟು ಬಲಿಷ್ಠ ಎಂದ ಕ್ರಿಕೆಟ್ ಪಂಡಿತರು. ಏನಂತೆ ಗೊತ್ತೇ?
ಸತತ ಗೆಲುವನ್ನು ಕಾಣುತ್ತಿದ್ದರೂ ಕೂಡ ಆರ್ಸಿಬಿ ಗೆ ಕಾಡುತ್ತಿದೆ ಅದೊಂದು ಸಮಸ್ಯೆ, ಅದೊಂದು ನಿವಾರಣೆಯಾದರೆ ಆರ್ಸಿಬಿ ಮತ್ತಷ್ಟು ಬಲಿಷ್ಠ ಎಂದ ಕ್ರಿಕೆಟ್ ಪಂಡಿತರು. ಏನಂತೆ ಗೊತ್ತೇ? 2

ಸಾಮಾನ್ಯವಾಗಿ ಯುವ ಆಟಗಾರರು ತಮಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ರೀತಿಯಲ್ಲಿ ತಮ್ಮ ಮೌಲ್ಯವನ್ನು ಸಾಬೀತುಪಡಿಸುತ್ತಾರೆ. ಆದರೆ ಅನುಜ್ ರಾವತ್ ಈಗಾಗಲೇ ಏಳು ಪಂದ್ಯಗಳಿಂದ ಕೇವಲ 129 ರನ್ನುಗಳನ್ನು ಮಾತ್ರ ಕಲೆಹಾಕಿದ್ದಾರೆ. ಇದು ಪ್ರಮುಖವಾಗಿ ಆರಂಭಿಕ ಆಟಗಾರರ ಸಮಸ್ಯೆಯ ಕಾರಣವಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೀಕ್ನೆಸ್ ಪಾಯಿಂಟ್ ಆಗಿ ಅನುಜ್ ರಾವತ್ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅವರ ಬದಲಿಗೆ ಆರಂಭಿಕ ಆಟಗಾರನ ಆಯ್ಕೆಯಲ್ಲಿ ಕೇವಲ ಉಳಿದುಕೊಂಡಿರುವುದು ನ್ಯೂಜಿಲೆಂಡ್ ಮೂಲದ ಫಿನ್ ಆಲೆನ್ ಮಾತ್ರ. ಈಗಾಗಲೇ ನಾಲ್ಕು ವಿದೇಶಿ ಆಟಗಾರರು ತಂಡದಲ್ಲಿದ್ದು ಎಲ್ಲರೂ ಕೂಡ ಉತ್ತಮವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ. ಹೀಗಾಗಿ ಅನುಜ್ ರಾವತ್ ರವರ ಆಯ್ಕೆ ಎನ್ನುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನುಂಗಲಾರದ ತುತ್ತಾಗಿದೆ. ಈ ಕುರಿತಂತೆ ಮುಂದೆ ತಂಡ ಯಾವ ನಿರ್ಧಾರವನ್ನು ಕೈ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಾಗುತ್ತದೆ.

Comments are closed.