ಲಕ್ಷ್ಮಿ ರವರ ಮಗಳಿಗೆ ಇದೆಂತಹ ಪರಿಸ್ಥಿತಿ. ಟಾಯ್ಲೆಟ್ ತೊಳೆಯುವುದಕ್ಕೂ ನಾನು ಸಿದ್ದ ಎಂದು ಬೀದಿಯಲ್ಲೂ ಸೋಪು ಮಾರುತ್ತಿರುವುದು ಯಾಕೆ ಗೊತ್ತೇ?

ಬಂಡಿಗಳು ಹಡಗುಗಳಾಗುತ್ತವೆ.. ಹಡಗುಗಳು ಮತ್ತೆ ಬಂಡಿಗಳು ಆಗುತ್ತವೆ ಎನ್ನುವ ಗಾದೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಆ ಗಾದೆ ಮಾತಿಗೆ ನಿಜವೆ ಎನ್ನುವ ಹಾಗೆ ಕೆಲವು ಜೀವಗಳು ತಲೆಕೆಳಗಾಗಿವೆ. ಹಿರಿಯನಟಿ ಲಕ್ಷ್ಮಿ ಅವರ ಮಗಳು ಐಶ್ವರ್ಯಾ ಭಾಸ್ಕರನ್ ಮೂರು ದಿನವಾದರೂ ಸರಿಯಾಗಿ ಊಟ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಎಂದರೆ ನೀವು ನಂಬುತ್ತೀರಾ? ಈ ಸ್ಟಾರ್ ನಟಿ ಸಮಯ ಕಳೆಯಲು ಮನೆಗಳಿಗೆ ಹೋಗಿ ಸೋಪ್ ಮಾರುವ ಸೇಲ್ಸ್ ಗರ್ಲ್ ಆಗಿ ಬದಲಾದುದನ್ನು ನೀವು ಕೇಳಿರಬಹುದು. ಆದರೆ ಈ ಮಾತನ್ನು ಸ್ವತಃ ತಾವೇ ಹೇಳಿಕೊಂಡಾಗ ಎಲ್ಲರೂ ಶಾಕ್ ಆಗಿರುವುದು ನಿಜ.

ಅಂತಹ ಪರಿಸ್ಥಿತಿ ಬಂದಿದ್ದು ಯಾಕೆ.. ಐಶ್ವರ್ಯಾ ಭಾಸ್ಕರನ್ ಅವರು ಒಂದು ಕಾಲದಲ್ಲಿ ಸ್ಟಾರ್ ಸ್ಟೇಟಸ್ ಹೊಂದಿದ್ದ ನಟಿ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹೀಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸುಮಾರು 100 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೋಹನ್ ಲಾಲ್ ಅವರಂತಹ ಸೂಪರ್ ಸ್ಟಾರ್ ಎದುರು ನಾಯಕಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ನಟಿ ಲಕ್ಷ್ಮಿ ಅವರ ಮಗಳಗೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಐಶ್ವರ್ಯಾ ಭಾಸ್ಕರನ್ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಅವರು 1989 ರಲ್ಲಿ ‘ಅಡವಿಲೋ ಅಭಿಮನ್ಯುಡು’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

aishwarya bhaskaran | ಲಕ್ಷ್ಮಿ ರವರ ಮಗಳಿಗೆ ಇದೆಂತಹ ಪರಿಸ್ಥಿತಿ. ಟಾಯ್ಲೆಟ್ ತೊಳೆಯುವುದಕ್ಕೂ ನಾನು ಸಿದ್ದ ಎಂದು ಬೀದಿಯಲ್ಲೂ ಸೋಪು ಮಾರುತ್ತಿರುವುದು ಯಾಕೆ ಗೊತ್ತೇ?
ಲಕ್ಷ್ಮಿ ರವರ ಮಗಳಿಗೆ ಇದೆಂತಹ ಪರಿಸ್ಥಿತಿ. ಟಾಯ್ಲೆಟ್ ತೊಳೆಯುವುದಕ್ಕೂ ನಾನು ಸಿದ್ದ ಎಂದು ಬೀದಿಯಲ್ಲೂ ಸೋಪು ಮಾರುತ್ತಿರುವುದು ಯಾಕೆ ಗೊತ್ತೇ? 2

ಆ ನಂತರ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಸಿನಿಮಾ ಮಾಡಿದರು. ಈ ಜರ್ನಿಯಲ್ಲಿ ಅವರು ಮೋಹನ್‌ಲಾಲ್‌ನಂತಹ ಸ್ಟಾರ್‌ಗಳ ಎದುರು ನಟಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಸುಮಾರು 100 ಚಲನಚಿತ್ರಗಳನ್ನು ಮಾಡಿದರು ಸಹ ಅದು ಅವರಿಗೆ ಆರ್ಥಿಕವಾಗಿ ಲಾಭದಾಯಕವಾಗಿರಲಿಲ್ಲ. ಇತ್ತೀಚೆಗೆ ತಮಿಳು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. “ಸಧ್ಯಕ್ಕೆ ನನಗೆ ನನಗೆ ಕೆಲಸವಿಲ್ಲ, ಹಣವಿಲ್ಲ, ಸಾಲವೂ ಇಲ್ಲ ನಾನು ಬೀದಿಯಲ್ಲಿ ಸಾಬೂನು ಮಾರಿಕೊಂಡು ಜೀವನ ಸಾಗಿಸುತ್ತಿದ್ದೇನೆ. ನನಗುಡ್ಡ ಒಬ್ಬಳೇ ಮಗಳು ಮದುವೆಯಾಗಿ ಹೋದಳು. ಈಗ ನನ್ನ ಕುಟುಂಬದಲ್ಲಿ ನಾನೊಬ್ಬಳೇ. ಸದ್ಯದ ಪರಿಸ್ಥಿತಿಯಲ್ಲಿ ನಾನು ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ.

ನಾಳೆ ನಿಮ್ಮ ಕಛೇರಿಯಲ್ಲಿ ಕೆಲಸ ಕೊಟ್ಟರೆ ಖಂಡಿತಾ ಬಂದು ಮಾಡುತ್ತೇನೆ. ಅಗತ್ಯ ಬಿದ್ದರೆ ಶೌಚಾಲಯವನ್ನೂ ಸ್ವಚ್ಛಗೊಳಿಸುತ್ತೇನೆ” ಎಂದು ಐಶ್ವರ್ಯಾ ತಮ್ಮ ಪರಿಸ್ಥಿತಿ ವಿವರಿಸಿದರು. “ನಾನು ನಟನೆ ಆರಂಭಿಸಿದಾಗ ಮೂರು ವರ್ಷ ನನ್ನ ವೃತ್ತಿಜೀವನ ಚೆನ್ನಾಗಿ ಸಾಗಿತ್ತು, ಬಳಿಕ ನನ್ನ ಮದುವೆಯಾಯಿತು. ಆ ನಂತರ ಕ್ರಮೇಣ ಚಿತ್ರರಂಗದಿಂದ ದೂರವಾಗಬೇಕಾಯಿತು. ನಾಯಕಿಯಾಗಿ ಎಲ್ಲರಿಗೂ ಸೆಕೆಂಡ್ ಇನ್ನಿಂಗ್ಸ್ ಸಿಗುವುದಿಲ್ಲ. ಸದ್ಯ ನಾನು ಸ್ವಾತಂತ್ರ್ಯವಾಗಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದೇನೆ ಮತ್ತು ಸಾಬೂನುಗಳನ್ನು ಮಾರಾಟ ಮಾಡುತ್ತಿದ್ದೇನೆ. ನಾನು ಸ್ವತಂತ್ರಳಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಆದರೆ ನಾನು ಆರ್ಥಿಕವಾಗಿ ಸಬಲಳಾಗಬೇಕಾದರೆ ನನಗೆ ಈಗ ಮೆಗಾ ಸೀರಿಯಲ್ ಆಫರ್ ಬೇಕು, ”ಎಂದು ಐಶ್ವರ್ಯಾ ಹೇಳಿದ್ದಾರೆ.

Comments are closed.