ಕೋಟಿ ಕೋಟಿ ಸಂಭಾವನೆ ಹೆಚ್ಚು ಕೇಳಿದ್ದ ರಶ್ಮಿಕಾ ರವರಿಗೆ ಮತ್ತೊಂದು ಶಾಕ್ ನೀಡಿದ ಪುಷ್ಪ ನಿರ್ದೇಶಕ: ಲೀಕ್ ಆದ ಸುದ್ದಿಯೇನು ಗೊತ್ತೇ?

ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಇತ್ತೀಚಿನ ಸಿನಿಮಾ ಪುಷ್ಪ. ಈ ಸಿನಿಮಾ ಎಷ್ಟು ದೊಡ್ಡ ಹಿಟ್ ಆಯಿತು ಎಂದು ಹೇಳಬೇಕಾಗಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತೆರೆಕಂಡಿದ್ದ ಪುಷ್ಪ ಸಿನಿಮಾ ಬಾಕ್ಸ್‌ ಆಫೀಸ್‌ ಅಲ್ಲೋಲಕಲ್ಲೋಲ ಮಾಡಿತ್ತು. ಈ ಸಿನಿಮಾ ತೆಲುಗು ರಾಜ್ಯಗಳಲ್ಲಿ ಬ್ಲಾಕ್ ಬಸ್ಟರ್ ಆಯಿತು, ಬಾಲಿವುಡ್ ನಲ್ಲಿ ಸಹ 100 ಕೋಟಿ ಹಣಗಳಿಕೆ ಮಾಡಿತು. ವಿಶ್ವಾದ್ಯಂತ 365 ಕೋಟಿ ರೂಪಾಯಿಗಳನ್ನು ಗಳಿಸಿ, ಆ ಸಮಯದಲ್ಲಿ ಅತಿ ಹೆಚ್ಚು ಹಣಗಳಿಕೆ ಮಾಡಿದ ಭಾರತೀಯ ಸಿನಿಮಾಗಳಲ್ಲಿ ಅಗ್ರಸ್ಥಾನ ಪಡೆಯಿತು..

ಈ ಸಿನಿಮಾದಲ್ಲಿ, ಅಲ್ಲು ಅರ್ಜುನ್ ಅವರ ‘ಪುಷ್ಪ ರಾಜ್’ ಮ್ಯಾನರಿಸಂ ಇನ್ನೂ ಟ್ರೆಂಡಿಂಗ್ ಆಗಿದೆ. ಪುಷ್ಪ ಸಿನಿಮಾ ನಿರ್ದೇಶಕರು ಈಗಾಗಲೇ ಮತ್ತೊಂದು ಸೀಕ್ವೆಲ್ ಘೋಷಣೆ ಮಾಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಮೊದಲ ಭಾಗ 2021ರ ಡಿಸೆಂಬರ್ 14 ರಂದು ಬಿಡುಗಡೆಯಾಗಿದ್ದು, ಸದ್ಯದಲ್ಲೇ ಎರಡನೇ ಭಾಗದ ಆ ಭಾಗದ ಚಿತ್ರೀಕರಣವೂ ಆರಂಭವಾಗಲಿದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಇದೀಗ ಪುಷ್ಪ2 ಅಪ್ಡೇಟ್ಸ್ ಬಗ್ಗೆ ಹೊಸ ಮಾಹಿತಿ ಸಿಕ್ಕಿದ್ದು, ಇದರಿಂದಾಗಿ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಕೆಜಿಎಫ್2 ಬಳಿಕ ಪುಷ್ಪ2 ಸಿನಿಮಾದ ಸ್ಕ್ರೀನ್ ಪ್ಲೇ ಮತ್ತು ಡೈಲಾಗ್ ಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ.

pushpa2 rashmika | ಕೋಟಿ ಕೋಟಿ ಸಂಭಾವನೆ ಹೆಚ್ಚು ಕೇಳಿದ್ದ ರಶ್ಮಿಕಾ ರವರಿಗೆ ಮತ್ತೊಂದು ಶಾಕ್ ನೀಡಿದ ಪುಷ್ಪ ನಿರ್ದೇಶಕ: ಲೀಕ್ ಆದ ಸುದ್ದಿಯೇನು ಗೊತ್ತೇ?
ಕೋಟಿ ಕೋಟಿ ಸಂಭಾವನೆ ಹೆಚ್ಚು ಕೇಳಿದ್ದ ರಶ್ಮಿಕಾ ರವರಿಗೆ ಮತ್ತೊಂದು ಶಾಕ್ ನೀಡಿದ ಪುಷ್ಪ ನಿರ್ದೇಶಕ: ಲೀಕ್ ಆದ ಸುದ್ದಿಯೇನು ಗೊತ್ತೇ? 2

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಪುಷ್ಪ2 ಸಿನಿಮಾದಲ್ಲಿ ರಶ್ಮಿಕಾ ಅವರ ಶ್ರೀವಲ್ಲಿ ಪಾತ್ರವನ್ನು ಕತ್ತರಿಸಲಾಗಿದೆ ಎಣ್ಣುಗ ಮಾಹಿತಿ ಸಿಕ್ಕಿದೆ. ಮೊದಲ ಭಾಗದಲ್ಲಿ ಶ್ರೀವಲ್ಲಿ ಮತ್ತು ಪುಷ್ಪರಾಜ್ ಗೆ ಮದುವೆ ಆಗಿರುತ್ತದೆ, ಎರಡನೇ ಭಾಗದಲ್ಲಿ ಪುಷ್ಪರಾಜ್ ಹೆಂಡತಿ ಪಾತ್ರದಲ್ಲಿ ಶ್ರೀವಲ್ಲೂ ಮುಂದುವರೆಯಲಿದ್ದು, ಆದರೆ ಶ್ರೀವಲ್ಲಿ ಪಾತ್ರ ಹೆಚ್ಚಿನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಪುಷ್ಪರಾಜ್ ಹೇಗೆ ಬೆಳೆಯುತ್ತಾನೆ ಎನ್ನುವುದರ ಬಗ್ಗೆ ಹೆಚ್ಚಾಗಿ ತೋರಿಸಲಾಗುತ್ತದೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಎರಡನೇ ಭಾಗದಲ್ಲಿ ಶ್ರೀವಲ್ಲಿ ಪಾತ್ರ ಸತ್ತು ಹೋಗಲಿದ್ದು, ಅದರಿಂದಾಗಿ ಸಿನಿಮಾದಲ್ಲಿ ಹೀರೋ ವಿಲ್ಲನ್ ಗಳ ನಡುವೆ ದೊಡ್ಡ ಫೈಟ್ ಗಳು ನಡೆಯುತ್ತವೆ ಎನ್ನುವುದು ಸಹ ತಿಳಿದುಬಂದಿದೆ. ಒಟ್ಟಿನಲ್ಲಿ ಈ ಸ್ಟೋರಿ ಲೈನ್ ಇಂದ ರಶ್ಮಿಕಾ ಅಭಿಮಾನಿಗಳಿಗೆ ಮಾತ್ರ ನಿರಾಶೆಯಾಗಿದೆ.

Comments are closed.