ನಟ ಅಚ್ಯುತ್ ಕುಮಾರ್ ರವರು ಶೆಟ್ರು ಟೀಮ್ ಬಿಟ್ಟು ಹೊರಗೆ ಬರೋದೇ ಇಲ್ವಾ?? ವರ್ಷಕ್ಕೆ ಎಷ್ಟು ಸಿನಿಮಾ ಮಾಡುತ್ತಾರಂತೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಕೇವಲ ನಾಯಕ ಹಾಗೂ ನಾಯಕಿಯರು ಮಾತ್ರವಲ್ಲದೆ ಪೋಷಕ ನಟರು ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ತನ್ನ ವಿಭಿನ್ನವಾದ ನಟನೆಯಿಂದ ಪ್ರೇಕ್ಷಕರ ಮನಗೆಲ್ಲುವಲ್ಲಿ ಅವರು ಕೂಡ ಯಶಸ್ವಿಯಾಗುತ್ತಾರೆ. ಹೌದು ನಾವು ಇಂದು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಮೂಲಕ ತಮ್ಮ ನಟನಾ ಜರ್ನಿ ಯನ್ನು ಪ್ರಾರಂಭಿಸಿ ಈಗ ಪರಭಾಷೆಗಳಲ್ಲಿ ಕೂಡ ಪೋಷಕ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೌದು ನಾವು ಮಾತಾಡ್ತಿರೋದು ಅಚ್ಯುತ್ ಕುಮಾರ್ ಅವರ ಕುರಿತಂತೆ. ಎಲ್ಲರೂ ಅವರನ್ನು ಪ್ರೀತಿಯಿಂದ ಎಂದು ಕರೆಯುತ್ತಾರೆ ಅಚ್ಯುತಣ್ಣ ಎಂದು ಕರೆಯುತ್ತಾರೆ.

ರಂಗಭೂಮಿ ಹಿನ್ನೆಲೆ ಕಲಾವಿದರೂ ಆಗಿರುವ ಇವರು ಗಿರೀಶ್ ಕಾಸರವಳ್ಳಿ ನಿರ್ದೇಶನದ ಗ್ರಹಬಂಗ ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ಮೊದಲಿಗೆ ನಟನ ವೃತ್ತಿಗೆ ಪಾದಾರ್ಪಣೆ ಮಾಡುತ್ತಾರೆ. ಇದಾದ ನಂತರ ಆ ದಿನಗಳು ಸೇರಿದಂತೆ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರಮುಖ ಪೋಷಕ ನಟನಾಗಿ ಕಾಣಿಸಿಕೊಳ್ಳುತ್ತಾರೆ. ಇಂದು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆದುಕೊಳ್ಳುವಂತಹ ಪೋಷಕ ನಟರಲ್ಲಿ ಅಚ್ಯುತ್ ಕುಮಾರ್ ರವರು ಅಗ್ರಗಣ್ಯ ರಾಗಿ ಕಾಣಿಸಿಕೊಳ್ಳುತ್ತಾರೆ.

achyuth 3 shetty | ನಟ ಅಚ್ಯುತ್ ಕುಮಾರ್ ರವರು ಶೆಟ್ರು ಟೀಮ್ ಬಿಟ್ಟು ಹೊರಗೆ ಬರೋದೇ ಇಲ್ವಾ?? ವರ್ಷಕ್ಕೆ ಎಷ್ಟು ಸಿನಿಮಾ ಮಾಡುತ್ತಾರಂತೆ ಗೊತ್ತೆ??
ನಟ ಅಚ್ಯುತ್ ಕುಮಾರ್ ರವರು ಶೆಟ್ರು ಟೀಮ್ ಬಿಟ್ಟು ಹೊರಗೆ ಬರೋದೇ ಇಲ್ವಾ?? ವರ್ಷಕ್ಕೆ ಎಷ್ಟು ಸಿನಿಮಾ ಮಾಡುತ್ತಾರಂತೆ ಗೊತ್ತೆ?? 2

ಇಂದಿನ ವಿಚಾರದಲ್ಲಿ ನಾವು ಹೇಳಲು ಹೊರಟಿರುವುದು ಅವರು ಒಂದು ವರ್ಷಕ್ಕೆ ಎಷ್ಟು ಸಿನಿಮಾಗಳಲ್ಲಿ ನಡೆಸುತ್ತಾರೆ ಎಂಬುದರ ಕುರಿತಂತೆ. ಇದರ ಕುರಿತಂತೆ ಸ್ವತಹ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಹೌದು ನಟ ಅಚ್ಯುತ್ ಕುಮಾರ್ ಅವರು ಎಷ್ಟು ಬ್ಯುಸಿ ನಟ ಎಂದರೆ ವರ್ಷಕ್ಕೆ ಬರೋಬರಿ 15ರಿಂದ 20 ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಇತ್ತೀಚೆಗೆ ದಕ್ಷಿಣ ಭಾರತದ ಬೇರೆ ಭಾಷೆಗಳಲ್ಲಿ ಕೂಡ ನಟಿಸಲು ಆರಂಭಿಸಿದ್ದರು. ಇನ್ನು ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಕೂಡ ಎಲ್ಲರೂ ಕಾತರರಾಗಿದ್ದಾರೆ. ಅಚ್ಯುತ್ ರವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪು ಹಂಚಿಕೊಳ್ಳಿ.

Comments are closed.