ಒಂದು ವೇಳೆ ಆರ್ಸಿಬಿ ಸುಲಭವಾಗಿ ಪ್ಲೇ ಆಫ್ ತಲುಪಬೇಕು ಎಂದರೆ ಇರುವ ಏಕೈಕ ದಾರಿ ಯಾವುದು ಗೊತ್ತೇ?? ಆ ದಾರಿ ಬಿಟ್ಟರೆ ಬೇರೆ ದಾರಿಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ನ ಆರಂಭಿಕ ದಿನಗಳಲ್ಲಿ ಖಂಡಿತವಾಗಿ ಈ ಬಾರಿಯ ಅತ್ಯಂತ ಬಲಿಷ್ಠ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಾಯಿಂಟ್ಸ್ ಟೇಬಲ್ ನಲ್ಲಿ ಕಾಣಿಸಿಕೊಳ್ಳಬಹುದು ಎಂಬುದಾಗಿ ಅಂದಾಜಿಸಲಾಗಿತ್ತು. ಆದರೆ ಇತ್ತೀಚಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತವಾಗಿ ಮೂರು ಪಂದ್ಯಗಳನ್ನು ಸೋಲುವ ಮೂಲಕ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದೆ ಎಂಬುದಾಗಿ ಹೇಳಬಹುದಾಗಿದೆ. ಒಂದು ಸಮಯದಲ್ಲಿ ಪ್ಲೀಸ್ ಗೆ ತೇರ್ಗಡೆ ಆಗುವಂತಹ ಟಾಪ್ 4 ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸುಲಭವಾಗಿ ಕ್ವಾಲಿಫೈ ಆಗುತ್ತದೆ ಎಂಬುದಾಗಿ ಭಾವಿಸಲಾಗಿತ್ತು. ಆದರೆ ಈಗ ಮತ್ತೊಮ್ಮೆ ಕ್ಯಾಲ್ಕುಲೇಟರ್ ಹಿಡಿಯುವಂತಹ ಪರಿಸ್ಥಿತಿ ಎದುರಾಗಿದೆ ಎಂದರೆ ತಪ್ಪಾಗಲಾರದು.

ಟಾಟಾ ಐಪಿಎಲ್ 2022 ರ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೆಯ ಭಾಗದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಎರಡನೇ ಭಾಗದಲ್ಲಿ ಆಡಿರುವಂತಹ ಎಲ್ಲಾ ಪಂದ್ಯಗಳನ್ನು ಸೋತಿದೆ. ಕೇವಲ 10 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪೈಪೋಟಿಗಾಗಿ ಇನ್ನು ಎಂಟು ತಂಡಗಳು ಬಾಕಿ ಉಳಿದಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡಲು ಉಳಿದಿರುವುದು ಕೇವಲ ನಾಲ್ಕು ಪಂದ್ಯಗಳು ಮಾತ್ರ.

rcb 2022 kohli faf | ಒಂದು ವೇಳೆ ಆರ್ಸಿಬಿ ಸುಲಭವಾಗಿ ಪ್ಲೇ ಆಫ್ ತಲುಪಬೇಕು ಎಂದರೆ ಇರುವ ಏಕೈಕ ದಾರಿ ಯಾವುದು ಗೊತ್ತೇ?? ಆ ದಾರಿ ಬಿಟ್ಟರೆ ಬೇರೆ ದಾರಿಗಳೇನು ಗೊತ್ತೇ??
ಒಂದು ವೇಳೆ ಆರ್ಸಿಬಿ ಸುಲಭವಾಗಿ ಪ್ಲೇ ಆಫ್ ತಲುಪಬೇಕು ಎಂದರೆ ಇರುವ ಏಕೈಕ ದಾರಿ ಯಾವುದು ಗೊತ್ತೇ?? ಆ ದಾರಿ ಬಿಟ್ಟರೆ ಬೇರೆ ದಾರಿಗಳೇನು ಗೊತ್ತೇ?? 2

ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಅಥವಾ ಎಷ್ಟು ಅಂಕಗಳನ್ನು ಗಳಿಸಬೇಕು ಎನ್ನುವ ಕುರಿತಂತೆ ಯೋಚಿಸುತ್ತಿದ್ದಾರೆ. ಉಳಿದಿರುವ ನಾಲ್ಕು ಪಂದ್ಯಗಳನ್ನು ಗೆದ್ದರೆ 18 ಅಂಕಗಳೊಂದಿಗೆ ಸುಲಭವಾಗಿ ತೇರ್ಗಡೆ ಆಗುವ ಅವಕಾಶ ತಂಡಕ್ಕಿದೆ. ಆದರೆ ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ಎದುರು ಪಂದ್ಯಗಳನ್ನು ಆಡಬೇಕಾಗುವ ಕಠಿಣ ದಾರಿ ಕೂಡ ಇದೆ. ಹೀಗಾಗಿ ಇದು ಅಷ್ಟೊಂದು ಸುಲಭವಾಗಿರಲು ಚಾನ್ಸೇ ಇಲ್ಲ. ಹೀಗಾಗಿ ಮುಂದಿರುವ ಒಂದೇ ಒಂದು ಪಂದ್ಯವನ್ನು ಸೋತರೂ ಕೂಡ 16 ಅಂಕಗಳೊಂದಿಗೆ ರನ್ ರೇಟ್ ಮೊರೆ ಹೋಗಬೇಕಾದಂತಹ ಸಾಧ್ಯತೆ ಇದೆ. ಈಗಾಗಲೇ ದ್ವಿತೀಯಾರ್ಧದಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೆ ಕಂಬ್ಯಾಕ್ ಮಾಡುತ್ತಾ ಎನ್ನುವುದು ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯಾಗಿದೆ.

Comments are closed.