ಕೆಲವು ವರ್ಷಗಳ ಹಿಂದೆ ತಾಯಿ ಪಾರ್ವತಮ್ಮನವರ ಕೊನೆಯ ಜನ್ಮದಿನವನ್ನು ಅಪ್ಪು ಹೇಗೆ ಆಚರಿಸಿದ್ರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗ ಎಂದು ಬಂದಾಗ ಮೊದಲಿಗೆ ನಮಗೆ ನೆನಪಿಗೆ ಬರುವುದು ನಮ್ಮೆಲ್ಲರ ನೆಚ್ಚಿನ ನಟಸಾರ್ವಭೌಮ ಕನ್ನಡ ಚಿತ್ರರಂಗದ ದೇವರು ಎಂದೇ ಖ್ಯಾತರಾಗಿರುವ ಡಾ ರಾಜಕುಮಾರ್ ರವರು. ಆದರೆ ಡಾ ರಾಜಕುಮಾರ್ ರವರ ಹಿಂದಿನ ಶಕ್ತಿಯಾಗಿ ಕಾಣಿಸಿಕೊಂಡಿದ್ದರು ಪಾರ್ವತಮ್ಮ ಎಂಬುದನ್ನು ನಾವೆಲ್ಲರೂ ಸ್ಮರಿಸಿಕೊಳ್ಳಬೇಕು. ದೊಡ್ಡಮನೆಯ ಪ್ರಮುಖ ಶಕ್ತಿಯಾಗಿ ಕಾಣಿಸಿಕೊಂಡಿದ್ದರು ಪಾರ್ವತಮ್ಮನವರು. ಕನ್ನಡ ಚಿತ್ರರಂಗದಲ್ಲಿ ಅಣ್ಣಾವ್ರು ಸೇರಿದಂತೆ ತ್ರಿಮೂರ್ತಿ ಮಕ್ಕಳನ್ನು ಪರಿಚಯಿಸಿದವರು ಹಾಗೂ ಅವರ ಬೆನ್ನೆಲುಬಾಗಿ ಅವರ ಬೆನ್ನ ಹಿಂದಿನ ದೊಡ್ಡ ಶಕ್ತಿಯಾಗಿ ಕಾಣಿಸಿಕೊಂಡವರು ಪಾರ್ವತಮ್ಮ ಎಂದರೆ ತಪ್ಪಾಗಲಾರದು.

ಕೇವಲ ದೊಡ್ಡ ನಟನ ಹೆಂಡತಿ ಅಥವಾ ಮೂರು ಸೂಪರ್ ಸ್ಟಾರ್ ಗಳ ತಾಯಿಯಾಗಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿಯೂ ಕೂಡ ಮಹಿಳೆಯರಿಗೆ ಮಾದರಿಯಾದವರು. ವಜ್ರೇಶ್ವರಿ ಕಂಬೈನ್ಸ್ ಮೂಲಕ ಕನ್ನಡ ಚಿತ್ರರಂಗದ ನಿರ್ಮಾಪಕಿಯಾಗಿ ಅನ್ನಪೂರ್ಣೇಶ್ವರಿಯಾಗಿ ಕಾಣಿಸಿಕೊಂಡವರು. ಅವರ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಅದೆಷ್ಟು ಕಲಾವಿದರು ಹಾಗೂ ತಂತ್ರಜ್ಞರು ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಇದು ನಮ್ಮೆಲ್ಲರ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಅಮ್ಮ ಎಂದರೆ ಎಲ್ಲಿಲ್ಲದ ಪ್ರೀತಿ ಅನ್ನುವುದನ್ನು ಹೆಚ್ಚಾಗಿ ಹೇಳಬೇಕೆಂದೇನು ಇಲ್ಲ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಿಜವಾಗಿ ಹೇಳಬೇಕೆಂದರೆ ಚಿಕ್ಕವಯಸ್ಸಿನಿಂದಲೂ ಕೂಡ ತಮ್ಮ ತಾಯಿ ಪಾರ್ವತಮ್ಮನವರ ನೆರಳಿನಲ್ಲಿ ಬೆಳೆದುಕೊಂಡು ಬಂದವರು. ಅಮ್ಮ ಹೇಳಿದ್ದೆ ಅವರಿಗೆ ಆಜ್ಞೆಯಾಗಿತ್ತು. ಅಮ್ಮ ಹೇಳಿದ್ದೇ ವೇದವಾಕ್ಯ ವಾಗಿತ್ತು ಅಷ್ಟರಮಟ್ಟಿಗೆ ತಾಯಿಯನ್ನು ಆರಾಧ್ಯದೈವ ದಂತೆ ಪೂಜಿಸಿದವರು. ಇನ್ನು ನಮ್ಮ ತಾಯಿ ಪಾರ್ವತಮ್ಮನವರ ಕೊನೆಯ ಜನ್ಮದಿನವನ್ನು ತಮ್ಮ ಅತ್ತೆಯಾಗಿರುವ ನಾಗಮ್ಮನವರ ಜೊತೆಗೆ ಹಾಗೂ ಕುಟುಂಬದ ಜೊತೆಗೆ ಆಚರಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬದಲಾಗಿದ್ದು ವಿಡಿಯೋ ತುಣುಕನ್ನು ನೀವು ಕೂಡ ಇಲ್ಲಿ ನೋಡಬಹುದಾಗಿದೆ. ಒಬ್ಬರು ಕನ್ನಡ ಚಿತ್ರರಂಗದ ಧ್ರುವತಾರೆ ಆಗಿ ಕಾಣಿಸಿಕೊಂಡರೆ ಇನ್ನೊಬ್ಬರು ಕನ್ನಡ ಚಿತ್ರರಂಗದ ಮಹಿಳಾ ನಿರ್ಮಾಪಕಿಯಾಗಿ ಪ್ರತಿಯೊಬ್ಬ ಮಹಿಳೆಗೂ ಕೂಡ ಸ್ಪೂರ್ತಿ ಆದವರು. ಆದರೆ ಇಂದು ಇವರಿಬ್ಬರೂ ಕೂಡ ನಮ್ಮ ಜೊತೆಯಲ್ಲಿ ಇಲ್ಲ ಎನ್ನುವುದೇ ವಿಷಾದನೀಯ ವಿಚಾರ.

Comments are closed.