ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಕೂಲ್ ಕ್ಯಾಪ್ಟನ್ ಡುಪ್ಲೆಸಿಸ್, ಹೈದರಾಬಾದ್ ವಿರುದ್ಧ ಸೋಲಿನ ಕುರಿತು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್ ನಲ್ಲಿ ಗಮನಾರ್ಹ ಪ್ರದರ್ಶನವನ್ನು ನೀಡಿಕೊಂಡು ಬಂದಿತ್ತು. ಎಲ್ಲಾ ಪಂದ್ಯಗಳನ್ನು ಕೂಡ ಅಧಿಕಾರಯುತವಾಗಿ ಗೆದ್ದು ಪಾಯಿಂಟ್ಸ್ ಟೇಬಲ್ ನಲ್ಲಿ ತನ್ನ ಡಾಮಿನೇಷನ್ ತೋರಿಸಿತ್ತು. ಆದರೆ ಮೊನ್ನೆಯಷ್ಟೇ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕಂಡಂತಹ ಒಂಬತ್ತು ವಿಕೆಟ್ ಗಳ ಸೋಲು ಎನ್ನುವುದು ನಿಜಕ್ಕೂ ಕೂಡ ತಂಡವನ್ನು ಕಂಗೆಡಿಸಿತ್ತು ಎಂದರೆ ತಪ್ಪಾಗಲಾರದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂತಹ ಬಲಿಷ್ಠ ತಂಡ ಇಂತಹ ಚಿಕ್ಕ ಹಾಗೂ ಹೀನಾಯ ಸೋಲಿಗೆ ತುತ್ತಾಗುತ್ತದೆ ಎಂದು ನಂಬಲು ಸಾಧ್ಯವಿಲ್ಲ.

ಮೊದಲು ಬ್ಯಾಟಿಂಗ್ ಗೆ ಇಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಪೂರ್ಣವಾಗಿ ವೈಫಲ್ಯವನ್ನು ಕಂಡು ಕೇವಲ 68 ರನ್ನುಗಳಿಗೆ ಆಲೌಟ್ ಆಗುತ್ತದೆ. ಅದರಲ್ಲೂ ಡುಪ್ಲೆಸಿಸ್ ವಿರಾಟ್ ಕೊಹ್ಲಿ ದಿನೇಶ್ ಕಾರ್ತಿಕ್ ಅವರಂತಹ ಆಟಗಾರರು ಒಬ್ಬರಾದಮೇಲೊಬ್ಬರಂತೆ ತಮ್ಮ ವಿಕೆಟ್ಗಳನ್ನು ಒಂದಂಕಿಗೆ ನೀಡಿ ಹೋಗಿದ್ದು ನಿಜಕ್ಕೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿತ್ತು. ಇನ್ನು ಈ 68 ರನ್ನುಗಳ ಗುರಿಯನ್ನು ಬೆನ್ನತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ ಎಂಟು ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿಯನ್ನು ಸುಲಭವಾಗಿ ಪೂರೈಸಿತ್ತು. ಇನ್ನು ಈ ಕುರಿತಂತೆ ಅಸಮಾಧಾನದ ರೀತಿಯಲ್ಲಿ ಡುಪ್ಲೆಸಿಸ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

rcb srh 2022 1 | ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಕೂಲ್ ಕ್ಯಾಪ್ಟನ್ ಡುಪ್ಲೆಸಿಸ್, ಹೈದರಾಬಾದ್ ವಿರುದ್ಧ ಸೋಲಿನ ಕುರಿತು ಹೇಳಿದ್ದೇನು ಗೊತ್ತೇ??
ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಕೂಲ್ ಕ್ಯಾಪ್ಟನ್ ಡುಪ್ಲೆಸಿಸ್, ಹೈದರಾಬಾದ್ ವಿರುದ್ಧ ಸೋಲಿನ ಕುರಿತು ಹೇಳಿದ್ದೇನು ಗೊತ್ತೇ?? 2

ಸನ್ರೈಸರ್ಸ್ ಹೈದರಾಬಾದ್ ತಂಡದ ಸಂಘಟಿತ ಬೌಲಿಂಗ್ ದಾ’ಳಿಗೆ ನಮ್ಮ ಆಟಗಾರರು ರನ್ ಗಳಿಸುವಲ್ಲಿ ಪರದಾಡಿದರು. ನಾವು ನೋಡಿಕೊಂಡು ನಿಧಾನ ಗತಿಯಲ್ಲಿ ಆಡಬೇಕಾಗಿತ್ತು ಆದರೆ ನಮ್ಮ ಬ್ಯಾಟ್ಸ್ಮನ್ಗಳು ಸನ್ರೈಸರ್ಸ್ ಹೈದರಾಬಾದ್ ತಂಡದ ಬೌಲರ್ಗಳ ದಾ’ಳಿಯನ್ನು ಅಂದಾಜಿಸುವಲ್ಲಿ ವಿಫಲರಾದರು ಹಾಗೂ ಆರಂಭಿಕವಾಗಿ ನಾವು ವಿಕೆಟ್ಗಳನ್ನು ಬೇಗ ಒಪ್ಪಿಸಿದ್ದು ತಂಡದ ಸೋಲಿಗೆ ಕಾರಣವಾಗಿದೆ ಎಂಬುದಾಗಿ ಹೇಳಿದ್ದಾರೆ. ಈ ಪಿಚ್ ನಲ್ಲಿ ನಾವು ಸುಲಭವಾಗಿ ರನ್ ಗಳಿಸಬಹುದು ಎಂಬುದಾಗಿ ನಾನು ಭಾವಿಸಿದ್ದೆ ಆದರೆ ನಾವು ಎಚ್ಚರತಪ್ಪಿ ಆರಂಭಿಕ ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿದೆವು. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿದೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ.

Comments are closed.