ಸ್ವಂತ ಮನೆ ಇಲ್ಲದೆ ವಿಶ್ವದ ಶ್ರೀಮಂತ ಉದ್ಯಮಿ ಮಲಗುವುದು ಎಲ್ಲಿ ಗೊತ್ತೇ?? ಇಷ್ಟೆಲ್ಲ ಆಸ್ತಿ ಇದ್ದರೂ ಈತ ಮಲಗುವುದು ಎಲ್ಲಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭೂಮಿಯಲ್ಲಿ ಬದುಕಿದ ಎಲ್ಲರಿಗೂ ಸಾಮಾನ್ಯವಾಗಿ ಇರುವ ಆಸೆ ಎಂದರೇ ನಾವು ಶ್ರೀಮಂತರಾಗಬೇಕು. ಹೆಚ್ಚೆಚ್ಚು ಹಣಗಳಿಸಬೇಕು, ವೈಭವೋಪೇತ ಬಂಗಲೆಗಳಲ್ಲಿ ವಾಸ ಮಾಡಬೇಕು, ದುಬಾರಿ ವಸ್ತುಗಳು, ಐಷಾರಾಮಿ ಬದುಕನ್ನು ಸಾಗಿಸಬೇಕು ಎಂಬುದು. ಆದರೇ ವಾಸ್ತವವಾಗಿ ಶ್ರೀಮಂತರು ಬಹಳ ಸರಳ ಜೀವನ ನಡೆಸುತ್ತಾರೆ. ಅದು ಆಗಾಗ ನಮಗೆ ತಿಳಿಯುತ್ತದೆ.

ಸದ್ಯ ವಿಶ್ವದ ನಂಬರ್ 1 ಶ್ರೀಮಂತ ಎಂದರೇ ಅದು ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್. ಹೌದು ಜಗತ್ತಿನ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿಯೂ ತನ್ನ ಕಂಪನಿಯ ಕಬಂಧ ಬಾಹುಗಳನ್ನು ಚಾಚುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಇವರ ಬಳಿ ಇರುವ ಒಟ್ಟು ಆಸ್ತಿ ಬರೋಬ್ಬರಿ 261 ಬಿಲಿಯನ್ ಡಾಲರ್. ಅಂದರೇ ಭಾರತೀಯ ಕರೆನ್ಸಿ ಪ್ರಕಾರ 20 ಲಕ್ಷ ಕೋಟಿ ರೂಪಾಯಿ. ಅಂದರೇ ಭಾರತದ ಅರ್ಧ ಗಾತ್ರದ ಬಜೆಟ್ ನಷ್ಟು.

elon musk | ಸ್ವಂತ ಮನೆ ಇಲ್ಲದೆ ವಿಶ್ವದ ಶ್ರೀಮಂತ ಉದ್ಯಮಿ ಮಲಗುವುದು ಎಲ್ಲಿ ಗೊತ್ತೇ?? ಇಷ್ಟೆಲ್ಲ ಆಸ್ತಿ ಇದ್ದರೂ ಈತ ಮಲಗುವುದು ಎಲ್ಲಿ ಗೊತ್ತೇ??
ಸ್ವಂತ ಮನೆ ಇಲ್ಲದೆ ವಿಶ್ವದ ಶ್ರೀಮಂತ ಉದ್ಯಮಿ ಮಲಗುವುದು ಎಲ್ಲಿ ಗೊತ್ತೇ?? ಇಷ್ಟೆಲ್ಲ ಆಸ್ತಿ ಇದ್ದರೂ ಈತ ಮಲಗುವುದು ಎಲ್ಲಿ ಗೊತ್ತೇ?? 2

ಆದರೇ ಇಷ್ಟೆಲ್ಲಾ ಆಸ್ತಿ ಇರುವ ಇವರು ಈಗ ಒಂದು ಶಾಕಿಂಗ್ ವಿಷಯ ಬಿಚ್ಚಿಟ್ಟಿದ್ದಾರೆ. ಇವರ ಬಳಿ ಉಳಿದುಕೊಳ್ಳಲು ಮನೆಯೇ ಇಲ್ಲವಂತೆ. ಇವರು ರಾತ್ರಿ ಉಳಿದುಕೊಳ್ಳಲು ಗೆಳೆಯರ ಮನೆಯನ್ನು ಅವಲಂಬಿಸಿದ್ದಾರೆ. ತಮ್ಮ ಕಂಪನಿಗೆ ಹೋದರೇ ಅಲ್ಲಿಯ ಬೇ ಏರಿಯಾದಲ್ಲಿ ಮಲಗಿಕೊಳ್ಳುತ್ತಾರಂತೆ. ಇದುವರೆಗೂ ತಾವು ಉಳಿಯಲು ಸ್ವಂತ ಮನೆಯನ್ನು ಖರೀದಿಸಬೇಕು ಎಂಬ ಆಲೋಚನೆ ಅವರಿಗೆ ಬಂದಿಲ್ಲವಂತೆ. ಇನ್ನು ಓಡಾಡಲು ಅವರು ಬಳಿ ಸ್ವಂತ ಯಾಚ್ ಇಲ್ಲವಂತೆ. ವರ್ಷದ 365 ದಿನವೂ ನಾನು ಕೆಲಸ ಮಾಡುತ್ತೇನೆ. ನನಗೆ ರಜೆ ಎಂದರೇ ಏನು ಎಂಬುದು ತಿಳಿದಿಲ್ಲ. ನನಗೆ ರಜೆ ತೆಗೆದುಕೊಳ್ಳುವ ಅನಿವಾರ್ಯತೆ ಯೇ ಬಂದಿಲ್ಲ ಎಂದು ಹೇಳುತ್ತಾರೆ. ನೋಡಿ ಒಟ್ಟಿನಲ್ಲಿ ಜಗತ್ತಿನ ಅತ್ಯಂತ ಶ್ರೀಮಂತನ ಕತೆ ಹೀಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments are closed.