ಮೊನ್ನೆ ತಾನೇ ದೇಶದೆಲ್ಲೆ ಸಂಚಲನ ಮೂಡಿಸಿದ್ದ ಸಾಯಿ ಪಲ್ಲವಿ, ಈಗ ಕನ್ನಡದ ಕುರಿತು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ದಕ್ಷಿಣ ಭಾರತ ಚಿತ್ರರಂಗದ ಸಧ್ಯದ ಮಟ್ಟಿಗೆ ಸಾಕಷ್ಟು ವಿಭಿನ್ನ ಪಾತ್ರಗಳ ಮೂಲಕ ಪ್ರತಿಯೊಂದು ಭಾಷೆಗಳ ಪ್ರೇಕ್ಷಕರನ್ನು ಬೆಳೆಯುತ್ತಿರುವ ನಟಿ ಸಾಯಿಪಲ್ಲವಿ ಅವರ ಕುರಿತಂತೆ ತಿಳಿದೇ ಇದೆ. ನಟಿ ಸಾಯಿ ಪಲ್ಲವಿ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚು ಯಶಸ್ಸನ್ನು ಪಡೆದಿರುವ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಾಯಕ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ನಟನೆ ಹಾಗೂ ನೃತ್ಯದಲ್ಲಿ ಸಾಯಿಪಲ್ಲವಿ ಅವರು ಎತ್ತಿದ ಕೈ ಎಂದು ಹೇಳಬಹುದಾಗಿದೆ.

ಇತ್ತೀಚೆಗೆ ಸಾಕಷ್ಟು ವಿಚಾರಗಳಿಗಾಗಿ ಸುದ್ದಿಯಾಗಿದ್ದ ಸಾಯಿ ಪಲ್ಲವಿ ಅವರು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಹೌದು ಗೆಳೆಯರೇ ಸಾಯಿ ಪಲ್ಲವಿ ನಟನೆ ಮಾಡಿರುವ ಮಹಿಳಾ ಪ್ರಧಾನ ಸಿನಿಮಾ ವಾಗಿರುವ ಗಾರ್ಗಿ ಅತಿಶೀಘ್ರದಲ್ಲೇ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು ಈಗಾಗಲೇ ಪಂಚ ಭಾಷೆಗಳಲ್ಲಿ ಚಿತ್ರದ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಮಹಿಳಾ ಪ್ರಧಾನ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎಂದು ಹೇಳಬಹುದಾಗಿದೆ. ಅದರಲ್ಲೂ ಕನ್ನಡ ಭಾಷೆಯಲ್ಲಿ ಕೂಡ ಸ್ವತಹ ಸಾಯಿ ಪಲ್ಲವಿ ಅವರೇ ಡಬ್ಬಿಂಗ್ ಮಾಡಿರುವುದು ಮತ್ತಷ್ಟು ವಿಶೇಷವಾಗಿದೆ.

saipallavi 1 | ಮೊನ್ನೆ ತಾನೇ ದೇಶದೆಲ್ಲೆ ಸಂಚಲನ ಮೂಡಿಸಿದ್ದ ಸಾಯಿ ಪಲ್ಲವಿ, ಈಗ ಕನ್ನಡದ ಕುರಿತು ಹೇಳಿದ್ದೇನು ಗೊತ್ತೇ??
ಮೊನ್ನೆ ತಾನೇ ದೇಶದೆಲ್ಲೆ ಸಂಚಲನ ಮೂಡಿಸಿದ್ದ ಸಾಯಿ ಪಲ್ಲವಿ, ಈಗ ಕನ್ನಡದ ಕುರಿತು ಹೇಳಿದ್ದೇನು ಗೊತ್ತೇ?? 2

ಸಾಯಿ ಪಲ್ಲವಿ ಅವರಿಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡಲು ನಟಿ ಹಾಗೂ ನಿರ್ದೇಶಕಿ ಯಾಗಿರುವ ಶೀತಲ್ ಶೆಟ್ಟಿ ರವರು ಸಹಾಯ ಮಾಡಿದ್ದಾರೆ ಎಂಬುದಾಗಿ ಈಗಾಗಲೇ ಅವರು ತಿಳಿಸಿದ್ದಾರೆ. ಇನ್ನು ಕನ್ನಡದ ಕುರಿತಂತೆ ನಟಿ ಸಾಯಿ ಪಲ್ಲವಿ ಮಾತನಾಡುತ್ತಾ ನನ್ನ ಮೂಲ ತಮಿಳುನಾಡಿನ ಊಟಿಯ ಕೋಟಗಿರಿ. ನಮ್ಮ ಭಾಷೆ ಬಡಗ. ಮೊದಲಿಗೆ ಈ ಭಾಷೆ ಕೊಂಕಣಿ ಹಾಗೂ ಕನ್ನಡದ ಮಿಶ್ರಣ ಎಂಬುದಾಗಿ ಅಂದುಕೊಂಡಿದ್ದೆ ಆದರೆ ಕನ್ನಡ ಅದಕ್ಕಿಂತ ವಿಭಿನ್ನವಾದದ್ದು ಎಂಬುದಾಗಿ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಕನ್ನಡ ಕೊಂಚ ಕಲಿಯಲು ಕಷ್ಟವಾದ ಭಾಷೆ ಎಂಬುದಾಗಿ ಕೂಡ ಹೇಳಿದ ಸಾಯಿ ಪಲ್ಲವಿ ಸದ್ಯಕ್ಕೆ ವಿರಾಟಪರ್ವ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

Comments are closed.