ಮೊದಲನೇ ಬಾರಿಗೆ ಸೋಲಿನ ರುಚಿ ನೋಡಿದ ರಶ್ಮಿಕಾ ಮಂದಣ್ಣ, ಅದರಲ್ಲಿಯೂ ಕನ್ನಡಿಗರದ್ದೆ ಬಹುಪಾಲು, ಅಷ್ಟಕ್ಕೂ ನಡೆದದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇಂದಿನ ಜನರೇಷನ್ ನಲ್ಲಿ ಯಾವುದೇ ಸೋಲಿಲ್ಲದೆ ಪ್ರತಿಯೊಂದು ಸಿನಿಮಾಗಳಿಂದ ಯಶಸ್ಸನ್ನು ಕಾಣುತ್ತಿರುವ ಏಕೈಕ ಸೆಲೆಬ್ರಿಟಿ ಎಂದರೆ ಅದು ಕನ್ನಡ ಮೂಲದ ರಶ್ಮಿಕ ಯಾವುದೇ ಅನುಮಾನವಿಲ್ಲದೇ ಒಪ್ಪಿಕೊಳ್ಳಬಹುದಾಗಿದೆ. ರಶ್ಮಿಕ ಮಂದಣ್ಣ ನಟಿಸಿರುವ ಪ್ರತಿಯೊಂದು ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ನಿರೀಕ್ಷೆಗೂ ಮೀರಿದ ವಿಜಯವನ್ನು ಬಾಕ್ಸಾಫೀಸ್ ನಲ್ಲಿ ಸಾಧಿಸುತ್ತಿವೆ.
ಈ ಕಾರಣದಿಂದಲೇ ಎಲ್ಲಾ ಸಿನಿಮಾಗಳಲ್ಲಿ ಕೂಡ ಅವರನ್ನೇ ನಾಯಕಿಯನ್ನಾಗಿ ಹಾಕಿಕೊಳ್ಳಲು ನಿರ್ಮಾಪಕ ಹಾಗೂ ನಿರ್ದೇಶಕರು ಮುಂದೆ ಬರುತ್ತಿದ್ದಾರೆ. ಇತ್ತೀಚಿಗಷ್ಟೇ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಪಂಚಭಾಷಾ ಲೆವೆಲ್ ನಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿತು. ಇಲ್ಲಿಯವರೆಗೆ ರಶ್ಮಿಕ ಮಂದಣ್ಣ ಅವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಾಗಿತ್ತು. ಆದರೆ ಈಗ ಮೊತ್ತಮೊದಲಬಾರಿಗೆ ಅಂದರೆ 13 ಸಿನಿಮಾಗಳ ನಂತರ 14ನೆ ಸಿನಿಮಾ ಆಗಿರುವ ಅಡವಾಳ್ಳು ಮೀಕು ಜೋಹರ್ಲು ಸಿನಿಮಾ ಸೋತಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಇದಕ್ಕೆ ಪ್ರಮುಖ ಕಾರಣ ಕೂಡ ಕನ್ನಡಿಗರ ಎಂಬುದಾಗಿ ಕೂಡ ಕೇಳಿಬಂದಿದೆ.
ಹೌದು ಗೆಳೆಯರೇ ಈ ಚಿತ್ರ ಬಿಡುಗಡೆಯಾದ ನಂತರ ನೀರಸ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ ಎಂಬುದಾಗಿ ಎಲ್ಲರೂ ಹೇಳುತ್ತಿದ್ದಾರೆ. ಇದು ಮೊದಲ ದಿನ ಗಳಿಸಿರುವುದು 3.60 ಕೋಟಿ ಮಾತ್ರವಂತೆ. ಸಾಮಾನ್ಯವಾಗಿ ತೆಲುಗಿನ ಸಿನೆಮಾಗೆ ಅದು ಕಡಿಮೇನೆ, ಅದರಲ್ಲೂ ಇದು ಕರ್ನಾಟಕಕ್ಕೆ 1.60 ಕೋಟಿಗೆ ಸೇಲ್ ಆಗಿತ್ತು. ಆದರೆ ಮೊದಲ ದಿನ ಕರ್ನಾಟಕದಲ್ಲಿ ಗಳಿಸಿದ್ದು ಕೇವಲ 12 ಲಕ್ಷ ಮಾತ್ರ. ರಶ್ಮಿಕ ಮಂದಣ್ಣ ನವರ ಮಾರುಕಟ್ಟೆ ಕೂಡ ಈ ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಕನ್ನಡಿಗರು ರಶ್ಮಿಕ ಮಂದಣ್ಣ ನವರ ಕನ್ನಡದ ಕುರಿತಂತೆ ಇರುವ ನಿರ್ಲಕ್ಷ ಭಾವನೆಯ ವಿರುದ್ಧ ತೋರಿಸಿರುವ ಫಲಿತಾಂಶ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಈ ಚಿತ್ರದ ಮೂಲಕ ರಶ್ಮಿಕ ಮಂದಣ್ಣ ಮೊದಲಬಾರಿಗೆ ಸೋಲುಂಡಿದ್ದಾರೆ.
Comments are closed.