ಹೆಂಡತಿ ಡೆಲಿವರಿ ಗೆ ಹೋಗಿದ್ದ ಶಿಮ್ರೋನ್ ಹೆಟ್ಮೈಯರ್ ಕುರಿತು ವಿವಾದಾತ್ಮಕ ಡಬಲ್ ಮೀನಿಂಗ್ ಹೇಳಿಕೆ ನೀಡಿದ ಸುನಿಲ್, ನೆಟ್ಟಿಗರಿಂದ ತರಾಟೆ, ಅಷ್ಟಕ್ಕೂ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಕ್ರಿಕೆಟ್ ತಂಡದಲ್ಲಿ ಇದುವರೆಗೂ ಹಲವಾರು ಸೂಪರ್ ಸ್ಟಾರ್ ಗಳು ಬಂದು ಹೋಗಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ದೊಡ್ಡಮಟ್ಟದಲ್ಲಿ ಹೆಸರನ್ನು ಸಾಧಿಸಿದವರು ಎಂದರೆ ಸುನಿಲ್ ಗವಾಸ್ಕರ್ ಅವರು ಎಂದರೆ ತಪ್ಪಾಗಲಾರದು. ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಸಾಕಷ್ಟು ದಾಖಲೆಗಳನ್ನು ಕೂಡ ಸುನಿಲ್ ಗವಾಸ್ಕರ್ ಅವರು ಕ್ರಿಯೇಟ್ ಮಾಡಿದ್ದಾರೆ. ಸದ್ಯಕ್ಕೆ ಈಗ ಐಪಿಎಲ್ ಸೇರಿದಂತೆ ಹಲವಾರು ಪಂದ್ಯಗಳಲ್ಲಿ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸುನಿಲ್ ಗವಾಸ್ಕರ್ ಅವರು ಕೇವಲ ಕ್ರಿಕೆಟ್ ವಿಚಾರದಲ್ಲಿ ಮಾತ್ರವಲ್ಲದೆ ಬೇರೆ ವಿಚಾರದಲ್ಲಿ ಕೂಡ ಸುದ್ದಿಯಾದವರಾಗಿದ್ದಾರೆ. ಇನ್ನು ಇತ್ತೀಚಿನ ದಿನದಲ್ಲಿ ಸುನಿಲ್ ಗಾವಸ್ಕರ್ ರವರು ನೀಡಿರುವಂತಹ ಹೇಳಿಕೆಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧವಾಗಿ ನೆಟ್ಟಿಗರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಟೀಕಾಪ್ರಹಾರ ಮಾಡುತ್ತಿದ್ದಾರೆ. ನಿಮ್ಮ ವಯಸ್ಸಿಗೆ ತಕ್ಕಹಾಗೆ ಮಾತನಾಡುವುದನ್ನು ಕಲಿಯಿರಿ ಎಂಬುದಾಗಿ ಕೂಡ ನೆಟ್ಟಿಗರು ಹೇಳಿದ್ದಾರೆ. ಅಷ್ಟಕ್ಕೂ ಸುನೀಲ್ ಗಾವಸ್ಕರ್ ಅವರು ಅಂತಹ ಹೇಳಿಕೆಯನ್ನಾದರೂ ಏನು ಹೇಳಿದ್ದಾರೆ ಎಂಬುದಾಗಿ ತಿಳಿಯೋಣ ಬನ್ನಿ.

shimron hetmyer wife sunil gavaskar | ಹೆಂಡತಿ ಡೆಲಿವರಿ ಗೆ ಹೋಗಿದ್ದ ಶಿಮ್ರೋನ್ ಹೆಟ್ಮೈಯರ್ ಕುರಿತು ವಿವಾದಾತ್ಮಕ ಡಬಲ್ ಮೀನಿಂಗ್ ಹೇಳಿಕೆ ನೀಡಿದ ಸುನಿಲ್, ನೆಟ್ಟಿಗರಿಂದ ತರಾಟೆ, ಅಷ್ಟಕ್ಕೂ ಹೇಳಿದ್ದೇನು ಗೊತ್ತೇ?
ಹೆಂಡತಿ ಡೆಲಿವರಿ ಗೆ ಹೋಗಿದ್ದ ಶಿಮ್ರೋನ್ ಹೆಟ್ಮೈಯರ್ ಕುರಿತು ವಿವಾದಾತ್ಮಕ ಡಬಲ್ ಮೀನಿಂಗ್ ಹೇಳಿಕೆ ನೀಡಿದ ಸುನಿಲ್, ನೆಟ್ಟಿಗರಿಂದ ತರಾಟೆ, ಅಷ್ಟಕ್ಕೂ ಹೇಳಿದ್ದೇನು ಗೊತ್ತೇ? 2

ನಿಮಗೆಲ್ಲರಿಗೂ ತಿಳಿದಿರುವಂತೆ ರಾಜಸ್ಥಾನ ರಾಯಲ್ಸ್ ತಂಡದ ವೆಸ್ಟ್ಇಂಡೀಸ್ ಮೂಲದ ಆಟಗಾರರಾಗಿರುವ ಶಿಮ್ರೋನ್ ಹೆಟ್ಮೈಯರ್ ರವರು ಇತ್ತೀಚಿಗಷ್ಟೇ ತಮ್ಮ ಹೆಂಡತಿ ಬಳಿಗೆ ಟೂರ್ನಿಯ ಮಧ್ಯದಲ್ಲಿ ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ಹೋಗಿದ್ದರು. ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರವಾಗಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಅವರು ಪತ್ನಿಗೆ ಡೆಲಿವರಿ ಆಗಿದೆ ಈಗ ರಾಜಸ್ಥಾನ ರಾಯಲ್ಸ್ ಗೆ ಡೆಲಿವರಿ ಮಾಡಲು ಸಿಮ್ರನ್ ಹೆಟ್ಮೈಯರ್ ಬಂದಿದ್ದಾರೆ ಎಂಬುದಾಗಿ ಡಬಲ್ ಮೀನಿಂಗ್ ಹೇಳಿಕೆಯನ್ನು ನೀಡಿದ್ದರು. ಇದು ಈಗ ಕ್ರಿಕೆಟ್ ಅಭಿಮಾನಿಗಳಲ್ಲಿ ಸುನಿಲ್ ಗಾವಸ್ಕರ್ ವಿರುದ್ಧ ಅಪಸ್ವರವನ್ನು ಎತ್ತಲು ಪ್ರೇರೇಪಿಸಿದೆ. ಸುನಿಲ್ ಗವಾಸ್ಕರ್ ಅವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದು ಮರೆಯಬೇಡಿ.

Comments are closed.