ಕೋಟಿಗೊಬ್ಬ ನಿರ್ಮಾಪಕ ಅಂದು ಮಾಡಿದ ತಪ್ಪಿಗೆ ವಿಷ್ಣು ದಾದ ಅಸಮಾಧಾನಗೊಂಡಿದ್ದು ಯಾಕೆ ಗೊತ್ತೇ?? ನಿರ್ಮಾಪಕ ಸೂರಪ್ಪ ಬಾಬು ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರು ಜಂಟಲ್ ಮ್ಯಾನ್ ಆಗಿ ಗುರುತಿಸಿಕೊಂಡವರು. ಅದೆಷ್ಟು ನಿರ್ಮಾಪಕರಿಗೆ ಕಲಾವಿದರಿಗೆ ದೇವರಾಗಿ ಗುರುತಿಸಿಕೊಂಡವರು. ಇಂದು ನಾವು ಮಾತನಾಡಲು ಹೊರಟಿರುವುದು ಅಭಿನಯ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ರವರ ಸಿನಿಮಾ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಕೋಟಿಗೊಬ್ಬ ಸಿನಿಮಾದ ಕುರಿತಂತೆ. ಕೋಟಿಗೊಬ್ಬ ಸಿನಿಮಾ ಸೂರಪ್ಪ ಬಾಬು ನಿರ್ಮಾಣದಲ್ಲಿ ಹಾಗೂ ನಾಗಣ್ಣ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಸಿನಿಮಾ.

ಸಿನಿಮಾದಲ್ಲಿ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರು 2 ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ತಮಿಳು ಸೂಪರ್ ಸ್ಟಾರ್ ಆಗಿರುವ ರಜನಿಕಾಂತ್ ರವರ ಭಾಷಾ ಚಿತ್ರದ ರಿಮೇಕ್ ಆಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ ನಿಮಗೆ ಗೊತ್ತಾ ಗೆಳೆಯರೇ ಕೋಟಿಗೊಬ್ಬ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಾಗಿರುವ ಸೂರಪ್ಪ ಬಾಬು ಹಾಗೂ ನಿರ್ದೇಶಕ ನಾಗಣ್ಣ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ರವರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಯಾವ ವಿಚಾರಕ್ಕಾಗಿ ಎಂಬುದನ್ನು ತಿಳಿಯೋಣ ಬನ್ನಿ. ಕೋಟಿಗೊಬ್ಬ ಚಿತ್ರದ ಅವಧಿ 2.50 ಗಂಟೆಗಳ ಕಾಲ ಇತ್ತು.

vishnuvardhan 1 | ಕೋಟಿಗೊಬ್ಬ ನಿರ್ಮಾಪಕ ಅಂದು ಮಾಡಿದ ತಪ್ಪಿಗೆ ವಿಷ್ಣು ದಾದ ಅಸಮಾಧಾನಗೊಂಡಿದ್ದು ಯಾಕೆ ಗೊತ್ತೇ?? ನಿರ್ಮಾಪಕ ಸೂರಪ್ಪ ಬಾಬು ಮಾಡಿದ್ದೇನು ಗೊತ್ತೇ??
ಕೋಟಿಗೊಬ್ಬ ನಿರ್ಮಾಪಕ ಅಂದು ಮಾಡಿದ ತಪ್ಪಿಗೆ ವಿಷ್ಣು ದಾದ ಅಸಮಾಧಾನಗೊಂಡಿದ್ದು ಯಾಕೆ ಗೊತ್ತೇ?? ನಿರ್ಮಾಪಕ ಸೂರಪ್ಪ ಬಾಬು ಮಾಡಿದ್ದೇನು ಗೊತ್ತೇ?? 2

ಮೊದಲೇ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಅವರ ಕುಟುಂಬ ಯಾವುದೇ ಒಂದೇ ಒಂದು ದೃಶ್ಯವನ್ನು ಕೂಡ ಎಡಿಟ್ ಮಾಡಬಾರದು ಎನ್ನುವುದಾಗಿ ತಾಕೀತು ಮಾಡಿತ್ತು. ಆದರೆ ಮೊದಲ ಶೋ ನೋಡಿದ ಪ್ರೇಕ್ಷಕರು ಸಿನಿಮಾ ಕೊಂಚಮಟ್ಟಿಗೆ ಅವಧಿಗೂ ಮೀರಿದೆ ಎಂಬುದಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಲು ಆರಂಭಿಸುತ್ತಾರೆ. ಆಗ ಎಡಿಟರ್ ಅನ್ನು ಕರೆದುಕೊಂಡು ಹೋಗಿ ಸೂರಪ್ಪ ಬಾಬು ರವರು ಚಿತ್ರವನ್ನು ಇಂಟರ್ವಲ್ ಗೂ ಮುಂಚೆ ಹಾಗೂ ನಂತರ ಕೊಂಚಮಟ್ಟಿಗೆ ಟ್ರಿಮ್ ಮಾಡುತ್ತಾರೆ. ಇದನ್ನು ತಿಳಿದ ನಿರ್ದೇಶಕ ನಾಗಣ್ಣ ಹಾಗೂ ವಿಷ್ಣು ದಾದಾ ಸೂರಪ್ಪ ಬಾಬು ರವರನ್ನು ಕರೆಸಿ ಯಾಕೆ ಹೀಗೆ ಮಾಡಿದೆ ಎಂಬುದಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆಗ ಪ್ರೇಕ್ಷಕರು ವ್ಯಕ್ತಪಡಿಸಿದ ಅಭಿಪ್ರಾಯದ ಅನ್ವಯ ಹೇಗೆ ಮಾಡಿದ್ದೇನೆ ಎಂಬುದಾಗಿ ಹೇಳಿದ್ದನ್ನು ದಾದಾ ಚಿತ್ರದ ನೂರನೇ ದಿನದ ಶತಕದ ಸಂದರ್ಭದ ಸಂಭ್ರಮಾಚರಣೆಯಲ್ಲಿ ವಿಷ್ಣು ದಾದಾ ರವರು ಹೇಳಿಕೊಂಡಿದ್ದಾರೆ. ಇಂದಿಗೂ ಕೂಡ ಅಂತಹ ಕ್ಷಣಗಳು ಚಿರಸ್ಮರಣೀಯವಾಗಿದೆ.

Comments are closed.