Sarath Babu: ಬೀದಿಗೆ ಬಂದ ಆಸ್ತಿ ಜಗಳ- ಮಕ್ಕಳು ಇಲ್ಲದೆ ಇದ್ದರೂ ಶರತ್ ಆಸ್ತಿಗಾಗಿ ಕಚ್ಚಾಟ. ಏನಾಗಿದೆ ಗೊತ್ತೇ??
Sarath Babu: ಖ್ಯಾತ ನಟ ಶರತ್ ಬಾಬು ಅವರು 50 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಕಲಾವಿದರು. ಕೆಲ ಸಮಯದಿಂದ ಇವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಮೇ 22ರಂದು ಆರೋಗ್ಯದ ಸ್ಥಿತಿ ಹದಗೆಟ್ಟು ಶರತ್ ಬಾಬು ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಇಹಲೋಕ ತ್ಯಜಿಸಿದರು. ಇವರ ಅಂತ್ಯಕ್ರಿಯೆ ಚೆನ್ನೈನಲ್ಲಿ ನಡೆಯಿತು.
ಶರತ್ ಬಾಬು ಅವರು ವಿಧಿವಶರಾದ ಬಳಿಕ ಅವರ ಆಸ್ತಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶರತ್ ಬಾಬು ಅವರ ವೈಯಕ್ತಿಕ ಜೀವನ ಚೆನ್ನಾಗಿರಲಿಲ್ಲ. ಅವರು ತೆಲುಗಿನ ಖ್ಯಾತ ನಟಿ ರಮಾ ಪ್ರಭಾ ಅವರ ಜೊತೆಯಲ್ಲಿ ಮದುವೆಯಾಗಿದ್ದರು. ಆದರೆ ಆ ಮದುವೆ ವಿಚ್ಛೇದನದಲ್ಲಿ ಕೊನೆಯಾಯಿತು. ಬಳಿಕ ಶರತ್ ಬಾಬು ಅವರು ಸ್ನೇಹ ನಂಬಿಯಾರ್ ಅವರ ಜೊತೆ ಮದುವೆಯಾದರು. ಆದರೆ ಈ ಮದುವೆ ಕೂಡ ಹೆಚ್ಚು ಸಮಯ ಉಳಿಯಲಿಲ್ಲ. ಇದನ್ನು ಓದಿ..Ashish Vidyarthi: 60 ನೇ ವಯಸ್ಸಿನಲ್ಲಿಯೂ ಪ್ರೀತಿ ಮಾಡಿ ಆಶೀಶ್ ವಿದ್ಯಾರ್ಥಿ ಹಾಗೂ ರೂಪಾಲಿ- ಶುರುವಾಗಿದೆ ಆಸ್ತಿ ಚರ್ಚೆ. ಎಷ್ಟು ಕೋಟಿ ಗೊತ್ತೇ? ಕೇಳಿದರೆ ದೇಶಾನೇ ನಿಂತು ಹೋಗುತ್ತೆ.
ಹಾಗಾಗಿ ಶರತ್ ಬಾಬು ಅವರಿಗೆ ಮಕ್ಕಳಿಲ್ಲ, ಆದರೆ ಶರತ್ ಬಾಬು ಅವರ ಬಳಿ ಕೋಟಿಗಟ್ಟಲೇ ಆಸ್ತಿ ಇದೆ. ಈ ಆಸ್ತಿಗೆ ವಾರಸುದಾರರು ಯಾರು? ಯಾರ ಪಾಲಿಗೆ ಆಸ್ತಿ ಹೋಗುತ್ತದೆ ಎನ್ನುವ ಪ್ರಶ್ನೆ ಈಗ ಶುರುವಾಗಿದೆ. ಮನೆಯವರ ನಡುವೆಯೇ ಈ ವಿಚಾರದ ಬಗ್ಗೆ ಕಚ್ಚಾಟ ಶುರುವಾಗಿದೆ. ಆದರೆ ಇತ್ತೀಚೆಗೆ ಶರತ್ ಬಾಬು ಅವರ ತಂಗಿ ಸರಿತಾ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನ ಒಂದರಲ್ಲಿ ಮಾತನಾಡಿದ ಸರಿತಾ ಅವರು, ತಮ್ಮ ಮಗಳು ಸೋನಿಯಾಳನ್ನು ಕಂಡರೆ ಶರತ್ ಬಾಬು ಅವರಿಗೆ ತುಂಬಾ ಪ್ರೀತಿ ಇತ್ತು, ನನ್ನ ಮಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಅಂದುಕೊಂಡಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ನನ್ನ ಮಗಳ ಮದುವೆಯನ್ನು ಅವರೇ ಮಾಡಿದ್ದರು.. ಎಂದು ಶರತ್ ಬಾಬು ಅವರ ಸಹೋದರಿ ಸರಿತಾ ಹೇಳಿದ್ದಾರೆ. ಇದನ್ನು ಓದಿ..Naresh Pavithra: ಈ ವಯಸಿನಲ್ಲಿ ಮಕ್ಕಳು ಮಾಡಿಕೊಳ್ಳುತ್ತೀರಾ ಎಂದಾಗ ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೇ?? ಇದಪ್ಪ ಉತ್ತರ ಅಂದ್ರೆ.
Comments are closed.