ಧೋನಿ ರವರ ಸ್ಥಾನವನ್ನು ಭಾರತ ತಂಡದಲ್ಲಿ ತುಂಬುವ ಆಟಗಾರ ಸಿಕ್ಕೇ ಬಿಟ್ಟ, ಯಾರು ಗೊತ್ತೇ ಆ ಕಿಲಾಡಿ ಆಟಗಾರ??

ಟೀಮ್ ಇಂಡಿಯಾದ ಅತ್ಯುತ್ತಮವಾದ ಫಿನಿಷರ್ ಎನ್ನಿಸಿಕೊಂಡಿದ್ದವರು ಎಂ.ಎಸ್.ಧೋನಿ ಅವರು. ಧೋನಿ ಅವರು ನಿವೃತ್ತಿ ಪಡೆದ ಬಳಿಕ ಆ ಸ್ಥಾನ ಖಾಲಿಯಾಗಿತ್ತು ಎಂದರೆ ತಪ್ಪಾಗುವದಿಲ್ಲ. ಧೋನಿ ಅವರ ನಂತರ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಈ ಸ್ಥಾನ ತುಂಬಲು ಪ್ರಯತ್ನ ಪಟ್ಟರು ಸಹ, ಅದು ಸಕ್ಸಸ್ ಕಾಣಲಿಲ್ಲ. ರಿಷಬ್ ಪಂತ್ ಅವರು ಸಹ ಫಿನಿಷರ್ ಸ್ಥಾನಕ್ಕೆ ಸರಿ ಹೋಗಲಿಲ್ಲ. ಆದರೆ ಈಗ ಟೀಮ್ ಇಂಡಿಯಾಗೆ ಅದ್ಭುತವಾದ ಫಿನಿಷರ್ ಸಿಕ್ಕಿದ್ದಾರೆ. ಅವರು ಮತ್ಯಾರು ಅಲ್ಲ, ಆರ್.ಸಿ.ಬಿ ತಂಡದ ಆಪತ್ಬಾಂಧವ ದಿನೇಶ್ ಕಾರ್ತಿಕ್ ಅವರು.

ದಿನೇಶ್ ಕಾರ್ತಿಕ್ ಅವರು ಈ ವರ್ಷ ಆರ್.ಸಿ.ಬಿ ತಂಡದ ಪರಗಾಗಿ ಅದ್ಭುತವಾದ ಪ್ರದರ್ಶನ ನೀಡಿ, ಆರ್.ಸಿ.ಬಿ ತಂಡದ ಆಪತ್ಬಾಂಧವ ಎಂದು ಹೆಸರು ಪಡೆದುಕೊಂಡಿದ್ದರು. ಐಪಿಎಲ್ ಪಂದ್ಯಗಳು ನಡೆಯುವ ಸಮಯದಲ್ಲಿ ದಿನೇಶ್ ಕಾರ್ತಿಕ್ ಅವರು ಆರ್.ಸಿ.ಬಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು, ಅಲ್ಲದೆ ಐಪಿಎಲ್ ಪಂದ್ಯಗಳು ನಡೆಯುವಾಗ ಟೀಮ್ ಇಂಡಿಯಾಗೆ ಮತ್ತೆ ಬರುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅವಕಾಶ ಸಿಕ್ಕರೆ, ಮತ್ತೆ ಟೀಮ್ ಇಂಡಿಯಾಗೆ ಬರುವ ಆಸೆ ಇದೆ ಎಂದು ಹೇಳಿದ್ದರು.

msd | ಧೋನಿ ರವರ ಸ್ಥಾನವನ್ನು ಭಾರತ ತಂಡದಲ್ಲಿ ತುಂಬುವ ಆಟಗಾರ ಸಿಕ್ಕೇ ಬಿಟ್ಟ, ಯಾರು ಗೊತ್ತೇ ಆ ಕಿಲಾಡಿ ಆಟಗಾರ??
ಧೋನಿ ರವರ ಸ್ಥಾನವನ್ನು ಭಾರತ ತಂಡದಲ್ಲಿ ತುಂಬುವ ಆಟಗಾರ ಸಿಕ್ಕೇ ಬಿಟ್ಟ, ಯಾರು ಗೊತ್ತೇ ಆ ಕಿಲಾಡಿ ಆಟಗಾರ?? 2

ದಿನೇಶ್ ಕಾರ್ತಿಕ್ ಅವರಿಗೆ ಇದ್ದ ಇಂಗಿತ ಜೊತೆಗೆ, ಅವರು ಆರ್.ಸಿ.ಬಿ ತಂಡದ ಪರವಾಗಿ ನೀಡಿದ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನದಿಂದ ದಿನೇಶ್ ಕಾರ್ತಿಕ್ ಅವರು ಈಗ ಭಾರತದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವರ್ಸಸ್ ಭಾರತದ ಸರಣಿ ಪಂದ್ಯಗಳಿಗೆ ಸೆಲೆಕ್ಟ್ ಆಗಿದ್ದು, ಬಹಳ ಸಮಯದ ಬಳಿಕ ಟೀಮ್ ಇಂಡಿಯಾಗೆ ವಾಪಸ್ ಬಂದಿದ್ದಾರೆ. ಇದರಿಂದಾಗಿ ಡಿಕೆ ಅವರಿಗೆ ಬಹಳ ಸಂತೋಷವಾಗಿದೆ. ಜೊತೆಗೆ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದ ಕೊನೆಯ ಓವರ್ ಗಳಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ ಡಿಕೆ ಅವರು 30 ರನ್ ಗಳನ್ನು ಭಾರಿಸಿ, ಟೀಮ್ ಇಂಡಿಯಾಗೆ ಸಹಾಯಕವಾಗಿತ್ತು. ನಾಲ್ಕನೇ ಪಂದ್ಯದಲ್ಲಿ ಸಹ ಭರ್ಜರಿಯಾಗಿ 27 ಬಾಲ್ ಗಳಲ್ಲಿ 55 ರನ್ ಗಳಿಸಿ ಭಾರತ ತಂಡದ ಗೆಲುವಿಗೆ ಕಾರಣವಾದರು. ಇಂತಹ ಒಬ್ಬ ಫಿನಿಷರ್ ಭಾರತ ತಂಡದಲ್ಲಿದ್ದರೆ, ಟಿ20 ವಿಶ್ವಕಪ್ ಗೆಲ್ಲುವುದು ಕಠಿಣ ಎನ್ನಲಾಗುತ್ತಿದೆ.

Comments are closed.