NTR 30: ಎನ್ಟಿಆರ್ ಸಿನಿಮಾದಲ್ಲಿ ವಿಲ್ಲನ್ ಸೈಫ್ ಅಲಿ ಖಾನ್ ಪತ್ನಿ ಪಾತ್ರಕ್ಕೆ ಆಯ್ಕೆಯಾದ ಕನ್ನಡದ ಕಿರುತೆರೆ ನಟಿ. ಯಾರು ಗೊತ್ತೇ? ಅದೃಷ್ಟ ಅಂದ್ರೆ ಇದೆ ಇರ್ಬೇಕು.
NTR 30: ನಟ ಜ್ಯೂನಿಯರ್ ಎನ್ಟಿಆರ್ (Jr NTR) ಅವರ ಸಿನಿಮಾ ಅಂದ್ರೆ ಅಲ್ಲೋ ಸರ್ಪ್ರೈಸ್ ಗಳು ಇರಲೇಬೇಕು. ಆರ್.ಆರ್.ಆರ್ (RRR) ಅಂತಹ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ನಂತರ ಜ್ಯೂನಿಯರ್ ಎನ್ಟಿಆರ್ ಅವರು ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಕೊರಟಾಲ ಶಿವ (Koratala Shiva) ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾಗೆ ಇನ್ನು ಹೆಸರು ಇಟ್ಟಿಲ್ಲ, ಸಧ್ಯಕ್ಕೆ ಎನ್ಟಿಆರ್30 ಶೀರ್ಷಿಕೆಯಲ್ಲಿ ಸಿನಿಮಾ ಶುರುವಾಗಿದೆ.
ಬಾಲಿವುಡ್ ಬೆಡಗಿ ಖ್ಯಾತ ನಟಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ (Janhvi Kapoor) ಈ ಸಿನಿಮಾಗೆ ನಾಯಕಿಯಾಗಿದ್ದು, ಎನ್ಟಿಆರ್30 ಸಿನಿಮಾ ತಂಡದಿಂದ ಬಹಳಷ್ಟು ಸರ್ಪ್ರೈಸ್ ಗಳು ಬರುತ್ತಲೇ ಇದೆ, ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಅವರು ಈ ಸಿನಿಮಾದಲ್ಲಿ ವಿಲ್ಲನ್ ಆಗಿ ನಟಿಸುತ್ತಾರೆ ಎಂದು ಮಾಹಿತಿ ಸಿಕ್ಕಿತ್ತು, ಇದೀಗ ಈ ತಂಡಕ್ಕೆ ಮತ್ತೊಬ್ಬ ನಟಿಯ ಎಂಟ್ರಿ ಆಗಿದೆ. ಆ ನಟಿ ಕನ್ನಡದವರು ಎನ್ನುವುದು ಮತ್ತೊಂದು ವಿಶೇಷ.
ಕನ್ನಡ ಕಿರುತೆರೆ ಹಾಗೂ ತೆಲುಗು ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿರುವ ನಟಿ ಚೈತ್ರ ರೈ (Chaithra Rai) ಅವರು ಎನ್ಟಿಆರ್30 ಚಿತ್ರಕ್ಕೆ ಆಯ್ಕೆಯಾಗಿದ್ದು, ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ಚೈತ್ರಾ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜ್ಯೂನಿಯರ್ ಎನ್ಟಿಆರ್, ಸೈಫ್ ಅಫಿ ಖಾನ್ ಅವರಂಥ ದೊಡ್ಡ ಕಲಾವಿದರನ್ನು ನೋಡಿ ಬಹಳ ಎಕ್ಸೈಟ್ ಆದೇ ಎಂದು ಚೈತ್ರಾ ಅವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದರು. ಇವರು ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಕುತೂಹಲ ಜನರಲ್ಲಿದೆ.
ಚೈತ್ರಾ ಅವರು ಸೈಫ್ ಅಲಿ ಖಾನ್ ಅವರ ಪತ್ನಿಯ ಪಾತ್ರದಲ್ಲಿ ನಟಿಸುತ್ತಿರಬಹುದು ಎಂದು ಹೇಳಲಾಗುತ್ತಿದೆ. ತೆಲುಗು ಕಿರುತೆರೆಯಲ್ಲಿ ಅಷ್ಟ ಚೆಮ್ಮ ಧಾರವಾಹಿ ಮೂಲಕ ಚೈತ್ರಾ ರೈ ಅವರಿಗೆ ದೊಡ್ಡ ಹೆಸರು ಸಿಕ್ಕಿತ್ತು, ಕನ್ನಡದ ಕುಸುಮಾಂಜಲಿ ಧಾರವಾಹಿ ಮೂಲಕ ನಟನೆ ಶುರು ಮಾಡಿದ ಇವರು, ರಾಧಾ ಕಲ್ಯಾಣ ಸೇರಿದಂತೆ ಕೆಲವು ಧಾರವಾಹಿಗಳಲ್ಲಿ ನಟಿಸಿದ್ದರು. ಇದೀಗ ಎನ್ಟಿಆರ್30 ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ, ಇಷ್ಟು ದೊಡ್ಡ ಪ್ರಾಜೆಕ್ಟ್ ಮೂಲಕ ಲಾಂಚ್ ಆಗುತ್ತಿದ್ದಾರೆ ಚೈತ್ರಾ.
Comments are closed.