ಪಂದ್ಯವನ್ನು ಗೆದ್ದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೋಲಿಸಿ ಆರ್ಸಿಬಿ ತಂಡದ ಕುರಿತಂತೆ ಡುಪ್ಲೆಸಿಸ್ ಅವರು ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಳೆದೆಲ್ಲ ಬಾರಿಗಿಂತ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಕಷ್ಟು ಬಲಿಷ್ಠವಾಗಿ ಐಪಿಎಲ್ ನಲ್ಲಿ ಪ್ರದರ್ಶನವನ್ನು ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಪೂರ್ಣಪ್ರಮಾಣದಲ್ಲಿ ಆಟಗಾರರು ಇನ್ನು ತಂಡವನ್ನು ಸೇರಿಲ್ಲ ಅದಕ್ಕಿಂತ ಮುಂಚೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿ’ಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಡುಪ್ಲೆಸಿಸ್ ರವರು ನಾಯಕನಾಗಿ ಬಂದಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದು ಇದು ತಂಡದ ಗೆಲುವಿಗೆ ಸಕಾರತ್ಮಕ ಪರಿಣಾಮವಾಗಿ ಬೀರಿದೆ.

ಈ ಬಾರಿ ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಬಲ ಸ್ಪರ್ಧೆಯನ್ನು ಒಡ್ಡುತ್ತಿದೆ. ಬಲಿಷ್ಠ ರಾಜಸ್ತಾನ ರಾಯಲ್ಸ್ ತಂಡವನ್ನು ಮಣಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆತ್ಮವಿಶ್ವಾಸದಲ್ಲಿ ಗಣನೀಯವಾಗಿ ಹೆಚ್ಚಳ ಕಂಡುಬಂದಿದೆ. ನಾಯಕನಾಗಿ ಡುಪ್ಲೆಸಿಸ್ ರವರು ತಂಡದ ಕುರಿತಂತೆ ಸಾಕಷ್ಟು ಭರವಸೆಯನ್ನು ಹೊಂದಿದ್ದಾರೆ. ಈ ತಂಡ ಯಾವುದೇ ಸಂದರ್ಭದಲ್ಲಿ ಯಾವ ಕಷ್ಟಕರ ಪರಿಸ್ಥಿತಿಯನ್ನು ಕೂಡ ನಿವಾರಿಸಬಲ್ಲದು ಎಂಬುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಕೆಲವೊಂದು ವಿಚಾರಗಳನ್ನು ಡುಪ್ಲೆಸಿಸ್ ರವರು ಹಂಚಿಕೊಂಡಿದ್ದಾರೆ.

duplesis rcb 2022 1 | ಪಂದ್ಯವನ್ನು ಗೆದ್ದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೋಲಿಸಿ ಆರ್ಸಿಬಿ ತಂಡದ ಕುರಿತಂತೆ ಡುಪ್ಲೆಸಿಸ್ ಅವರು ಹೇಳಿದ್ದೇನು ಗೊತ್ತಾ??
ಪಂದ್ಯವನ್ನು ಗೆದ್ದ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೋಲಿಸಿ ಆರ್ಸಿಬಿ ತಂಡದ ಕುರಿತಂತೆ ಡುಪ್ಲೆಸಿಸ್ ಅವರು ಹೇಳಿದ್ದೇನು ಗೊತ್ತಾ?? 2

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಡುಪ್ಲೆಸಿಸ್ ರವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಬಂದವರು. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೂಡ ಇಂತಹ ಫಿನಿಶಿಂಗ್ ಅನ್ನು ನಾನು ನೋಡಿಲ್ಲ ಎಂಬುದಾಗಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ರೋಚಕವಾಗಿ ಗೆದ್ದನಂತರ ಹೇಳಿದ್ದಾರೆ. ಮಾತ್ರವಲ್ಲದೆ ದಿನೇಶ್ ಕಾರ್ತಿಕ್ ರವರು ಫಿನಿಶರ್ ಪಾತ್ರವನ್ನು ಕೂಡ ಅಭಿನಂದಿಸಿದ್ದಾರೆ. ಈಗಾಗಲೇ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅವರು ಕೂಡ ಬ್ಯಾಟಿಂಗ್ ಪ್ರದರ್ಶನವನ್ನು ಅದ್ಭುತವಾಗಿ ನೀಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿ ತಮ್ಮ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಹರ್ಷಲ್ ಹಾಗೂ ಸಿರಾಜ್ ಇಬ್ಬರು ಕೂಡ ಬೌಲಿಂಗ್ ವಿಭಾಗದಲ್ಲಿ ಪರಿಣಾಮ ಬೀರುತ್ತಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಬಂದಮೇಲೆ ತಂಡ ಪರಿಪೂರ್ಣ ಸಜ್ಜಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.