Darshan: ದರ್ಶನ್ ರವರ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ವೀರೇಂದ್ರ ಹೆಗ್ಡೆ ರವರು ಹೇಳಿದ್ದೇನು ಗೊತ್ತೇ??
Darshan: ಡಿಬಾಸ್ ದರ್ಶನ್ ಅವರ ಗುಣ ವ್ಯಕ್ತಿತ್ವ ಎಂಥದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ಅವರ ಸಿನಿಮಾ ಇಂದ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ, ಅಷ್ಟೇ ಅಲ್ಲದೆ ಅವರ ಸರಳತೆ ಮತ್ತು ಸಜ್ಜನಿಕೆ ಇಂದ ಇನ್ನು ಹೆಚ್ಚಿನ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ ಡಿಬಾಸ್.. ಕ್ರಾಂತಿ ಸಿನಿಮಾ ಸಕ್ಸಸ್ ನಂತರ, ಕಾಟೇರ ಸಿನಿಮಾದಲ್ಲಿ ನಟಿಸುತ್ತಿರುವ ದರ್ಶನ್ ಅವರು, ಈಗ ಬ್ರೇಕ್ ಪಡೆದು ತಮ್ಮ ಹತ್ತಿರದವರ ಪರವಾಗಿ ಎಲೆಕ್ಷನ್ ನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ದರ್ಶನ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು.
ಅಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು, ಹೊಸ ಜೋಡಿಗಳಿಗೆ ಶುಭ ಹಾರೈಸಿ, ಧರ್ಮಸ್ಥಳದಿಂದ ತಮ್ಮ ಜೀವನದಲ್ಲಿ ಆದ ಬದಲಾವಣೆ ಬಗ್ಗೆ ಡಿಬಾಸ್ ಮಾತನಾಡಿದ್ದಾರೆ. ದರ್ಶನ್ ಅವರು ತಂದೆಯನ್ನು ಕಳೆದುಕೊಂಡು ಅಪಾರವಾದ ನೋವಿನಲ್ಲಿದ್ದಾಗ, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಡೆ ಅವರ ಮಾತುಗಳು ದರ್ಶನ್ ಅವರಿಗೆ ವಿಶೇಷವಾದ ಚೈತನ್ಯ ನೀಡಿತ್ತಂತೆ, ದರ್ಶನ್ ಅವರ ತಾಯಿ ಮಕ್ಕಳನ್ನು ನೀರಿಗೆ ತಳ್ಳಿ ತಾವು ಹಾಗೆ ಮಾಡಬೇಕು ಎಂದುಕೊಂಡಾಗ, ಧರ್ಮಸ್ಥಳಕ್ಕೆ ಬಂದು ಅವರ ಮನಸ್ಸು ಬದಲಾಯಿತಂತೆ. ಹಾಗೆಯೇ ದರ್ಶನ್ ಅವರು ಕೂಡ ಮದುವೆಯಾಗಿದ್ದು ಧರ್ಮಸ್ಥಳದಲ್ಲಿ, ಹಾಗಾಗಿ ಅಲ್ಲಿ ಮದುವೆ ಆಗುವುದು ತುಂಬಾ ಒಳ್ಳೆಯದು, ಶ್ರೇಷ್ಠ ಎಂದಿದ್ದಾರೆ ಡಿಬಾಸ್.
ಇನ್ನು ದರ್ಶನ್ ಅವರ ಬಗ್ಗೆ ಧರ್ಮಸ್ಥಳದ ಧರ್ಮದರ್ಶಿಗಳಾದ ವೀರೇಂದ್ರ ಹೆಗ್ಡೆ ಅವರು ಸಹ ದರ್ಶನ್ ಅವರ ಬಗ್ಗೆ ಮಾತನಾಡಿ, ಅವರ ಗುಣವನ್ನು ಹಾಡಿ ಹೊಗಳಿದ್ದಾರೆ. “ದರ್ಶನ್ ಅವರು ಹೆಸರಾಂತ ನಟ, ಅವರ ಅಭಿಮಾನಿಗಳು ಇಲ್ಲಿಗೆ ಬಂದಿದ್ದೀರಾ ನಾನು ಕೂಡ ಅವರ ಅಭಿಮಾನಿ. ದರ್ಶನ್ ಅವರಿಗೆ ಪ್ರಕೃತಿ ಮತ್ತು ಪ್ರಾಣಿಗಳ ಮೇಲೆ ಬಹಳ ಪ್ರೀತಿ ಇದೆ, ಬಹಳಷ್ಟು ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಕಾಡಿನಲ್ಲಿ ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಾರೆ, ಅವರ ಬಗ್ಗೆ ಬಹಳಷ್ಟು ಒಳ್ಳೆಯ ವಿಚಾರಗಳಿವೆ. ನಟನೆ ಮಾತ್ರವಲ್ಲ ಅವರಲ್ಲಿ ಮನುಷ್ಯತ್ವದ ಗುಣಗಳಿವೆ.
ಮನಸ್ಸಿನಿಂದ ಇದೆಲ್ಲಾ ಮಾಡುತ್ತಿದ್ದರು, ಸಿನಿಮಾದಲ್ಲಿ ನಿರ್ದೇಶಕರು ಹೇಳಿದ್ದನ್ನು, ನಿಜ ಜೀವನದಲ್ಲಿಯೂ ಮಾಡುವ ಗುಣ ಅವರದ್ದು. ಹೇಳಿಸಿಕೊಂಡು ಮಾಡುವುದು ಅಭಿನಯ, ಆದರೆ ಅವರು ನಿಜ ಜೀವನದಲ್ಲಿ ಕೂಡ ಅದೇ ರೀತಿ ಮಾಡುವಂಥ ವ್ಯಕ್ತಿತ್ವ ಅವರದ್ದು.. ಸಾಮೂಹಿಕ ವಿವಾಹ ಎನ್ನುವುದು ಸರಳವಾದ ವಿಷಯ, ಇಲ್ಲಿ ಶ್ರೇಷ್ಠ ಎಂದರೆ ದರ್ಶನ್ ಅವರು ಬಂದಿದ್ದಾರೆ. ಸಾಮೂಹಿಕ ವಿವಾಹಕ್ಕೆ ವೈಭವ ತರಲು ದರ್ಶನ್ ಅವರಿಗೆ ಆಹ್ವಾನ ನೀಡಿದ್ದೆವು. ಅವರು ನಮ್ಮ ಕಾರ್ಯಕ್ರಮಕ್ಕೆ ಬಂದು, ನಿಮಗೆಲ್ಲ ಹಾರೈಸಿದ್ದಕ್ಕೆ ಧನ್ಯವಾದಗಳು..” ಎಂದು ಹೇಳಿದ್ದಾರೆ.
Comments are closed.