ದಸರಾಗೆ ಬಂದ ರಾಷ್ಟ್ರಪತಿ ಮುರ್ಮು ರವರಿಗೆ ಕರುನಾಡಿನ ಅಮ್ಮ ಸುಧಾಮೂರ್ತಿ ರವರು ಕೊಟ್ಟ ಸೀರೆ ಬೆಲೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ದಸರಾ ಸಂಭ್ರಮಾಚರಣೆಗೆ ಉದ್ಘಾಟನೆ ನಮ್ಮ ರಾಷ್ಟ್ರದ ರಾಷ್ಟ್ರಪತಿಗಳಾಗಿರುವ ದ್ರೌಪದಿ ಮುರ್ಮು ಅವರಿಂದ ಸಿಕ್ಕಿದೆ. ಇತ್ತೀಚಿಗಷ್ಟೇ ರಾಷ್ಟ್ರಪತಿ ಆಗಿ ಆಯ್ಕೆ ಆಗಿರುವ ಬುಡಕಟ್ಟು ಜನಾಂಗದ ಮೊದಲ ಮಹಿಳಾ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು ಅವರ ಜನಪ್ರಿಯತೆ ಎಲ್ಲಾ ಕಡೆ ಹರಡಿದೆ.

ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಮೈಸೂರು ದಸರಾ ಸಂಭ್ರಮಾಚರಣೆ ಎನ್ನುವುದು ಕೇವಲ ನಮ್ಮ ನಾಡಿಗೆ ಮಾತ್ರವಲ್ಲದೆ ದೇಶ ವಿದೇಶಗಳಿಂದ ಪ್ರವಾಸಿಗರು ಲಕ್ಷಾದ ಸಂಖ್ಯೆಯಲ್ಲಿ ಹರಿದುಬರುವ ಪ್ರವಾಸಿಗರಿಗೂ ಕೂಡ ಅವರ ಮನೆಯ ಹಬ್ಬವೇ ಎನ್ನುವಂತ‌ಹ ಮಟ್ಟಿಗೆ ಸಂತೋಷ ಹಾಗೂ ಸಡಗರವನ್ನು ನೀಡುತ್ತದೆ. ಇನ್ನು ರಾಷ್ಟ್ರಪತಿಗಳಾಗಿರುವ ದ್ರೌಪದಿ ಮುರ್ಮು ಅವರನ್ನು ನಮ್ಮ ಕನ್ನಡ ನಾಡಿನ ಹೆಮ್ಮೆಯ ಕನ್ನಡತಿ ಹಾಗೂ ಕನ್ನಡಿಗರ ನೆಚ್ಚಿನ ಅಮ್ಮ ಆಗಿರುವ ಇನ್ಫೋಸಿಸ್ ಫೌಂಡೇಶನ್ ನ ಮುಖ್ಯಸ್ಥೆ ಆಗಿರುವ ಡಾ ಸುಧಾ ಮೂರ್ತಿ ಅಮ್ಮನವರು ಸ್ವಾಗತಿಸಿದ್ದಾರೆ. ರಾಷ್ಟ್ರಪತಿಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ಸುಧಾ ಮೂರ್ತಿ ಅಮ್ಮನವರು ಇಳಕಲ್ ಸೀರೆಯನ್ನು ನೀಡಿ ಸ್ವಾಗತಿಸಿರುವುದು ಮತ್ತೊಂದು ವಿಶೇಷವಾಗಿದೆ.

sudamurthy gift to presiden | ದಸರಾಗೆ ಬಂದ ರಾಷ್ಟ್ರಪತಿ ಮುರ್ಮು ರವರಿಗೆ ಕರುನಾಡಿನ ಅಮ್ಮ ಸುಧಾಮೂರ್ತಿ ರವರು ಕೊಟ್ಟ ಸೀರೆ ಬೆಲೆ ಎಷ್ಟು ಗೊತ್ತೇ??
ದಸರಾಗೆ ಬಂದ ರಾಷ್ಟ್ರಪತಿ ಮುರ್ಮು ರವರಿಗೆ ಕರುನಾಡಿನ ಅಮ್ಮ ಸುಧಾಮೂರ್ತಿ ರವರು ಕೊಟ್ಟ ಸೀರೆ ಬೆಲೆ ಎಷ್ಟು ಗೊತ್ತೇ?? 2

ಸುಧಾ ಮೂರ್ತಿ ಅಮ್ಮ ನೀಡಿರುವ ಇಳಕಲ್ ಸೀರೆಯನ್ನು ಉಟ್ಟುಕೊಂಡು ರಾಷ್ಟ್ರಪತಿಗಳಾಗಿರುವ ದ್ರೌಪದಿ ಮುರ್ಮು ದಸರಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದ್ರೌಪದಿ ಮುರ್ಮುರವರು ಧರಿಸಿರುವ ಕನ್ನಡದ ಸಾಂಸ್ಕೃತಿಕ ಸೀರೆ ಆಗಿರುವ ಇಳಕಲ್ ಸೀರೆಯ ಬೆಲೆ ಎಷ್ಟು ಎನ್ನುವುದರ ಕುರಿತಂತೆ ಚರ್ಚೆ ನಡೆಯುತ್ತಿದೆ. ನಮ್ಮ ಕರ್ನಾಟಕದಲ್ಲಿ ತಯಾರಾಗುವ ಈ ಪಾರಂಪರಿಕ ಸೀರೆಯ ಬೆಲೆ 500 ರೂಪಾಯಿ ಇಂದ ಪ್ರಾರಂಭವಾಗಿ 7,000 ವರೆಗೂ ಇರುತ್ತದೆ. ಒಟ್ಟಾರೆಯಾಗಿ ನಮ್ಮ ಕನ್ನಡ ಸಂಸ್ಕೃತಿಯ ಪ್ರತಿಕವಾಗಿರುವ ಇಳಕಲ್ ಸೀರೆಯನ್ನು ಹುಟ್ಟುಕೊಂಡ ನಮ್ಮ ರಾಷ್ಟ್ರದ ಪ್ರಥಮ ಪ್ರಜೆ ಆಗಿರುವ ದ್ರೌಪದಿ ಮುರ್ಮು ಅವರು ಎಲ್ಲರ ಗಮನ ಸೆಳೆದಿದ್ದಂತು ನಿಜ.

Comments are closed.