ಸಲಗ ಯಶಸ್ಸು ಪಡೆದ ಸಂತೋಷದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಜಯ್ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ಗೊತ್ತಿರೋ ಹಾಗೆ ದುನಿಯಾ ವಿಜಯ್ ಅವರು ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ಫೈಟರ್ ಆಗಿ ಎಂಟ್ರಿ ಕೊಟ್ಟರು. ಸಾಕಷ್ಟು ಸ್ಟಾರ್ ನಟರ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಸೈಡ್ ಆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದವರು. ಆದರೆ 2006 ರಲ್ಲಿ ಬಿಡುಗಡೆಯಾದಂತಹ ದುನಿಯಾ ಚಿತ್ರದ ಮೂಲಕ ದುನಿಯಾ ವಿಜಯ್ ಅವರು ತಮ್ಮ ಅದೃಷ್ಟವನ್ನೇ ಬದಲಾಯಿಸಿಕೊಂಡರು.

ಇಂದಿಗೂ ಕನ್ನಡ ಚಿತ್ರರಂಗದಲ್ಲಿ ದುನಿಯಾವಿಜಯ್ ರವರು ಬಲಾಢ್ಯವಾಗಿ ನಿಂತಿದ್ದಾರೆ ಎಂದರೆ ಅದಕ್ಕೆ ಮೂಲ ಬುನಾದಿ ಎಂದರೆ ಅದು ದುನಿಯಾ ಚಿತ್ರ ಎಂಬುದಾಗಿ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ದುನಿಯಾ ಚಿತ್ರ ದುನಿಯಾ ವಿಜಯ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಜನ್ಮ ನೀಡಿದರೆ ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ಸಲಗ ಚಿತ್ರ ದುನಿಯಾ ವಿಜಯ್ ಅವರಿಗೆ ಪುನರ್ಜನ್ಮವನ್ನು ನೀಡಿದೆ ಎಂದರೆ ಖಂಡಿತವಾಗಿ ಸುಳ್ಳಲ್ಲ. ಸಲಗ ಚಿತ್ರದ ಮೂಲಕ ಕೇವಲ ನಾಯಕನಟನಾಗಿ ಮಾತ್ರವಲ್ಲದೆ ದುನಿಯಾ ವಿಜಯ್ ರವರು ಸಮರ್ಥ ನಿರ್ದೇಶಕನಾಗಿ ಕೂಡ ತಮ್ಮನ್ನು ತಾವು ಸಾಬೀತುಪಡಿಸಿ ಕೊಂಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಸಲಗ ಚಿತ್ರದ ಸಕ್ಸಸ್ ಮೀಟ್ ಕೂಡ ಮಾಡಿದ್ದಾರೆ.

salaga movie | ಸಲಗ ಯಶಸ್ಸು ಪಡೆದ ಸಂತೋಷದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಜಯ್ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ?
ಸಲಗ ಯಶಸ್ಸು ಪಡೆದ ಸಂತೋಷದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಜಯ್ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ? 2

ಈ ಸಂದರ್ಭದಲ್ಲಿ ಯಾರಿಗೂ ಗೊತ್ತಿರದ ಅಂತಹ ಒಂದು ಕಥೆಯನ್ನು ಹೇಳಿ ಕಣ್ಣೀರನ್ನು ಇಟ್ಟಿದ್ದಾರೆ. ಹಾಗಿದ್ದರೆ ದುನಿಯಾ ವಿಜಯ್ ಅವರು ಕಣ್ಣೀರು ಇಡುವಂತಹ ಕಥೆ ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ದುನಿಯಾ ವಿಜಯ್ ರವರು ಕೆಪಿ ಶ್ರೀಕಾಂತ್ ಅವರಿಗೆ ಕಥೆಯನ್ನು ಹೇಳಲು ಹೋಗುವ ಸಂದರ್ಭದಲ್ಲಿ ಅವರ ಜೇಬಿನಲ್ಲಿ ಇದ್ದಿದ್ದು ಕೇವಲ 40 ರೂಪಾಯಿ ಮಾತ್ರವಂತೆ. ಇಂದು ಸಲಗ ಚಿತ್ರದ ಯಶಸ್ಸಿನಿಂದಾಗಿ ದುನಿಯಾ ವಿಜಯ್ ರವರಿಗೆ ತೆಲುಗು ಚಿತ್ರರಂಗದಿಂದಲೂ ಕೂಡ ಆಫರ್ ಹುಡುಕಿಕೊಂಡು ಬರುತ್ತಿವೆ. ಇದಕ್ಕಾಗಿ ನಿರ್ಮಾಪಕ ಕೆಪಿ ಶ್ರೀಕಾಂತ್ ಹಾಗೂ ಶಿವಣ್ಣನವರ ಬೆಂಬಲಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ನಿಜ ಜೀವನದಲ್ಲೂ ಕೂಡ ದುನಿಯಾ ವಿಜಯ್ ಅವರು ಕಷ್ಟಗಳು ಎದುರಿಸಿ ಒಂಟಿಸಲಗ ನಾಗಿ ನಿಂತು ಗೆದ್ದು ಬಂದಿದ್ದಾರೆ ಅವರಿಗೆ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ ಎಂದು ಹಾರೈಸೋಣ.

Comments are closed.