ದಕ್ಷಿಣ ಭಾರತದ ಜನಪ್ರಿಯ ನಟ ಸಾಯಿ ಕುಮಾರ್ ರವರ ಸೊಸೆ ಯಾರು ಗೊತ್ತೇ?? ಆಕೆ ಕೂಡ ತುಂಬಾ ಫೇಮಸ್.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಅದ್ಭುತ ಕಂಠದ ಮೂಲಕ ಡೈಲಾಗ್ ಡೆಲಿವರಿ ಮಾಡುವ ಅದೆಷ್ಟು ನಟರು ಬಂದಿರ ಬಹುದು ಆದರೆ ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಡೈಲಾಗ್ ಕಿಂಗ್ ಎಂದು ಖ್ಯಾತರಾಗಿದ್ದವರು ನಟ ಸಾಯಿಕುಮಾರ್. ಹೌದು ಸ್ನೇಹಿತರೆ ಪಿ ಜೆ ಶರ್ಮ ಹಾಗೂ ಕೃಷ್ಣ ಜ್ಯೋತಿ ದಂಪತಿಗಳ ಮಗನಾಗಿ ಜನಿಸಿದ್ದ ಸಾಯಿಕುಮಾರ್ ಅವರು ಮೊದಲಿಗೆ ಅವರ ತಂದೆಯಂತೆ ಕಂಠದಾನ ಕಲಾವಿದರಾಗಿ ಕಾಣಿಸಿಕೊಂಡಿದ್ದರು.

ನಂತರದ ದಿನಗಳಲ್ಲಿ ಕಿರುತೆರೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ನಂತರ ಅವರ ಅದೃಷ್ಟ ಖುಲಾಯಿಸಿದ್ದು ಕನ್ನಡದಲ್ಲಿ ಬಿಡುಗಡೆಯಾದಂತಹ ಪೊಲೀಸ್ ಸ್ಟೋರಿ ಚಿತ್ರದ ಮೂಲಕ. ಅಲ್ಲಿಂದ ಸಾಯಿ ಕುಮಾರ್ ರವರು ಹಿಂದಿರುಗಿ ನೋಡಿದ್ದೇ ಇಲ್ಲ. ಇನ್ನು ಅವರ ಸಹೋದರರಾದ ಅಂತಹ ಅಯ್ಯಪ್ಪ ಹಾಗೂ ರವಿಶಂಕರ್ ಕೂಡ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಹೊಂದಿದ್ದಾರೆ.

ಇನ್ನು ಸಾಯಿಕುಮಾರ್ ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಇವರ ಸುರೇಖಾ ಎಂಬುವರನ್ನು ಮದುವೆಯಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು ಅದರಲ್ಲಿ ಆದಿ ಎಂಬುವವರು ಈಗಾಗಲೇ ತೆಲುಗು ಚಿತ್ರರಂಗದಲ್ಲಿ ನಟನಾಗಿ ಮಿಂಚುತ್ತಿದ್ದಾರೆ. ಇನ್ನು 2014 ರಲ್ಲಿ ಆದಿ ಅವರು ಅರುಣ ಎಂಬುವವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇಂದಿಗೂ ಕೂಡ ಇವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ತಂದೆಗೆ ತಕ್ಕಮಗ ಎಂಬಂತೆ ನಟನೆಯಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿದ್ದಾರೆ. ಕನ್ನಡದಲ್ಲಿ ಕೂಡ ಇವರು ಮುಂದಿನ ದಿನಗಳಲ್ಲಿ ನಟಿಸುವ ಸಾಧ್ಯತೆ ಇದೆ. ಅಪ್ಪ ಮಗ ಇಬ್ಬರೂ ಕೂಡ ಒಂದೇ ಚಿತ್ರದಲ್ಲಿ ನಟಿಸುವುದನ್ನು ನೋಡಲು ಯಾರೆಲ್ಲಾ ಕಾತರರಾಗಿದ್ದಾರೆ ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.