ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿಯ ಮೇಲೆ ಸಿಹಿ ಸುದ್ದಿ, ಒಂದು ಕಡೆ ಪ್ಲೇ ಆಫ್ ಗೆ ಹೋದ ಸಂತೋಷ ಮತ್ತೊಂದು ಕಡೆ ಮತ್ತೊಂದು ಸಿಹಿ ಸುದ್ದಿ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ನಿಮಗೆ ತಿಳಿದಿರುವಂತೆ ಮೇ 25ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಆಡಲು ಸಜ್ಜಾಗಿದೆ. ಕೊನೆಯ ಕ್ಷಣದಲ್ಲಿ ರೋಚಕವಾಗಿ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಸಾಧ್ಯವಾದ ರೀತಿ ಪ್ರತಿಯೊಬ್ಬ ಐಪಿಎಲ್ ಅಭಿಮಾನಿಗಳಿಗೂ ಕೂಡ ರೋಮಾಂಚನವನ್ನು ನೀಡಿತ್ತು ಎಂದರೆ ತಪ್ಪಾಗಲಾರದು. ಆದರೆ ಈಗ ಅದರ ಜೊತೆಗೆ ಮತ್ತೊಂದು ವಿಚಾರ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಸಾಕಷ್ಟು ಸಂತೋಷವನ್ನು ನೀಡಲಿದೆ ಎಂದರು ತಪ್ಪಾಗಲಾರದು.

ಹೌದು ಗೆಳೆಯರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಈಗಾಗಲೇ ಬಿಸಿಸಿಐ ಘೋಷಿಸಿರುವ ಟೆಸ್ಟ್ ಹಾಗೂ ಟಿ-20 ತಂಡ ಗಳಲ್ಲಿ ಆಯ್ಕೆಯಾಗಿದ್ದಾರೆ. ಹಾಗಿದ್ದರೆ ಅವರು ಯಾರು ಎಂಬುದನ್ನು ನೋಡೋಣ ಬನ್ನಿ. ಹೌದು ಗೆಳೆಯರೇ ಮೊದಲಿಗೆ ಐಪಿಎಲ್ ಮುಗಿದ ನಂತರ ಕೂಡಲೇ ಪ್ರಾರಂಭವಾಗುವಂತಹ ಸೌತ್ ಆಫ್ರಿಕಾ ವಿರುದ್ಧದ 5 ಟಿ ಟ್ವೆಂಟಿ ಪಂದ್ಯಗಳ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆರ್ಸಿಬಿ ತಂಡದ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಹಾಗೂ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ಆಗಿರುವ ದಿನೇಶ್ ಕಾರ್ತಿಕ್ ರವರು ಆಯ್ಕೆಯಾಗಿದ್ದಾರೆ.

rcb 2022 1 | ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿಯ ಮೇಲೆ ಸಿಹಿ ಸುದ್ದಿ, ಒಂದು ಕಡೆ ಪ್ಲೇ ಆಫ್ ಗೆ ಹೋದ ಸಂತೋಷ ಮತ್ತೊಂದು ಕಡೆ ಮತ್ತೊಂದು ಸಿಹಿ ಸುದ್ದಿ ಏನು ಗೊತ್ತೇ??
ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿಯ ಮೇಲೆ ಸಿಹಿ ಸುದ್ದಿ, ಒಂದು ಕಡೆ ಪ್ಲೇ ಆಫ್ ಗೆ ಹೋದ ಸಂತೋಷ ಮತ್ತೊಂದು ಕಡೆ ಮತ್ತೊಂದು ಸಿಹಿ ಸುದ್ದಿ ಏನು ಗೊತ್ತೇ?? 2

ಮೂರು ವರ್ಷಗಳ ನಂತರ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಮ್ಮೆ ಕಂಬ್ಯಾಕ್ ಮಾಡಲಿರುವ ದಿನೇಶ್ ಕಾರ್ತಿಕ್ ರವರಿಗೆ ಇದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ t20 ವರ್ಲ್ಡ್ ಕಪ್ ತಂಡಕ್ಕೆ ಆಯ್ಕೆಯಾಗಲು ಉತ್ತಮ ಅವಕಾಶ ಎಂದು ಹೇಳಬಹುದಾಗಿದೆ. ಇನ್ನು ನಂತರ ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕಮಾತ್ರ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ರವರು ಆಯ್ಕೆಯಾಗಿದ್ದಾರೆ. ಎಲ್ಲರೂ ಕೂಡ ಭಾರತೀಯ ಕ್ರಿಕೆಟ್ ತಂಡದಲ್ಲಿ ಉತ್ತಮವಾದ ಪ್ರದರ್ಶನ ನೀಡಲಿ ಎಂಬುದಾಗಿ ಹಾರೈಸೋಣ. ಬಿಸಿಸಿಐ ಘೋಷಿಸಿರುವ ಭಾರತೀಯ ಕ್ರಿಕೆಟ್ ತಂಡಗಳ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

Comments are closed.