ಅದ್ದೂರಿಯಾಗಿ ಮಗನ ಮದುವೆ ಮಾಡಿದ ಬೆನ್ನಲ್ಲೇ ಮನೆ ಖಾಲಿ ಮಾಡಿದ ರವಿಚಂದ್ರನ್, ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ನಮ್ಮ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಅಂದಿನ ಕಾಲದಲ್ಲಿ ರೋಮ್ಯಾಂಟಿಕ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಪ್ರೇಮಿಗಳಿಗೆ ಯಾವ ರೀತಿ ಮೋಡಿ ಮಾಡಿದ್ದರು ಎಂಬುದನ್ನು ವಿಶೇಷವಾಗಿ ನಿಮಗೆ ಹೇಳಬೇಕಾಗಿಲ್ಲ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಗೆಲುವುಗಳನ್ನು ಸಾಧಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಇತ್ತೀಚಿನ ವರ್ಷಗಳಲ್ಲಿ ಒಂದರ ಮೇಲೊಂದು ಸೋಲುಗಳನ್ನು ಕಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ನಟ ಹಾಗೂ ನಿರ್ಮಾಪಕನಾಗಿ ಬಹುತೇಕ ಎಲ್ಲಾ ಫೀಲ್ಡ್ ನಲ್ಲಿಯೂ ಕೂಡ ತಂತ್ರಜ್ಞನಾಗಿ ಕಾಣಿಸಿಕೊಂಡಿರುವ ರವಿಚಂದ್ರನ್ ರವರು ಕನ್ನಡ ಚಿತ್ರರಂಗದ ಒಬ್ಬ ವಿಶೇಷ ಪ್ರತಿಭೆ ಎಂದರೆ ತಪ್ಪಾಗಲಾರದು. ಸೋಲು ಹಾಗೂ ಗೆಲುವುಗಳನ್ನು ಕ್ರೇಜಿಸ್ಟಾರ್ ರವಿಚಂದ್ರನ್ ರವರು ಸಮಾನವಾಗಿ ಸ್ವೀಕರಿಸಿದ್ದು ಗೆದ್ದರೂ ಹಿಗ್ಗದ ಸೋತರು ಕುಗ್ಗದ ಕನಸುಗಾರನಂತೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ರಾಜಾಜಿನಗರದ ಹೊಸ ಮನೆಗೆ ಶಿಫ್ಟ್ ಆದಾಗ ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಇದರ ನಿಜವಾದ ರಹಸ್ಯ ಈಗ ಎಲ್ಲರ ಮುಂದೆ ಬಹಿರಂಗವಾಗಿದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗನ ಮದುವೆ ಆದ ತಕ್ಷಣವೇ ರಾಜಾಜಿನಗರದ ಮನೆಯಿಂದ ಹೊಸ ಮನೆಗೆ ಶಿಫ್ಟ್ ಆಗಬೇಕಾಗಿತ್ತು ಆದರೆ ಸ್ವಲ್ಪ ಸಮಯ ಇಲ್ಲೇ ಇರೋಣ ಎಂಬುದಾಗಿ ರವಿಚಂದ್ರನ್ ಭಾವಿಸಿದ್ದರು. ಅವರ ತಾಯಿ ಪಟ್ಟಮ್ಮಾಳ್ ಕೂಡ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಹಾಗೂ ರಾಜಾಜಿನಗರದ ಮನೆ ಕೂಡ ವಾಸ್ತು ಪ್ರಕಾರ ಸರಿ ಇಲ್ಲದ ಹಿನ್ನೆಲೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ ಎಂಬುದಾಗಿ ಈಗ ಸತ್ಯ ಬಯಲಾಗಿದೆ. ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಇನ್ನಿತರ ಸಮಸ್ಯೆಯಿಂದಾಗಿ ಮನೆಯನ್ನು ಬದಲಾಯಿಸಿಲ್ಲ ಎಂಬುದು ತಿಳಿದು ಬರುತ್ತದೆ.
Comments are closed.