ನಾಳಿನ ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ಗಮನ ಹರಿಸಬೇಕಾದ ಅಂಶಗಳು ಯಾವ್ಯಾವು ಗೊತ್ತೇ?? ಕೊಂಚ ಯಾಮಾರಿದರೂ ಸೋಲು ಖಚಿತ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಲ್ಲಿ 8 ಪಂದ್ಯಗಳನ್ನು ಆಡಿದೆ. ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಮತ್ತು ಪಾಯಿಂಟ್ಸ್ ಟೇಬಲ್ ನಲ್ಲಿ ಐದನೇ ಸ್ಥಾನದಲ್ಲಿದೆ. ಈ ಬಾರಿ ಕ್ವಾಲಿಫೈಯರ್ ಹಂತಕ್ಕೆ ತಲುಪುವುದಕ್ಕೆ ಸಾಕಷ್ಟು ಕಾಂಪಿಟೇಶನ್ ತಂಡಗಳ ನಡುವೆ ಇದ್ದು ಈ ಬಾರಿ ಯಾರು ಗೆಲ್ಲುತ್ತಾರೆ ಯಾರು ಕ್ವಾಲಿಫೈಯರ್ ಹಂತಕ್ಕೆ ತಲುಪುತ್ತಾರೆ ಎಂದು ಅಂದಾಜಿಸುವುದು ಸಾಕಷ್ಟು ಕಷ್ಟಕರವಾಗಿದೆ ಎಂದು ಹೇಳಬಹುದಾಗಿದೆ.

ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ರಾಜಸ್ತಾನ ರಾಯಲ್ಸ್ ವಿರುದ್ಧ ನಾಳೆ ಆಡಲಿದೆ. ಈಗಾಗಲೇ ಈ ಬಾರಿಯ ಟಾಟಾ ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ತಂಡದ ಎದುರು ಆಡಿದ್ದು ಅದರಲ್ಲಿ ಈಗಾಗಲೇ ಗೆದ್ದಿದೆ. ಆದರೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುತ್ತಿದ್ದು ಸಾಕಷ್ಟು ಬದಲಾವಣೆಗಳು ಇವೆ.

rcb rr 2022 2 | ನಾಳಿನ ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ಗಮನ ಹರಿಸಬೇಕಾದ ಅಂಶಗಳು ಯಾವ್ಯಾವು ಗೊತ್ತೇ?? ಕೊಂಚ ಯಾಮಾರಿದರೂ ಸೋಲು ಖಚಿತ. ಯಾಕೆ ಗೊತ್ತೇ??
ನಾಳಿನ ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ಗಮನ ಹರಿಸಬೇಕಾದ ಅಂಶಗಳು ಯಾವ್ಯಾವು ಗೊತ್ತೇ?? ಕೊಂಚ ಯಾಮಾರಿದರೂ ಸೋಲು ಖಚಿತ. ಯಾಕೆ ಗೊತ್ತೇ?? 3

ಯಾಕೆಂದರೆ ಇತ್ತೀಚಿಗಷ್ಟೇ ತಂದ ಇದರ ಹೈದರಾಬಾದ್ ತಂಡದ ವಿರುದ್ಧ ನಡೆದಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 68 ರನ್ನುಗಳಿಗೆ ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿ 9 ವಿಕೆಟ್ಗಳ ಹೀನಾಮಾನ ಸೋಲನ್ನು ನೋಡಿದೆ. ಕೇವಲ ಅಷ್ಟು ಮಾತ್ರವಲ್ಲದೆ ರಾಜಸ್ಥಾನದಲ್ಲಿ ತಂಡವು ಕೂಡ ಈಗ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಎರಡರಲ್ಲಿ ಸೋತು ಪಾಯಿಂಟ್ಸ್ ಟೇಬಲ್ ನಲ್ಲಿ ಮೂರನೇ ಸ್ಥಾನದಲ್ಲಿ ಮಿಂಚುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಇಬ್ಬರು ಆಟಗಾರರ ಪ್ರದರ್ಶನ ಎನ್ನುವುದು ನಿಜಕ್ಕೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಿಜವಾದ ಚಾಲೆಂಜ್ ಆಗಿ ಪರಿಣಮಿಸಲಿದೆ.

ಹೌದು ಗೆಳೆಯರೇ ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಜಾಸ್ ಬಟ್ಲರ್ ರವರು ಏಳು ಪಂದ್ಯಗಳಲ್ಲಿ ಮೂರು ಸಂಚುರಿ ಸಹಿತ 491 ರನ್ನುಗಳನ್ನು ಬಾರಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂದ್ಯವನ್ನು ಗೆಲ್ಲಲು ಮೊದಲು ಜಾಸ್ ಬಟ್ಲರ್ ರವರನ್ನು ಸೋಲಿಸುವುದು ಪ್ರಮುಖವಾಗಿದೆ ಅಂದರೆ ಅವರನ್ನು ಮೊದಲಿಗೆ ಔಟ್ ಮಾಡುವುದು ಪ್ರಮುಖವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ತಂಡದಿಂದ ಎದುರಿಸಬೇಕಾಗಿರುವ ಮತ್ತೊಂದು ಕಠಿಣ ಆಟಗಾರ ಎಂದರೆ ಅದು ಯಜುವೇಂದ್ರ ಚಹಲ್.

ಹೌದು ಗೆಳೆಯರೇ ಯಜುವೇಂದ್ರ ಚಹಲ್ ಅವರಿಗಾಗಲಿ ಏಳು ಪಂದ್ಯಗಳಿಂದ 18 ವಿಕೆಟ್ ಗಳನ್ನು ಪಡೆದು ಅತ್ಯಂತ ಹೆಚ್ಚು ವಿಕೆಟ್ ತೆಗೆದಿರುವ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಚಹಾಲ್ ರವರ ಬೌಲಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕಾಡುವುದು ಪ್ರಮುಖವಾಗಿದ್ದು ಇವರನ್ನು ನೋಡಿಕೊಂಡು ಆಟವಾಡಬೇಕು. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಓಪನಿಂಗ್ ಬ್ಯಾಟ್ಸ್ ಮನ್ ಕ್ರಮಾಂಕದಲ್ಲಿ ಅನುಜ್ ರಾವತ್ ರವರ ಬದಲಿಗೆ ಯಾರು ಆಡಬೇಕು ಎನ್ನುವುದನ್ನು ನಿರ್ಧರಿಸಬೇಕಾಗಿದೆ.

rcb rr 2022 4 | ನಾಳಿನ ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ಗಮನ ಹರಿಸಬೇಕಾದ ಅಂಶಗಳು ಯಾವ್ಯಾವು ಗೊತ್ತೇ?? ಕೊಂಚ ಯಾಮಾರಿದರೂ ಸೋಲು ಖಚಿತ. ಯಾಕೆ ಗೊತ್ತೇ??
ನಾಳಿನ ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ಗಮನ ಹರಿಸಬೇಕಾದ ಅಂಶಗಳು ಯಾವ್ಯಾವು ಗೊತ್ತೇ?? ಕೊಂಚ ಯಾಮಾರಿದರೂ ಸೋಲು ಖಚಿತ. ಯಾಕೆ ಗೊತ್ತೇ?? 4

ಅದರಲ್ಲಿಯೂ ವಿರಾಟ್ ಕೊಹ್ಲಿ ರವರ ಫಾರ್ಮ್ ಹೇಳುವುದು ತಂಡಕ್ಕೆ ದೊಡ್ಡ ಮಟ್ಟದ ಸಮಸ್ಯೆಯಾಗಿ ಪರಿಣಮಿಸಿದ್ದು ಅವರು ಯಾವ ಕ್ರಮಾಂಕದಲ್ಲಿ ಆಟವಾಡಲಿದ್ದಾರೆ ಎನ್ನುವುದು ಕೂಡ ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ. ಈಗಾಗಲೇ ತಂಡವನ್ನು ಗಮನಿಸಿದರೆ ಖಂಡಿತವಾಗಿ ರಾಜಸ್ಥಾನ್ ರೋಲ್ ತಂಡದ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಎರಡರಿಂದ ಮೂರು ಬದಲಾವಣೆಗಳು ನಡೆಯುವುದಂತೂ ಖಂಡಿತ ಎಂಬುದಾಗಿ ಅಂದಾಜಿಸಲಾಗುತ್ತಿದೆ. ಹೀಗಾಗಿ ಈ ಎಲ್ಲ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಡುಪ್ಲೆಸಿಸ್ ಹಾಗೂ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ತಂಡವನ್ನು ಅಂದರೆ ಪ್ಲೇಯಿಂಗ್ 11 ಅನ್ನು ನಿರ್ಧರಿಸುವುದು ಉಚಿತವಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.