ನಿಮಗೆ ವಿಷ್ಣುವರ್ಧನ್ ರವರ ನಟನೆ ಕುರಿತು ಮಾತ್ರ ಗೊತ್ತು. ಆದರೆ ಗಾಯಕನಾಗಿ ಅಷ್ಟೇ ಅಲ್ಲ, ಸಿನೆಮಾಗೆ ಕಥೆ ಕೂಡ ಬರೆದಿದ್ದಾರೆ ಯಾವ ಸಿನಿಮಾ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರು ಕೇವಲ ನಟನಾಗಿ ಮಾತ್ರವಲ್ಲದೆ ಬಹುಮುಖ ಪ್ರತಿಭೆಯಾಗಿದ್ದ ಚಿತ್ರರಂಗಕ್ಕೆ ಸೇರಿದಂತೆ ಪರಭಾಷಾ ಚಿತ್ರಗಳಲ್ಲಿ ಕೂಡ ಪರಿಚಿತರಾದವರು. ವಿಷ್ಣು ದಾದಾ ಅವರನ್ನು ಭಾರತೀಯ ಚಿತ್ರರಂಗದ ಫೀನಿಕ್ಸ್ ಎನ್ನುವುದಾಗಿ ಕರೆಯುತ್ತಾರೆ. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಸಾಹಸಸಿಂಹ ವಿಷ್ಣುವರ್ಧನ್ ರವರು ಹಾಡುಗಾರಿಕೆಯಲ್ಲಿ ಕೂಡ ಕನ್ನಡ ಚಿತ್ರರಂಗದಲ್ಲಿ ಉತ್ತಮ ಸ್ಥಾನದಲ್ಲಿ ಕಾಣಿಸಿಕೊಂಡವರು. ಹೌದು ಗೆಳೆಯರೇ ಸಾಹಸಸಿಂಹ ವಿಷ್ಣುವರ್ಧನ್ ರವರು ಹಲವಾರು ಸಿನಿಮಾಗಳಿಗೆ ಹಾಡಿದ್ದಾರೆ.

ಅವರು ಎಂದಿಗೂ ಕೂಡ ಸಂಗೀತಾಭ್ಯಾಸವನ್ನು ಮಾಡಿದವರೆಲ್ಲಾ ಆದರೂ ಕೂಡ ಅವರ ಹಾಡುಗಳು ಕನ್ನಡ ಚಿತ್ರರಂಗದಲ್ಲಿ ಐಕಾನಿಕ್ ಆಗಿ ಕಾಣಿಸಿಕೊಂಡಿವೆ ಎಂದರೆ ತಪ್ಪಾಗಲಾರದು. ವಿಷ್ಣುವರ್ಧನರವರ ಹಾಡುಗಾರಿಕೆ ಕುರಿತಂತೆ ಹೇಳುವುದಾದರೆ ಅವರು ಮೊದಲು ಹಾಡಿದ್ದು ನಾಗರಹೊಳೆ ಸಿನಿಮಾದ ಈ ನೋಟಕ್ಕೆ ಮೈಮಾಟಕ್ಕೆ ಎನ್ನುವ ಸಾಂಗ್. ಇದರ ಸಾಹಿತ್ಯವನ್ನು ಬರೆದಿದ್ದು ಚಿ ಉದಯಶಂಕರ್. ವಿಷ್ಣುವರ್ಧನ್ ರವರು ಹಾಡುವಂತಹ ಹಾಡುಗಳು ಪ್ರಮುಖವಾಗಿ ಸಾಕಷ್ಟು ಮೋಟಿವೇಶನ್ ತುಂಬುತ್ತವೆ ಎಂಬುದನ್ನು ನಾವು ಮರೆಯಬಾರದು. ಅದರಲ್ಲೂ ಸಾಹಸಸಿಂಹ ವಿಷ್ಣುವರ್ಧನ್ ರವರು ಹಾಡಿರುವ ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಹಾಡು ಯಾವ ಮಟ್ಟದಲ್ಲಿ ಇಂಪ್ಯಾಕ್ಟ್ ಸೃಷ್ಟಿಸಿದೆ ಎಂಬುದು ನಿಮಗೆಲ್ಲಾ ಗೊತ್ತಿದೆ.

vishnuvardhan | ನಿಮಗೆ ವಿಷ್ಣುವರ್ಧನ್ ರವರ ನಟನೆ ಕುರಿತು ಮಾತ್ರ ಗೊತ್ತು. ಆದರೆ ಗಾಯಕನಾಗಿ ಅಷ್ಟೇ ಅಲ್ಲ, ಸಿನೆಮಾಗೆ ಕಥೆ ಕೂಡ ಬರೆದಿದ್ದಾರೆ ಯಾವ ಸಿನಿಮಾ ಗೊತ್ತೇ??
ನಿಮಗೆ ವಿಷ್ಣುವರ್ಧನ್ ರವರ ನಟನೆ ಕುರಿತು ಮಾತ್ರ ಗೊತ್ತು. ಆದರೆ ಗಾಯಕನಾಗಿ ಅಷ್ಟೇ ಅಲ್ಲ, ಸಿನೆಮಾಗೆ ಕಥೆ ಕೂಡ ಬರೆದಿದ್ದಾರೆ ಯಾವ ಸಿನಿಮಾ ಗೊತ್ತೇ?? 2

ಇಂದಿಗೂ ಕೂಡ ಕನ್ನಡ ಪ್ರೇಕ್ಷಕರಲ್ಲಿ ಹಾಡು ಜನಜನಿತವಾಗಿದೆ. ಇನ್ನು ವಿಷ್ಣುವರ್ಧನ್ ರವರು ಹಾಡಿರುವ ಕೊನೆಯ ಹಾಡು ಅವಳಿಗೆ ಕೈ ಮುಗಿಯಮ್ಮ ಹಾಡು. ಒಟ್ಟಾರೆಯಾಗಿ ತಮ್ಮ ಸಿನಿಮಾ ಜೀವನದಲ್ಲಿ 27 ಹಾಡುಗಳನ್ನು ಹಾಡಿದ್ದಾರೆ ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು. ಇನ್ನು ಕೇವಲ ನಾಯಕರಾಗಿ ಮಾತ್ರವಲ್ಲದೆ ಬರಹಗಾರರಾಗಿ ಕೂಡ ವಿಷ್ಣುವರ್ಧನ್ ರವರು ಸಾಧನೆಯನ್ನು ಮಾಡಿದ್ದಾರೆ ಆದರೆ ಈ ಕುರಿತಂತೆ ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ. ವಿಷ್ಣುವರ್ಧನ್ ರವರು ಬರೆದಿರುವ ಕಥೆಯನ್ನು ಗಣೇಶ ಐ ಲವ್ ಯು ಸಿನಿಮಾ ಮಾಡಿ ಅದರಲ್ಲಿ ಅನಂತನಾಗ್ ಅವರು ಕೂಡ ನಟಿಸಿದ್ದರು. ಇನ್ನು ಶಂಕರ್ ನಾಗ್ ರವರ ನಿರ್ದೇಶನದಲ್ಲಿ ಮಾಲ್ಗುಡಿ ಡೇಸ್ ಮೂಲಕ ಕಿರುತೆರೆಗೆ ಕೂಡ ನಮ್ಮೆಲ್ಲರ ನೆಚ್ಚಿನ ದಾದ ಕಾಲಿಟ್ಟಿದ್ದರು. ಸಕಲಕಲಾವಲ್ಲಭ ಸಾಹಸಸಿಂಹ ವಿಷ್ಣುವರ್ಧನ್ ಎಂದರೆ ಕೂಡ ತಪ್ಪಾಗಲಾರದು.

Comments are closed.