Film News: ತೆಲುಗು ಚಿತ್ರರಂಗದಲ್ಲಿ ಭುಗಿಲೆದ್ದ ಭಿನ್ನಮತ; ಅಲ್ಲೂ ಅರ್ಜುನ್ ವಿರುದ್ಧ ನೇರವಾಗಿ ತೊಡೆತಟ್ಟಿದ ರಾಮ್ ಚರಣ್. ಹುಟ್ಟುಹಬ್ಬದ ದಿನವೇ ತಿರುಗೇಟು. ಏನಾಗಿದೆ ಗೊತ್ತೇ?
Film News: ಒಂದು ಚಿತ್ರರಂಗ ಎಂದರೆ ಅಲ್ಲಿ ಕಲಾವಿದರ ನಡುವೆ ಪೈಪೋಟಿ ಇರುವುದು ಕಾಮನ್, ತೆಲುಗು ಚಿತ್ರರಂಗದಲ್ಲಿ ಕೂಡ ಹಾಗೆಯೇ ಇದೆ. ಸ್ಟಾರ್ ನಟರಾದ ಅಲ್ಲು ಅರ್ಜುನ್ ಹಾಗು ರಾಮ್ ಚರಣ್ ನಡುವೆ ಭಾರಿ ಪೈಪೋಟಿ ಇದೆ ಎಂದು ಎಲ್ಲರಿಗೂ ಅನ್ನಿಸಿತ್ತು, ಅದು ನಿಜವೇ ಇರಬಹುದು ಎನ್ನುವ ಹಾಗೆ ಒಂದರ ನಂತರ ಒಂದು ಘಟನೆಗಳು ನಡೆಯುತ್ತಿದೆ. ಇದೀಗ ನಟ ರಾಮ್ ಚರಣ್ (Ram Charan) ಅವರ ಅಲ್ಲು ಅರ್ಜುನ್ (Allu Arjun) ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ರೀತಿ ಅದನ್ನು ಸಾಬೀತು ಪಡಿಸುವ ಹಾಗಿದೆ..
ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಇಬ್ಬರು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ಹೀರೋಗಳು. ಇಬ್ಬರ ನಡುವೆ ಕೆರಿಯರ್ ನಲ್ಲಿ ಕಾಂಪಿಟೇಶನ್ ಇರುವುದು ಕಾಮನ್, ಆದರೆ ಇವರಿಬ್ಬರು ರಿಲೇಟಿವ್ ಗಳೇ ಆದರೂ, ಇಬ್ಬರ ನಡುವೆ ಪರ್ಸನಲ್ ಆಗಿ ಕೂಡ ಎಲ್ಲವೂ ಸರಿಯಿಲ್ಲ ಎನ್ನುವ ಹಾಗೆ ತೋರುತ್ತಿದೆ. ಅಲ್ಲು ಅರ್ಜುನ್ ಅವರು ನಿರ್ಮಾಪಕ ಅಲ್ಲು ಅರವಿಂದ್ (Allu Aravind) ಅವರ ಮಗ, ಅಲ್ಲು ಅರವಿಂದ್ ಅವರ ತಂಗಿ ಸುರೇಖಾ (Surekha Konidela) ಅವರನ್ನು ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರು ಮದುವೆಯಾಗಿದ್ದಾರೆ. ಚಿರಂಜೀವಿ ಮತ್ತು ಸುರೇಖಾ ಅವರ ಮಗ ರಾಮ್ ಚರಣ್.
ಹೀಗೆ, ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಅವರ ನಡುವೆ ಬಹಳ ಹತ್ತಿರದ ಸಂಬಂಧ ಇದ್ದರು ಸಹ, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಆಗಾಗ ಅನ್ನಿಸುತ್ತದೆ. ಏಕೆಂದರೆ, ರಾಮ್ ಚರಣ್ ಅವರ ಹುಟ್ಟುಹಬ್ಬದಂದು ಅಲ್ಲು ಅರ್ಜುನ್ ಅವರು ವಿಶ್ ಮಾಡುವುದನ್ನೇ ಮರೆತಿದ್ದರು, ಆದರೆ ಮರುದಿನ ತಾವು ಇಂಡಸ್ಟ್ರಿಗೆ ಬಂದು 20 ವರ್ಷ ಆಗಿದ್ದಕ್ಕೆ ಸ್ಪೆಷಲ್ ಪೋಸ್ಟ್ ಮಾಡಿದ್ದರು. ನಿನ್ನೆಯಷ್ಟೇ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ ನಡೆದಿದೆ. ಈ ದಿನ ರಾಮ್ ಚರಣ್ ಅವರು ಅಲ್ಲು ಅರ್ಜುನ್ ಅವರ ಹಾಗೆ ಮಾಡದೆ, ಬರ್ತ್ ಡೇಗೆ ವಿಶ್ ಮಾಡಿದ್ದಾರೆ.
ಆದರೆ ಯಾವುದೇ ಫೋಟೋ ಶೇರ್ ಮಾಡದೆ ಬರ್ತ್ ಡೇ ವಿಶ್ ಮಾತ್ರ ಮಾಡಿದ್ದಾರೆ. ಆದರೆ ಅದೇ ದಿನ ದಿನ ಅಕ್ಕಿನೇನಿ ಅಖಿಲ್ ಅವರ ಹುಟ್ಟುಹಬ್ಬಕ್ಕೆ ಜೊತೆಗಿರುವ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ, ಅಲ್ಲು ಅರ್ಜುನ್ ಅವರ ಜೊತೆಗಿರುವ ಫೋಟೋ ಶೇರ್ ಮಾಡಿ ವಿಶ್ ಮಾಡಬಹುದಿತ್ತು ಎಂದು ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಆದರೆ ನೆಟ್ಟಿಗರು ಮಾತ್ರ, ರಾಮ್ ಚರಣ್ ಅವರು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇದೆಲ್ಲವನ್ನು ನೋಡಿದರೆ, ಇವರಿಬ್ಬರ ನಡುವೆ ಎಲ್ಲವೂ ಸರಿಯಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
Comments are closed.