Shilpa: ರಾಜ್ಯವೇ ಮೆಚ್ಚಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪಾತ್ರದಾರಿ ಸುಮಾ ರವರು ನಿಜಕ್ಕೂ ಯಾರು ಗೊತ್ತೇ? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??
Shilpa: ಜೀಕನ್ನಡ (Zee Kannada) ವಾಹಿನಿಯ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರವಾಹಿ ಎಲ್ಲರ ಫೇವರೆಟ್, ಈ ಧಾರವಾಹಿ ಶುರುವಾಗಿ ಬಹಳಷ್ಟು ಸಮಯ ಕಳೆದಿದ್ದರು, ಟಿಆರ್ಪಿ ರೇಟಿಂಗ್ ನಲ್ಲಿ ಮೊದಲ ಅಥವಾ ಎರಡನೇ ಸ್ಥಾನವನ್ನು ಖಾತ್ರಿ ಪಡಿಸಿಕೊಂಡಿದೆ. ಪುಟ್ಟಕ್ಕನ ಪಾತ್ರದಲ್ಲಿ ನಟಿಸುತ್ತಿರುವ ಹಿರಿಯನಟಿ ಉಮಾಶ್ರೀ (Umashree) ಅವರ ಅಭಿನಯವನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಪುಟ್ಟಕ್ಕನಿಗೆ ಮೂವರು ಮಕ್ಕಳು, ಸಹನ, ಸ್ನೇಹ ಮತ್ತು ಸುಮಾ.
ಸಹನ ಗೆ ಇತ್ತೀಚೆಗೆ ಮದುವೆ ಮಾಡಿದರು, ಸ್ನೇಹ ಐಎಎಸ್ ಆಫೀಸರ್ ಆಗಬೇಕು ಎಂದು ಓದುತ್ತಿರುವ ಹುಡುಗಿ ಕೊನೆಯ ಮಗಳು ಸುಮಾ ಓದುತ್ತಿರುವ ಚಿಕ್ಕ ಹುಡುಗಿ. ಮನೆಯ ಕೊನೆಯ ಮಗಳಾಗಿ ಮುದ್ದಾಗಿರುವ ಸುಮಾ ಪಾತ್ರ ಎಲ್ಲರಿಗು ಇಷ್ಟವಾಗಿದೆ. ಈ ಪಾತ್ರದಲ್ಲಿ ನಟಿಸುತ್ತಿರುವ ನಿಜವಾದ ಕಲಾವಿದೆಯ ಹೆಸರೇನು? ಇವರ ಬಗ್ಗೆ ನಿಮಗೆ ಗೊತ್ತಾ?, ಸುಮಾ ಪಾತ್ರದಲ್ಲಿ ನಟಿಸುತ್ತಿರುವ ಈ ನಟಿಯ ನಿಜವಾದ ಹೆಸರು ಶಿಲ್ಪಾ (Shilpa).
ಇದನ್ನು ಓದಿ: Darshan: ದರ್ಶನ್ ರವರ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ವೀರೇಂದ್ರ ಹೆಗ್ಡೆ ರವರು ಹೇಳಿದ್ದೇನು ಗೊತ್ತೇ??
ಇವರು ವೃತ್ತಿಯಲ್ಲಿ ನಟನೆಯ ಜೊತೆಗೆ ಮಾಡಲ್ ಹಾಗೂ ಫ್ಯಾಶನ್ ಡಿಸೈನರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಕೆರಿಯರ್ ಶುರು ಮಾಡುವಾಗ ಉಮಾಶ್ರೀ ಅವರಂತಹ ದೊಡ್ಡ ನಟಿ ಜೊತೆಗೆ ಕೆಲಸ ಮಾಡ್ತೀನಿ ಅಂತ ಸುಮಾ ಅವರು ಅಂದುಕೊಂಡಿರಲಿಲ್ಲವಂತೆ. ಸೆಟ್ ನಲ್ಲಿ ಉಮಾಶ್ರೀ ಅವರು ಸ್ವಂತ ತಾಯಿ ಹಾಗೆ ಕೇರ್ ಮಾಡುತ್ತಾರಂತೆ. ಹಾಗೆಯೇ ತಮ್ಮ ಧಾರವಾಹಿಯ ಬೇರೆ ಕಲಾವಿದರ ಜೊತೆಗೂ ಇವರು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ ಎನ್ನುತ್ತಾರೆ ಶಿಲ್ಪಾ.
ಶಿಲ್ಪ ಅವರಿಗೆ ಧಾರವಾಹಿ ಥರವೇ ನಿಜ ಜೀವನದಲ್ಲಿ ಕೂಡ ಇಬ್ಬರು ಅಕ್ಕಂದಿರು ಇದ್ದಾರಂತೆ, ಆದರೆ ಈಗ ಅವರಿಬ್ಬರಿಗು ಮದುವೆ ಆಗಿ ಹೋಗಿದೆಯಂತೆ. ಸೆಟ್ ನಲ್ಲಿ ಸಂಜನಾ ಹಾಗೂ ಅಕ್ಷರಾ ಇಬ್ಬರು ಅಕ್ಕಂದಿರ ಸ್ಥಾನವನ್ನು ತುಂಬಿಸಿದ್ದಾರಂತೆ. ಇಬ್ಬರು ಕೂಡ ಶಿಲ್ಪಾ ಅವರನ್ನು ತುಂಬಾ ಕೇರ್ ಮಾಡುತ್ತಾರಂತೆ. ಶೂಟಿಂಗ್ ಸೆಟ್ ನಲ್ಲಿ ಒಂದು ಸಾರಿ ಜ್ವರ ಬಂದಿದ್ದಾಗ ಉಮಾಶ್ರೀ ಅವರು ತುಂಬಾ ಕೇರ್ ತಗೊಂಡು ನೋಡಿಕೊಂಡಿದ್ದರಂತೆ. ಹೀಗೆ ಶೂಟಿಂಗ್ ಸೆಟ್ ನಲ್ಲಿ ತುಂಬಾ ಎಂಜಾಯ್ ಮಾಡ್ತಿದ್ದಾರೆ ಶಿಲ್ಪಾ.
Comments are closed.