ಬಿಗ್ ನ್ಯೂಸ್: ಫೇಸ್ಬುಕ್ ವತಿಯಿಂದ ಲಕ್ಷಗಟ್ಟಲೆ ಸಾಲ ನೀಡಲು ನಿರ್ಧಾರ, ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಮಾಜಿಕ ಜಾಲತಾಣದಲ್ಲಿ ಜನರು ಈಗ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಅದರಲ್ಲೂ ಮುಖ್ಯವಾಗಿ ಫೇಸ್ಬುಕ್ ಇನ್ಸ್ಟಾಗ್ರಾಂ ಗಳು ಜನರನ್ನು ಹೆಚ್ಚು ಆವರಿಸಿಕೊಂಡು ಬಿಟ್ಟಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಇಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುವುದು, ತಮ್ಮ ಅಭಿಪ್ರಾಯವನ್ನು ಹೇಳುವುದು, ರಿಲ್ಸ್ ಮಾಡುವುದು ಹೀಗೆ ಹಲವಾರು ಚಟುವಟಿಕೆಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದೆಲ್ಲದರ ಜೊತೆಗೆ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ಹಣವನ್ನು ಕೂಡ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲ ಇದೀಗ ಮೆಟಾ ಮಾಲೀಕತ್ವದಲ್ಲಿ ಇರುವ ಫೇಸ್ಬುಕ್ ನೀವು ವ್ಯಾಪಾರ ಮಾಡುವ ಹಾಗಿದ್ದರೆ ನಿಮಗೆ ಸಾಲವನ್ನು ಕೂಡ ಕೊಡುತ್ತೆ! ಈ ವಿಷಯ ಹಲವರಿಗೆ ಗೊತ್ತಿರಲಿಕ್ಕಿಲ್ಲ. ಹಾಗಾದರೆ ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿಸಿ ಕೊಡುತ್ತೇವೆ.

ಫೇಸ್ಬುಕ್ ಎನ್ನುವುದು ಈಗ ಕೇವಲ ಮನರಂಜನೆ ಮಾತ್ರವಲ್ಲದೆ ಹಣ ಗಳಿಸಲು ಕೂಡ ಉತ್ತಮ ವೇದಿಕೆಯಾಗಿದೆ. ಹಲವರು ಫೇಸ್ಬುಕ್ನಲ್ಲಿ ಖಾತೆಯನ್ನು ತೆಗೆದು ಜಾಹೀರಾತುಗಳನ್ನು ಪ್ರಚಾರ ಮಾಡುವ ಮೂಲಕ ಅಥವಾ ತಮ್ಮ ಉತ್ಪನ್ನಗಳನ್ನು ಜಾಹಿರಾತು ಮಾಡುವುದರ ಮೂಲಕ ಹಣ ಗಳಿಸುತ್ತಿದ್ದಾರೆ. ಇದರ ಜೊತೆಗೆ ಫೇಸ್ಬುಕ್ ನೀವು ಸಣ್ಣ ವ್ಯಾಪಾರವನ್ನು ಮಾಡುತ್ತಿದ್ದರೆ ಅದಕ್ಕೆ ಕೇವಲ ಮೂರೇ ದಿನಗಳಲ್ಲಿ ಹಣ ನಿಮ್ಮ ಕೈಸೇರುವಂತೆ ಸಾಲ ಸೌಲಭ್ಯವನ್ನು ಕೂಡ ನೀಡುತ್ತಿದೆ. ಈ ಸಾಲವನ್ನು ತೆಗೆದುಕೊಳ್ಳಲು ಏನು ಮಾಡಬೇಕು? ಯಾವ ರೀತಿಯ ಪ್ರಕ್ರಿಯೆ ಇರುತ್ತದೆ ಎಂಬುದನ್ನು ಇಲ್ಲಿ ಹೇಳುತ್ತೇವೆ.

ಫೇಸ್ಬುಕ್ ಸುಮಾರು 2 ಲಕ್ಷದಿಂದ 50 ಲಕ್ಷಗಳವರೆಗೆ ಸಾಲವನ್ನು ನೀಡುತ್ತದೆ. ಈಗಾಗಲೇ ದೇಶದ ಸುಮಾರು 300 ನಗರಗಳಲ್ಲಿ ಈ ಸಾಲ ಸೌಲಭ್ಯ ಲಭ್ಯವಿದೆ. ಈ ಸಾಲವನ್ನು ಪಡೆಯಲು ನೀವು ಬೇರೆಡೆ ಸಾಲ ತೆಗೆದುಕೊಳ್ಳುವಾಗ ಏನಾದರೂ ಅಡವಿಡುವಂತೆ ಇಲ್ಲಿ ಮಾಡಬೇಕಾಗಿಲ್ಲ. ನೀವು ಸಲ್ಲಿಸುವ ದಾಖಲೆಗಳು ಸರಿಯಾಗಿದ್ದರೆ ಕೇವಲ ಮೂರೇ ದಿನಗಳಲ್ಲಿ ನಿಮ್ಮ ಸಾಲದ ಮೊತ್ತ ನಿಮ್ಮ ಖಾತೆಯನ್ನು ಸೇರುತ್ತದೆ. ಫೇಸ್‌ಬುಕ್‌ನ ಮಾಲೀಕ ಕಂಪನಿ ಮೆಟ ಸ್ವತಃ ಈ ಸಾಲವನ್ನು ನೀಡುವುದಿಲ್ಲ ಇದಕ್ಕಾಗಿ ಕಂಪನಿ ಇಂಡಿಫಿ (Indifi) ಜೊತೆ ಪಾಲುದಾರಿಕೆ ಮಾಡಿಕೊಂಡಿದೆ ಎಂಬುದನ್ನು ನೆನಪಿಡಿ.

ಇನ್ನು ಸಾಲವನ್ನು ತೆಗೆದುಕೊಳ್ಳಲು ನೀವು ಮಾಡಬೇಕಾಗಿರುವ ಮುಖ್ಯವಾದ ಅಂಶವೆಂದರೆ ಸ್ಮಾಲ್ ಬಿಸಿನೆಸ್ ಲೋನ್ ಇನಿಶಿಯೇಟಿವ್‌ಗೆ ಭೇಟಿ ನೀಡಿ ಸಾಲವನ್ನು ಪಡೆಯಬಹುದು. ಆದರೆ ಅದಕ್ಕೂ ಮೊದಲು ನೀವು ಕನಿಷ್ಟ 6 ತಿಂಗಳ ಕಾಲ ಮೆಟಾದ ಸಂಯೋಜಿತವಾಗಿರುವ ಯಾವುದೇ ಅಪ್ಲಿಕೇಶನ್‌ನಲ್ಲಿ ನಿಮ್ಮ ವ್ಯಾಪಾರದ ಕುರಿತಾಗಿ ಜಾಹೀರಾತುಗಳನ್ನು ನಿಡುತ್ತಿರಬೇಕು. ಆನಂತರ ಫೇಸ್​ಬುಕ್​, ಬಳಕೆದಾರರನ್ನು ಪರಿಗಣಿಸಿ ಸಾಲ ಒದಗಿಸುತ್ತದೆ.

ಇನ್ನೂ ಫೇಸ್ಬುಕ್ನಲ್ಲಿ ಸಾಲ ಪಡೆದರೆ ನಿಮ್ಮ ಸಾಲದ ಮೊತ್ತಕ್ಕೆ ಅನುಗುಣವಾಗಿ ವಾರ್ಷಿಕವಾಗಿ 17ರಿಂದ 20% ಬಡ್ಡಿದರವನ್ನು ನಿಗದಿಪಡಿಸಲಾಗಿರುತ್ತದೆ. ಹಾಗೆಯೇ ಮಹಿಳಾ ವ್ಯಾಪಾರಸ್ಥರಿಗೆ
0.2%ರಷ್ಟು ಬಡ್ಡಿದರದಲ್ಲಿ ರಿಯಾಯಿತಿ ಸಿಗುತ್ತದೆ. ಫೇಸ್ಬುಕ್ನಲ್ಲಿ ಸಾಲ ಸೌಲಭ್ಯದ ಬಗ್ಗೆ ಸರಿಯಾಗಿ ತಿಳಿದುಕೊಂಡು ಸರಿಯಾದ ದಾಖಲೆಗಳನ್ನು ನೀಡುವುದರ ಮೂಲಕ ನಿಮಗೆ ಅಗತ್ಯವಿರುವಷ್ಟು ಸಾಲವನ್ನು ಪಡೆದು ನಿಮ್ಮ ಉದ್ಯಮವನ್ನು ಉತ್ತಮಗೊಳಿಸಬಹುದು.

Comments are closed.