Mahesh Babu: ಮಹೇಶ್ ಬಾಬು ಬಳಸುತ್ತಿರುವ ಈ ಬ್ಯಾಗ್ ಬೆಲೆ ಎಷ್ಟು ಗೊತ್ತೇ? ತಿಳಿದರೆ, ಶಾಕ್ ಆಗ್ತೀರಾ. ಯಪ್ಪಾ ಇಷ್ಟೊಂದಾ??
Mahesh Babu: ಚಿತ್ರರಂಗದ ಸೆಲೆಬ್ರಿಟಿಗಳ ಲೈಫ್ ಅಂದ್ರೆ ಅದು ಆಡಂಬರವಾಗಿ, ಐಶಾರಮಿಯಾಗಿ ಇರುತ್ತದೆ. ಇವರುಗಳು ಧರಿಸುವ ಬಟ್ಟೆ ಶೂಗಳು, ಬ್ಯಾಗ್ ಗಳು ಎಲ್ಲವೂ ಕೂಡ ರಿಚ್ ಆಗಿರುತ್ತದೆ, ಕಾಸ್ಲಿ ಪದಾರ್ಥ ಆಗಿರುತ್ತದೆ. ಸೆಲೆಬ್ರಿಟಿಗಳ ಹತ್ತಿರ ಇರುವ ಇಂಥ ವಸ್ತುಗಳ ಬಗ್ಗೆ ಸುದ್ದಿ ಆಗುತ್ತಲೇ ಇರುತ್ತದೆ. ಇದೀಗ ತೆಲುಗಿನ ಒಬ್ಬ ನಟನ ಬಗ್ಗೆ ಸುದ್ದಿಯಾಗುತ್ತಿದೆ.
ಆ ನಟ ಮತ್ಯಾರು ಅಲ್ಲ, ನಟ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು. ಇವರು ಟಾಲಿವುಡ್ ನ ಸೂಪರ್ ಸ್ಟಾರ್, ಮಹೇಶ್ ಬಾಬು ಅವರದ್ದು ಕೂಡ ಹೀಗೆ ರಿಚ್ ಲೈಫ್ ಸ್ಟೈಲ್, ಅವರು ಆಗಾಗ ವೆಕೇಶನ್ ಎಂದು ವಿದೇಶಕ್ಕೆ ಹೋಗುತ್ತಲೇ ಇರುತ್ತಾರೆ. ಅಲ್ಲೆಲ್ಲಾ ಐಷಾರಾಮಿ ದುಬಾರಿ ಬೆಲೆಯ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ.
ಅವುಗಳನ್ನು ಧರಿಸಿ ಕಾಣಿಸಿಕೊಂಡಾಗ, ಸ್ಟೈಲಿಶ್ ಆಗಿ ಕಾಣಿಸುತ್ತಾರೆ.
ಇತ್ತಿಚೆಗೆ ನಟ ಮಹೇಶ್ ಬಾಬು ಅವರು ಏರ್ ಪೋರ್ಟ್ ನಲ್ಲಿ ಫ್ಯಾಮಿಲಿ ಜೊತೆಗೆ ಕಾಣಿಸಿಕೊಂಡರು, ಅವರ ಕೈಯಲ್ಲಿ ಲೂಯಿಸ್ ವಿಟ್ಟನ್ ಬ್ಯಾಗ್ ಇತ್ತು. ಈ ಬ್ಯಾಗ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು ಮಹೇಶ್ ಬಾಬು. ಫ್ಯಾಮಿಲಿ ಜೊತೆಗೆ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಈ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆಯೇ ಮಹೇಶ್ ಬಾಬು ಅವರ ಬ್ಯಾಗ್ ಎಲ್ಲರ ಗಮನ ಸೆಳೆದಿದೆ.
ಮಹೇಶ್ ಬಾಬು ಅವರ ಕೈಯಲ್ಲಿದ್ದ ಲೂಯಿಸ್ ವಿಟ್ಟನ್ ಬ್ಯಾಗ್ ನ ಬೆಲೆ ಈಗ ವೈರಲ್ ಆಗುತ್ತಿದ್ದು, ₹3,92,656 ರೂಪಾಯಿಗಳು ಈ ಬ್ಯಾಗ್ ನ ಬೆಲೆ. ಇದನ್ನು ಕೇಳಿ ನೆಟ್ಟಿಗರು ಶಾಕ್ ಆಗಿದ್ದು, ಮಹೇಶ್ ಬಾಬು ಅವರದ್ದು ಬಹಳ ರಿಚ್ ಲೈಫ್ ಸ್ಟೈಲ್ ಎಂದು ಚರ್ಚೆ ಮಾಡುತ್ತಿದ್ದಾರೆ. ಬಾಬು ಅವರ ಏರ್ಪೋರ್ಟ್ ಲುಕ್ ಈಗ ವೈರಲ್ ಆಗಿದೆ.
Comments are closed.