ಅಂಬಾನಿ ಮನೆಯನ್ನು ಕೂಡ ನಾಚಿಸುವಂತಹ ರಾಮಚರಣ್ ರವರ ಐಷಾರಾಮಿ ಬಂಗಲೆ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತರಲ್ಲಿ ಪ್ರಮುಖವಾಗಿ ಕಾಣಿಸುವ ಹೆಸರೆಂದರೆ ಅದು ಮುಖೇಶ್ ಅಂಬಾನಿ ಅವರ ಹೆಸರು. ಹೌದು ಗೆಳೆಯರೆ ಮುಕೇಶ್ ಅಂಬಾನಿ ಅವರು ನಮ್ಮ ಭಾರತ ದೇಶದಲ್ಲಿ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಹಲವಾರು ವರ್ಷಗಳಿಂದ ಇದ್ದಾರೆ. ಈ ಜಗತ್ತಿನಲ್ಲಿ ಯಾವ ವಸ್ತುವನ್ನು ಇಷ್ಟಪಟ್ಟರು ಕೂಡ ಅವರು ಕ್ಷಣಮಾತ್ರದಲ್ಲಿ ಖರೀದಿಸಬಹುದಾಗಿದೆ. ಅಷ್ಟರ ಮಟ್ಟಿಗೆ ಹಣವನ್ನು ಗಳಿಸಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಅವರು ದುಬಾರಿ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದಾರೆ.

ram charan house 3 | ಅಂಬಾನಿ ಮನೆಯನ್ನು ಕೂಡ ನಾಚಿಸುವಂತಹ ರಾಮಚರಣ್ ರವರ ಐಷಾರಾಮಿ ಬಂಗಲೆ ಹೇಗಿದೆ ಗೊತ್ತೇ??
ಅಂಬಾನಿ ಮನೆಯನ್ನು ಕೂಡ ನಾಚಿಸುವಂತಹ ರಾಮಚರಣ್ ರವರ ಐಷಾರಾಮಿ ಬಂಗಲೆ ಹೇಗಿದೆ ಗೊತ್ತೇ?? 3

ಅದರಲ್ಲೂ ಮುಂಬೈನಲ್ಲಿ ಇರುವಂತಹ ಅವರ ಮನೆ ಆಂಟಿಲಾ ಇಂದಿಗೂ ಕೂಡ ವಿಶ್ವದಲ್ಲಿ ಅತ್ಯಂತ ದುಬಾರಿ ಮನೆಯನ್ನು ಹೆಸರನ್ನು ಪಡೆದುಕೊಂಡಿದೆ. ಹೌದು ಗೆಳೆಯರೇ ಹಲವಾರು ಅಂತಸ್ತುಗಳ ಈ ಮನೆಗೆ ಮುಕೇಶ್ ಅಂಬಾನಿ ಅವರು ಖರ್ಚು ಮಾಡಿದ್ದು ಬರೋಬ್ಬರಿ ಒಂದು ಸಾವಿರ ಕೋಟಿಗೂ ಅಧಿಕ. ವಿಶ್ವದ ಪ್ರತಿಯೊಬ್ಬರಿಗೂ ಕೂಡ ಈ ಮನೆಯ ಕುರಿತಂತೆ ಹಾಗೂ ಮುಕೇಶ್ ಅಂಬಾನಿ ಅವರ ಕುರಿತಂತೆ ತಿಳಿದಿದೆ. ಆದರೆ ಮುಕೇಶ್ ಅಂಬಾನಿ ಅವರ ಮನೆಗೆ ಸೆಡ್ಡು ಹೊಡೆಯುವಂತೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಆಗಿರುವ ರಾಮಚರಣ್ ರವರ ಮನೆ ಇದೆ ಎನ್ನುವುದಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಆಗುತ್ತಿದೆ.

ಹೌದು ಗೆಳೆಯರೇ ಮೆಗಾಸ್ಟಾರ್ ಚಿರಂಜೀವಿ ಅಂದರೆ ತಮ್ಮ ತಂದೆಯೊಂದಿಗೆ ಹೈದರಾಬಾದ್ ನಲ್ಲಿರುವ ಇದೇ ಮನೆಯಲ್ಲಿ ರಾಮಚರಣ್ ರವರು ವಾಸಿಸುತ್ತಾರೆ. ಈ ಮನೆಯಲ್ಲಿ ವಿಶ್ವದ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳು ಕೂಡ ಅಡಕವಾಗಿದೆ. ಯಾವುದೇ ಕೊರತೆ ಇಲ್ಲದಂತೆ ಬಂಗಲೆ ಅಥವಾ ಅರಮನೆಯಂತೆ ಈ ಮನೆ ಕಾಣಿಸುತ್ತದೆ. ಖಂಡಿತವಾಗಿ ಈ ಮನೆ ಹೈದರಾಬಾದ್ನಲ್ಲಿ ಇರದೇ ಮುಂಬೈನಲ್ಲಿ ಇದ್ದಿದ್ದರೆ ಖಂಡಿತವಾಗಿ ಅಂಬಾನಿಯವರ ಮನೆಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುತ್ತಿತ್ತು ಎಂಬುದಾಗಿ ಎಲ್ಲರೂ ಹೇಳುತ್ತಾರೆ. ನೀವು ಕೂಡ ರಾಮಚರಣ್ ರವರ ಐಷಾರಾಮಿ ಮನೆಯ ಫೋಟೋಗಳನ್ನು ನೋಡಬಹುದಾಗಿದೆ.

ram charan house 1 | ಅಂಬಾನಿ ಮನೆಯನ್ನು ಕೂಡ ನಾಚಿಸುವಂತಹ ರಾಮಚರಣ್ ರವರ ಐಷಾರಾಮಿ ಬಂಗಲೆ ಹೇಗಿದೆ ಗೊತ್ತೇ??
ಅಂಬಾನಿ ಮನೆಯನ್ನು ಕೂಡ ನಾಚಿಸುವಂತಹ ರಾಮಚರಣ್ ರವರ ಐಷಾರಾಮಿ ಬಂಗಲೆ ಹೇಗಿದೆ ಗೊತ್ತೇ?? 4

Comments are closed.