Railway Jobs: ಲಿಖಿತ ಪರೀಕ್ಷೆ ಇಲ್ಲದೆ, ಕೆಲಸಗಾರರನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ- ಹೇಗೆ ಅರ್ಜಿ ಸಲ್ಲಿಸಿ ಕೆಲಸ ಪಡೆಯುವುದು ಗೊತ್ತೇ?

Railway Jobs: ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದುಕೊಂಡಿರುವವರಿಗೆ ಒಂದು ಒಳ್ಳೆಯ ಅವಕಾಶ ಈಗ ಸಿಕ್ಕಿದೆ. ಸೌತ್ ಸೆಂಟ್ರಲ್ ರೈಲ್ವೆಯಲ್ಲಿ ಖಾಲಿ ಇರುವ ಜ್ಯೂನಿಯರ್ ಟೆಕ್ನಿಕಲ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಈಗ ಅವಕಾಶ ನೀಡಲಾಗಿದೆ. ಈ ಹುದ್ದೆಯ ಅಧಿಕೃತ ಮಾಹಿತಿಗಾಗಿ, ಸೌತ್ ಸೆಂಟ್ರಲ್ ರೈಲ್ವೆಯ ಅಧಿಕೃತ ವೆಬ್ಸೈಟ್ ಗೆ http://scr.indianrailways.gov.in ಭೇಟಿ ನೀಡಿ. ಹುದ್ದೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ..

southern railway jobs kannada news | Railway Jobs: ಲಿಖಿತ ಪರೀಕ್ಷೆ ಇಲ್ಲದೆ, ಕೆಲಸಗಾರರನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ- ಹೇಗೆ ಅರ್ಜಿ ಸಲ್ಲಿಸಿ ಕೆಲಸ ಪಡೆಯುವುದು ಗೊತ್ತೇ?
Railway Jobs: ಲಿಖಿತ ಪರೀಕ್ಷೆ ಇಲ್ಲದೆ, ಕೆಲಸಗಾರರನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ- ಹೇಗೆ ಅರ್ಜಿ ಸಲ್ಲಿಸಿ ಕೆಲಸ ಪಡೆಯುವುದು ಗೊತ್ತೇ? 2

ಖಾಲಿ ಇರುವುದು ಜ್ಯೂನಿಯರ್ ಟೆಕ್ನಿಕಲ್ ಅಸಿಸ್ಟಂಟ್ ಹುದ್ದೆ, ಒಟ್ಟಾರೆಯಾಗಿ 35 ಹುದ್ದೆಗಳು ಖಾಲಿ ಇದೆ. ಇದರಲ್ಲಿ 19 ಸಿವಿಲ್ ಇಂಜಿನಿಯರಿಂಗ್ ಹುದ್ದೆಗಳು, 10 ಎಲೆಕ್ಟ್ರಿಕಲ್ (ಡ್ರಾಯಿಂಗ್) ಹುದ್ದೆ, 6 ಎಸ್&ಟಿ (ಡ್ರಾಯಿಂಗ್) ಹುದ್ದೆ. ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಮೆಕ್ಯಾನಿಕಲ್/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್ಸ್ ಇಂಜಿನಿಯರಿಂಗ್ ಮಾಡಿರಬೇಕು. ಇದನ್ನು ಓದಿ..Investment: ನೀವು ಚಿನ್ನ ಅಥವಾ ಭೂಮಿ ಮೇಲೆ ಹೂಡಿಕೆ ಮಾಡಬೇಕು ಎಂದು ಕೊಂಡಿದ್ದೀರಾ?? ಹಾಗಿದ್ರೆ ಇವೆರಡಲ್ಲಿ ಬೆಸ್ಟ್ ಯಾವುದು ಗೊತ್ತೇ?

ಅರ್ಜಿ ಸಲ್ಲಿಸುವವರಲ್ಲಿ ಜೆನೆರಲ್ ಕ್ಯಾಟಗರಿಯವರು ಮಿನಿಮಮ್ 60% ಸ್ಕೋರ್ ಮಾಡಿರಬೇಕು, SC/ST ಅಭ್ಯರ್ಥಿಗಳು 50% ಮಾರ್ಕ್ಸ್ ಸ್ಕೋರ್ ಮಾಡಿರಬೇಕು. ಈ ಕೆಲಸಕ್ಕೆ ಅಪ್ಲೈ ಮಾಡುವವರ ವಯೋಮಿತಿ ಬಗ್ಗೆ ಹೇಳುವುದಾದರೆ, 18 ರಿಂದ 33 ವರ್ಷದ ಒಳಗೆ ಇರಬೇಕು. ಓಬಿಸಿ ವರ್ಗದ ಅಭ್ಯರ್ಥಿಗಳಿಗೆ 36 ವರ್ಷದವರೆಗು ವಯೋಮಿತಿ ಸಡಿಲಿಕೆ ಇದೆ, SC/ST ಅಭ್ಯರ್ಥಿಗಳಿಗೆ 38 ವರ್ಷಗಳವರೆಗು ವಯೋಮಿತಿ ಸಡಿಲಿಕೆ ಇದೆ..

ಅಭ್ಯರ್ಥಿಯ ವ್ಯಕ್ತಿತ್ವ, ಅರ್ಹತೆ ಹಾಗೂ ಅನುಭವ ಈ ಎಲ್ಲದರ ಆಧಾರದ ಮೇಲೆ ಈ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಯಲ್ಲಿ ಕೆಲಸ ಪಡೆಯಲು ಯಾವುದೇ ಲಿಖಿತ ಪರೀಕ್ಷೆ ಇಲ್ಲ. ಕೆಲಸಕ್ಕೆ ಅಪ್ಲೈ ಮಾಡುವ ಎಲ್ಲಾ ಅಭ್ಯರ್ಥಿಗಳಿಗೆ 500 ರೂಪಾಯಿ ಅರ್ಜಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. SC/ST/OBC/ಹೆಣ್ಣುಮಕ್ಕಳು/ಅಲ್ಪ ಸಂಖ್ಯಾತರು ಹಾಗೂ EWS ವರ್ಗದ ವಿದ್ಯಾರ್ಥಿಗಳು 250 ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಇದನ್ನು ಓದಿ..Buying New Home: ಟೋಪಿ ಹಾಕುವ ಈ ಜಗತ್ತಿನಲ್ಲಿ, ಹೊಸ ಮನೆ ಖರೀದಿ ಮಾಡುವ ಮುನ್ನ ಈ ಚಿಕ್ಕ ವಿಷಯಗಳನ್ನು ತಿಳಿದುಕೊಂಡು ಲಕ್ಷ ಲಕ್ಷ ಉಳಿಸಿ. ಏನು ಗೊತ್ತೇ?

Comments are closed.