ಆರ್ಸಿಬಿಯ ರಾಕ್ ಸ್ಟಾರ್, ಆರ್ಸಿಬಿ ಇಂತವರೇ ಬೇಕಿರೋದು. ಈತ ಮಿಂಚುತ್ತಿರುವುದು ನೋಡಿದರೆ, ನೀವು ಬೇಕು ಅಂತೀರಾ.

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ವರ್ಷಗಳಿಂದಲೂ ಕೂಡ ಕಪ್ ಗೆಲ್ಲುವ ಭರವಸೆಯನ್ನು ಮೂಡಿಸುತ್ತಲೇ ಇದೆ. ಸಾಕಷ್ಟು ವರ್ಷಗಳಿಂದ ಕಪ್ ಗೆಲ್ಲದಿದ್ದರೂ ಕೂಡ ಒಬ್ಬೇ ಒಬ್ಬ ಅಭಿಮಾನಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದುಕೊಳ್ಳಲ್ಲ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಈ ವರ್ಷವೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಹುತೇಕ ಖಂಡಿತವಾಗಿ ಕಪ್ ಗೆಲ್ಲುತ್ತದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿ ಕೊಳ್ಳುವಷ್ಟರ ಮಟ್ಟಿಗೆ ಅತ್ಯುತ್ತಮ ಪ್ರದರ್ಶನವನ್ನು ನೀಡಿತು.

ಆದರೆ ಕೊನೆಯ ಹಂತದಲ್ಲಿ ಎಡವಿದ್ದು ಅಭಿಮಾನಿಗಳಿಗೆ ಬೇಸರವನ್ನು ಉಂಟುಮಾಡಿತ್ತು. ಪ್ರತಿ ಸೀಸನ್ ನಲ್ಲಿಯೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಒಬ್ಬ ಆಟಗಾರನನ್ನು ಆಯ್ಕೆಮಾಡುವ ಮುಂಚೆ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ಗಮನಿಸಿ ಅವನು ಆಯ್ಕೆ ಮಾಡುತ್ತದೆ. ಹಲವಾರು ಸೀಸನ್ ಗಳಿಂದ ಹಲವಾರು ಆಟಗಾರರು ಇದೇ ವಿಚಾರದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಯ್ಕೆಯಾಗಿದ್ದರು. ಪ್ರತಿಯೊಬ್ಬ ಆಟಗಾರನ ವಿಶೇಷ ಪ್ರದರ್ಶನವನ್ನು ಕೇಂದ್ರೀಕರಿಸಿ ಆತನನ್ನು ಸೆಲೆಕ್ಟ್ ಮಾಡಲಾಗುತ್ತದೆ. ಇನ್ನು ಈ ಬಾರಿ ಅಂತಹ ಪ್ರದರ್ಶನವನ್ನು ನೀಡುತ್ತಿರುವ ಆಟಗಾರ ಎಂದರೆ ಅದು ಆಲ್-ರೌಂಡರ್ ಶಾಬಾಜ್ ಅಹಮದ್.

rcb 2022 1 | ಆರ್ಸಿಬಿಯ ರಾಕ್ ಸ್ಟಾರ್, ಆರ್ಸಿಬಿ ಇಂತವರೇ ಬೇಕಿರೋದು. ಈತ ಮಿಂಚುತ್ತಿರುವುದು ನೋಡಿದರೆ, ನೀವು ಬೇಕು ಅಂತೀರಾ.
ಆರ್ಸಿಬಿಯ ರಾಕ್ ಸ್ಟಾರ್, ಆರ್ಸಿಬಿ ಇಂತವರೇ ಬೇಕಿರೋದು. ಈತ ಮಿಂಚುತ್ತಿರುವುದು ನೋಡಿದರೆ, ನೀವು ಬೇಕು ಅಂತೀರಾ. 2

ಹೌದು ಗೆಳೆಯರೆ ಶಾಬಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ಬಾರಿ ನೀಡಿರುವ ಪ್ರದರ್ಶನವನ್ನು ನೋಡಿರುವ ನೀವು ಅವರ ಪ್ರಾಬಲ್ಯತೆಯನ್ನು ಸಾಕ್ಷಿಕರಿಸಿದ್ದೀರಿ. ಇನ್ನು ಇತ್ತೀಚಿಗಷ್ಟೆ ರಣಜಿ ಪಂದ್ಯದಲ್ಲಿ ಶಾಬಾಜ್ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ 86 ರನ್ನಿಗೆ 3 ವಿಕೆಟ್ ಕಬಳಿಸಿ ಬೌಲಿಂಗ್ ನಲ್ಲಿ ಪರಾಕ್ರಮವನ್ನು ಮೆರೆದು ಬ್ಯಾಟಿಂಗ್ನಲ್ಲಿ 116 ರನ್ನುಗಳನ್ನು ಬಾರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಕೂಡ ಆರ್ಸಿಬಿ ತಂಡದಲ್ಲಿ ಮಿಂಚುತ್ತಿರುವ ಈ ಆಟಗಾರ ಮುಂದಿನ ವರ್ಷದ ಐಪಿಎಲ್ ಗೂ ಕೂಡ ಆರ್ಸಿಬಿ ತಂಡದಲ್ಲಿ ಇರಲಿ ಎಂಬುದಾಗಿ ಅಭಿಮಾನಿಗಳು ಆಸೆ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.