ಕೊನೆಗೂ ಕೂಡಿ ಬಂದಿದೆಯಂತೆ ರಕ್ಷಿತ್ ಶೆಟ್ಟಿ ರವರಿಗೆ ಕಂಕಣ ಭಾಗ್ಯ, ಚಾರ್ಲಿ ಕೈ ಹಿಡಿಯುವ ಅದೃಷ್ಟವಂತೆ ಯಾರಿರಬಹುದು?? ಒಬ್ಬರ ಹೆಸರು ಮಾತ್ರ ಕೇಳಿ ಬರುತ್ತಿದೆ.

ನಮಸ್ಕಾರ ಸ್ನೇಹಿತರೇ ಅದಕ್ಕೆ ರಕ್ಷಿತ್ ಶೆಟ್ಟಿಯವರು ಕನ್ನಡ ಚಿತ್ರರಂಗ ಕಂಡಂತಹ ಅದ್ಭುತ ಪ್ರತಿಭೆಗಳಲ್ಲಿ ಒಬ್ಬರು ಎಂದರೆ ಖಂಡಿತವಾಗಿ ತಪ್ಪಾಗಲಾರದು. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಒಬ್ಬ ನಾಯಕನಟನಾಗಿ ಒಬ್ಬ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ರಕ್ಷಿತ್ ಶೆಟ್ಟಿ ಅವರು ಅತಿ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿದ್ದಾರೆ. ಹೀಗಾಗಿ ಎಲ್ಲರಿಗೂ ರಕ್ಷಿತ್ ಶೆಟ್ಟಿ ಅವರೆಂದರೆ ಇಷ್ಟ.

ರಕ್ಷಿತ್ ಶೆಟ್ಟಿ ಅವರು ಈಗಾಗಲೇ ತಮ್ಮ 777 ಚಾರ್ಲಿ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಪಂಚಭಾಷೆ ಸಿನಿಮಾವಾಗಿ ಅವರ ಅವನೇ ಶ್ರೀಮನ್ನಾರಾಯಣ ಚಿತ್ರ ಈಗಾಗಲೇ ಹೆಸರನ್ನು ಗಳಿಸಿದೆ. ರಕ್ಷಿತ್ ಶೆಟ್ಟಿ ಅವರನ್ನು ಶಂಕರ್ ನಾಗ್ ರವರಿಗೆ ಹೋಲಿಸಲಾಗುತ್ತದೆ. ಅತಿ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿದವರು. ಮುಂದಿನ ದಿನಗಳಲ್ಲಿ ಕೂಡ ಹಲವಾರು ಸಿನಿಮಾಗಳನ್ನು ನಿರ್ದೇಶಕನಾಗಿ ನಿರ್ಮಾಪಕನಾಗಿ ಹಾಗೂ ನಾಯಕನಟನಾಗಿ ಕನ್ನಡ ಪ್ರೇಕ್ಷಕರು ಮೆಚ್ಚುವಂತಹ ಕಾರ್ಯವನ್ನು ಮಾಡುವುದರಲ್ಲಿ ಅನುಮಾನವೇ ಇಲ್ಲ.

rakshith shetty | ಕೊನೆಗೂ ಕೂಡಿ ಬಂದಿದೆಯಂತೆ ರಕ್ಷಿತ್ ಶೆಟ್ಟಿ ರವರಿಗೆ ಕಂಕಣ ಭಾಗ್ಯ, ಚಾರ್ಲಿ ಕೈ ಹಿಡಿಯುವ ಅದೃಷ್ಟವಂತೆ ಯಾರಿರಬಹುದು?? ಒಬ್ಬರ ಹೆಸರು ಮಾತ್ರ ಕೇಳಿ ಬರುತ್ತಿದೆ.
ಕೊನೆಗೂ ಕೂಡಿ ಬಂದಿದೆಯಂತೆ ರಕ್ಷಿತ್ ಶೆಟ್ಟಿ ರವರಿಗೆ ಕಂಕಣ ಭಾಗ್ಯ, ಚಾರ್ಲಿ ಕೈ ಹಿಡಿಯುವ ಅದೃಷ್ಟವಂತೆ ಯಾರಿರಬಹುದು?? ಒಬ್ಬರ ಹೆಸರು ಮಾತ್ರ ಕೇಳಿ ಬರುತ್ತಿದೆ. 2

ಪರಭಾಷ ಸಿನಿಮಾ ರಸಿಕರು ಕೂಡ ಈಗಾಗಲೇ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಮೇಕಿಂಗ್ ಶೈಲಿಗೆ ಮಾರು ಹೋಗಿದ್ದಾರೆ. ಇನ್ನು ಈಗ ನಾವು ಮಾತನಾಡಲು ಹೊರಟಿರುವುದು ಅವರ ಮದುವೆ ಕುರಿತಂತೆ. ಈಗಾಗಲೇ ರಶ್ಮಿಕ ಮಂದಣ್ಣ ನವರ ಜೊತೆಗೆ ಅವರ ಮದುವೆ ಮುರಿದು ಹೋಗಿದೆ. ಇತ್ತೀಚಿನ ದಿನಗಳಲ್ಲಿ ರಕ್ಷಿತ್ ಶೆಟ್ಟಿಯವರ ಮದುವೆ ಕುರಿತಂತೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಗಳು ಓಡಾಡುತ್ತಿವೆ. ಇದನ್ನ ಹೇಳ್ತಿರೋದು ಅವರಲ್ಲ ಬದಲಾಗಿ ಅವರ ಜ್ಯೋತಿಷಿ.

ಅವರ ಜ್ಯೋತಿಷ್ಯ ಇನ್ಯಾರೂ ಅಲ್ಲ ಅವರ ಪ್ರಾಣ ಸ್ನೇಹಿತನಾಗಿರುವ ರಿಷಬ್ ಶೆಟ್ಟಿ ಅವರ ತಂದೆ ಭಾಸ್ಕರ ಶೆಟ್ಟಿಯವರು. ಭಾಸ್ಕರ್ ಶೆಟ್ಟಿ ಅವರು ಖ್ಯಾತ ಜ್ಯೋತಿಷಿ ಗಳಾಗಿದ್ದಾರೆ. ಅವರ ಪ್ರಕಾರ ಏಪ್ರಿಲ್ 23ರಿಂದ ಗುರುಬಲ ಪ್ರಾರಂಭವಾಗಲಿದ್ದು ಇನ್ನು ಒಂದು ವರ್ಷದ ಒಳಗಡೆ ರಕ್ಷಿತ್ ಶೆಟ್ಟಿ ಅವರು ಮದುವೆಯಾಗಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಅಭಿಮಾನಿಗಳು ರಮ್ಯಾ ರವರನ್ನು ಮದುವೆಯಾಗಿ ಎಂಬುದಾಗಿ ರಕ್ಷಿತ್ ಶೆಟ್ಟಿ ಅವರಿಗೆ ಕೇಳುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಇತ್ತೀಚಿಗಷ್ಟೇ ಮಾರ್ಚ್ ತಿಂಗಳಲ್ಲಿ ರಮ್ಯಾರವರು ಒಂದು ಶುಭಸುದ್ದಿ ಹೇಳುವುದಾಗಿ ಹೇಳಿಕೊಂಡಿದ್ದರು ಅದು ಕೂಡ ಈ ವಿಚಾರಕ್ಕೆ ತಾಳೆ ಹಾಕಲಾಗುತ್ತಿದೆ. ಇವೆಲ್ಲದರ ತಾತ್ಪರ್ಯವನ್ನು ಇನ್ನು ನಾವು ಮುಂದಿನ ದಿನಗಳಲ್ಲಿ ನೋಡಬಹುದಾಗಿದೆ.

Comments are closed.