ಬಿಡುಗಡೆಯಾದ ದಿನದಿಂದಲೂ ಟಾಪ್ ಧಾರಾವಾಹಿಯಾಗಿ ಮೆರೆಯುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಗೆ ಶಾಕ್. ಹೊರನಡೆದ ಕಲಾವಿದ. ಯಾಕಂತೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಎಷ್ಟು ಉತ್ತಮ ಮಟ್ಟದ ಪ್ರತಿಕ್ರಿಯೆ ಸಿಗುತ್ತದೆಯೋ ಅದೇ ರೀತಿಯಲ್ಲಿ ಕಿರುತೆರೆ ವಾಹಿನಿಯ ಧಾರವಾಹಿಗೂ ಕೂಡ ಪ್ರೇಕ್ಷಕರ ಪ್ರೋತ್ಸಾಹ ಹಾಗೂ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಹಲವಾರು ಧಾರವಾಹಿಗಳು ಸಿನಿಮಾ ರೇಂಜಿನಲ್ಲಿ ಜನಪ್ರಿಯತೆ ಹಾಗೂ ಎಲ್ಲಾ ಕಡೆ ವ್ಯಾಪಕವಾಗಿ ಹರಡುತ್ತಿದೆ ಎಂದು ಹೇಳಬಹುದಾಗಿದೆ.

ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಜೀ ಕನ್ನಡ ವಾಹಿನಿಯ ಧಾರವಾಹಿ ಆಗಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಕುರಿತಂತೆ. ಕೆಲವು ತಿಂಗಳುಗಳ ಹಿಂದಷ್ಟೇ ಆರಂಭವಾಗಿರುವ ಈ ಧಾರವಾಹಿ ಈಗಾಗಲೇ ಹಲವಾರು ಸಮಯಗಳಿಂದ ಅಂದರೆ ಆರಂಭದಿಂದಲೂ ಕೂಡ ಟಾಪ್ ಸ್ಥಾನದಲ್ಲಿ ರೇಟಿಂಗ್ ಪಡೆಯುವ ಮೂಲಕ ಕನ್ನಡ ಕಿರುತೆರೆ ವಾಹಿನಿಯ ನಂಬರ್1 ಧಾರವಾಹಿಯಾಗಿ ಕಾಣಿಸಿಕೊಳ್ಳುತ್ತಿದೆ.

puttakkana makkalu | ಬಿಡುಗಡೆಯಾದ ದಿನದಿಂದಲೂ ಟಾಪ್ ಧಾರಾವಾಹಿಯಾಗಿ ಮೆರೆಯುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಗೆ ಶಾಕ್. ಹೊರನಡೆದ ಕಲಾವಿದ. ಯಾಕಂತೆ ಗೊತ್ತೇ?
ಬಿಡುಗಡೆಯಾದ ದಿನದಿಂದಲೂ ಟಾಪ್ ಧಾರಾವಾಹಿಯಾಗಿ ಮೆರೆಯುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಗೆ ಶಾಕ್. ಹೊರನಡೆದ ಕಲಾವಿದ. ಯಾಕಂತೆ ಗೊತ್ತೇ? 2

ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳಿಂದ ಕಲಾವಿದರ ಹೊರ ನಡೆಯುವ ಪ್ರಕ್ರಿಯೆ ಹೆಚ್ಚಾಗಿ ಕಂಡುಬರುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಹೀಗೆ ಅರ್ಧದಲ್ಲಿಯೇ ಕಲಾವಿದರು ಧಾರವಾಹಿಯಿಂದ ಹೊರ ಹೋಗುವುದರಿಂದ ಆ ಪಾತ್ರಕ್ಕೆ ಅಂಟಿಕೊಂಡಿರುವ ಪ್ರೇಕ್ಷಕರು ಬೇರೆಯವರನ್ನು ಆ ಪಾತ್ರದಲ್ಲಿ ಕಾಣಲು ಇಷ್ಟಪಡುವುದಿಲ್ಲ ಹೀಗಾಗಿ ಆ ಪಾತ್ರದ ಕುರಿತು ಇರುವಂತಹ ಜನಪ್ರಿಯತೆ ಮುಂದಿನ ಕಲಾವಿದ ನಿಂದಾಗಿ ಕಡಿಮೆ ಆಗಬಹುದು ಎನ್ನುವುದಾಗಿ ಕೂಡ ಇಲ್ಲಿ ನಾವು ಗಮನಿಸಬೇಕಾಗುತ್ತದೆ. ಇದು ಎಲ್ಲಾ ಬಾರಿ ಹೀಗಾಗುವುದಿಲ್ಲ.

ಆದರೆ ಕೆಲವೊಮ್ಮೆ ಪ್ರೇಕ್ಷಕರು ಮತ್ತೊಬ್ಬ ಕಲಾವಿದನನ್ನು ಪಾತ್ರದಲ್ಲಿ ಮೆಚ್ಚುವುದು ಕೂಡ ಉಂಟು. ಈ ಬಾರಿ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಚಂದ್ರು ಪಾತ್ರದ ಬದಲಾವಣೆ ಕಂಡು ಬಂದಿದ್ದು ಈ ಪಾತ್ರದಲ್ಲಿ ನಟಿಸುತ್ತಿದ್ದ ನಟ ಕಾರ್ತಿಕ್ ಮಹೇಶ್ ರವರು ಧಾರವಾಹಿಯಿಂದ ಹೊರಕ್ಕೆ ನಡೆದಿದ್ದಾರೆ. ಇವರು ಈ ಧಾರವಾಹಿ ಹಾಗೂ ಈ ಪಾತ್ರದಿಂದ ಹೊರಕ್ಕೆ ಬರಲು ಪ್ರಮುಖ ಕಾರಣ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಾರಂಭವಾಗಿರುವ ರಾಜಿ ಎನ್ನುವ ಧಾರವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇದೇ ಕಾರಣಕ್ಕಾಗಿ ಅವರು ಪುಟ್ಟಕ್ಕನ ಮಕ್ಕಳು ಧಾರವಾಹಿಯಿಂದ ಹೊರ ಬಂದಿದ್ದಾರೆ. ಇನ್ನು ಚಂದ್ರು ಪಾತ್ರವನ್ನು ನಂದೀಶ್ ರವರು ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಬದಲಾವಣೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.