ಕೊನೆಗೂ ಸಿಕ್ತು ಶಿವಣ್ಣನ ಪ್ರತಿಕ್ರಿಯೆ, ಅಪ್ಪುವಿಗೆ ತಿಥಿಯಂದು ವಿನೋದ್ ರಾಜ್ ತರ್ಪಣ ಬಿಟ್ಟಿದ್ದಕ್ಕೆ ಶಿವಣ್ಣನವರು ನೀಡಿದ ಪ್ರತಿಕ್ರಿಯೆ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರ ದೇಹಾಂತ್ಯ ವಾಗಿ ಈಗಾಗಲೇ ಹಲವಾರು ಸಮಯಗಳ ಕಳೆದಿವೆ. ಇಂದಿಗೂ ಕೂಡ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಅವರ ಒಳ್ಳೆಯ ಕೆಲಸಗಳು ಹಾಗೂ ಅವರ ಮಾನವೀಯ ಸಂದೇಶಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ. ನಿಜಕ್ಕೂ ಕೂಡ ಅವರಂತಹ ನಟನನ್ನು ಪಡೆಯಲು ಕರ್ನಾಟಕ ಚಿತ್ರರಂಗ ಅದೃಷ್ಟ ಮಾಡಿತ್ತು ಎಂದು ಹೇಳಬಹುದಾಗಿದೆ.

ಅದೆಷ್ಟು ನಟರಿದ್ದಾರೆ ಒಮ್ಮೆ ಸ್ಟಾರ್ ಆದರೆ ಸಾಕು ತಲೆ ಮೇಲೆ ಕಿರೀಟ ಬಂದವರಂತೆ ಆಡುತ್ತಾರೆ. ಆದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಸ್ವತಃ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಸುಪುತ್ರನ ಆಗಿದ್ದರೂ ಕೂಡ ಪ್ರಾರಂಭದಿಂದಲೂ ಕೂಡ ವಿನಯ ಹಾಗೂ ಸರಳತೆಯಿಂದ ನಡೆದುಕೊಂಡು ಬಂದವರು. ಅವರು ತಮ್ಮ ಸರಳತೆ ಹಾಗೂ ಎಲ್ಲರೊಂದಿಗೆ ಸಮಾನ ಭಾವದಲ್ಲಿ ಕಾಣುವ ವಿಚಾರದಿಂದಲೇ ಎಲ್ಲರ ನೆಚ್ಚಿನ ನಟನಾಗಿದ್ದಾರೆ.

punith shivanna 1 | ಕೊನೆಗೂ ಸಿಕ್ತು ಶಿವಣ್ಣನ ಪ್ರತಿಕ್ರಿಯೆ, ಅಪ್ಪುವಿಗೆ ತಿಥಿಯಂದು ವಿನೋದ್ ರಾಜ್ ತರ್ಪಣ ಬಿಟ್ಟಿದ್ದಕ್ಕೆ ಶಿವಣ್ಣನವರು ನೀಡಿದ ಪ್ರತಿಕ್ರಿಯೆ ಏನು ಗೊತ್ತಾ??
ಕೊನೆಗೂ ಸಿಕ್ತು ಶಿವಣ್ಣನ ಪ್ರತಿಕ್ರಿಯೆ, ಅಪ್ಪುವಿಗೆ ತಿಥಿಯಂದು ವಿನೋದ್ ರಾಜ್ ತರ್ಪಣ ಬಿಟ್ಟಿದ್ದಕ್ಕೆ ಶಿವಣ್ಣನವರು ನೀಡಿದ ಪ್ರತಿಕ್ರಿಯೆ ಏನು ಗೊತ್ತಾ?? 3

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ರಾಜಕುಮಾರ ಚಿತ್ರವನ್ನು ನೋಡಿ ಅದೆಷ್ಟು ಜನರು ತಮ್ಮ ತಂದೆತಾಯಿಗಳನ್ನು ವೃದ್ಧಾಶ್ರಮಗಳಿಂದ ಮನೆಗೆ ಕರೆತಂದಿದ್ದರು. ಒಬ್ಬ ನಾಯಕನಟನಾಗಿ ಸಮಾಜದಲ್ಲಿ ಎಷ್ಟರಮಟ್ಟಿಗೆ ಒಳ್ಳೆಯ ಬದಲಾವಣೆಗಳನ್ನು ತರಬಲ್ಲರು ಎಂಬುದಕ್ಕೆ ಪುನೀತ್ ರಾಜಕುಮಾರ್ ಅವರೇ ಉದಾಹರಣೆ ಆಗಿದ್ದರು. ಇನ್ನು ನಿಜ ಜೀವನದಲ್ಲಿ ಕೂಡ ತಮ್ಮ ಗಾಯನದಿಂದ ಬಂದಂತಹ ಸಂಭಾವನೆಯ ಪೂರ್ತಿ ಹಣವನ್ನು ವೃದ್ಧಾಶ್ರಮ ಹಾಗೂ ಅನಾಥಾಶ್ರಮ ಗಳಿಗಾಗಿ ಸಂಪೂರ್ಣವಾಗಿ ವಿನಿಯೋಗಿಸುತ್ತಿದ್ದರು. ಗೋಶಾಲೆ ಅನಾಥಾಶ್ರಮ ವೃದ್ಧಾಶ್ರಮ ಹಾಗೂ ಹಲವಾರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದರು.

ಪುನೀತ್ ರಾಜಕುಮಾರ್ ಅವರನ್ನು ಹೊಗಳುತ್ತ ಹೋದರೆ ಒಂದು ದಿನ ಸಾಕಾಗುವುದಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಅಕಾಲಿಕವಾಗಿ ನಮ್ಮನ್ನೆಲ್ಲ ಬಿಟ್ಟು ಹೋದಾಗ ಆ ದುಃಖವನ್ನು ಬಣ್ಣಿಸಲು ಸಾಧ್ಯವಿಲ್ಲ. ಅಭಿಮಾನಿಗಳಾದ ನಮಗೆ ಇಷ್ಟೊಂದು ದುಃಖವಾಗಿರಬೇಕಾದರೆ ಅವರ ಕುಟುಂಬಸ್ಥರಿಗೆ ಏನಾಗಿರಬೇಡ ನೀವೇ ಅಂದಾಜು ಹಾಕಿಕೊಳ್ಳಿ.

vinodraj puneeth | ಕೊನೆಗೂ ಸಿಕ್ತು ಶಿವಣ್ಣನ ಪ್ರತಿಕ್ರಿಯೆ, ಅಪ್ಪುವಿಗೆ ತಿಥಿಯಂದು ವಿನೋದ್ ರಾಜ್ ತರ್ಪಣ ಬಿಟ್ಟಿದ್ದಕ್ಕೆ ಶಿವಣ್ಣನವರು ನೀಡಿದ ಪ್ರತಿಕ್ರಿಯೆ ಏನು ಗೊತ್ತಾ??
ಕೊನೆಗೂ ಸಿಕ್ತು ಶಿವಣ್ಣನ ಪ್ರತಿಕ್ರಿಯೆ, ಅಪ್ಪುವಿಗೆ ತಿಥಿಯಂದು ವಿನೋದ್ ರಾಜ್ ತರ್ಪಣ ಬಿಟ್ಟಿದ್ದಕ್ಕೆ ಶಿವಣ್ಣನವರು ನೀಡಿದ ಪ್ರತಿಕ್ರಿಯೆ ಏನು ಗೊತ್ತಾ?? 4

ಇಲ್ಲಿ ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರ ಕುಟುಂಬಸ್ಥರು ಅವರ ತಿಥಿಯ ದಿನದಂದು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಪೂಜೆ ಮಾಡುತ್ತಿದ್ದರೆ, ಕನ್ನಡ ಚಿತ್ರರಂಗದ ಖ್ಯಾತ ನಟ ವಿನೋದ್ ರಾಜ್ ಹಾಗೂ ಅವರ ತಾಯಿಯಾಗಿರುವ ನಟಿಯ ಲೀಲಾವತಿಯವರು ಶ್ರೀರಂಗಪಟ್ಟಣದ ಸಂಗಮದಲ್ಲಿ ತರ್ಪಣ ಬಿಡುತ್ತಿದ್ದರು ಹಾಗೂ ಕ್ರಿಯಾಕರ್ಮಗಳನ್ನು ಮಾಡಿದ್ದರು. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು.

ಇದಕ್ಕೆ ಇತ್ತೀಚಿಗೆ ಪ್ರತಿಕ್ರಿಯೆ ನೀಡಿರುವ ವಿನೋದ್ ರಾಜ್ ರವರು ಮೊದಲಿನಿಂದಲೂ ಕೂಡ ನಾನು ಹಾಗೂ ಪುನೀತ್ ರಾಜಕುಮಾರ್ ಅವರ ಸಹೋದರತ್ವದ ಬಾಂಧವ್ಯವನ್ನು ಹೊಂದಿಕೊಂಡು ಬಂದಿದ್ದೇವೆ. ಯಾರು ತರ್ಪಣ ನೀಡಿದರೇನು ಅವರಿಗೆ ಶಾಂತಿ ಸಿಗುವುದು ಮುಖ್ಯ ಎನ್ನುವ ಕಾರಣಕ್ಕಾಗಿ ನಾನು ಹಾಗೂ ನನ್ನ ತಾಯಿ ಈ ಕಾರ್ಯವನ್ನು ಮಾಡಿದ್ದೇವೆ ಎಂಬುದಾಗಿ ಹೇಳಿದ್ದರು. ಈ ವಿಚಾರದ ಕುರಿತಂತೆ ಈಗ ಶಿವಣ್ಣನವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ಮಾಧ್ಯಮದವರು ಈ ವಿಚಾರವನ್ನು ಶಿವಣ್ಣನವರ ಬಳಿ ಪ್ರಸ್ತಾಪಿಸಿದಾಗ ಶಿವಣ್ಣ ನೀಡಿರುವ ಹೇಳಿಕೆ ಎಲ್ಲರನ್ನೂ ಕೂಡ ಮಂತ್ರಮುಗ್ಧರನ್ನಾಗಿ ಮಾಡಿತ್ತು. ಶಿವಣ್ಣ, ಅಪ್ಪು ಎಲ್ಲರಿಂದ ಪ್ರೀತಿಯನ್ನು ಗಳಿಸಿ ಕೊಳ್ಳುವಂತಹ ಕಾರ್ಯವನ್ನು ಮಾಡಿದ್ದಾನೆ. ಅಪ್ಪುಗೆ ತರ್ಪಣ ನೀಡಿರುವ ವಿನೋದ್ ರಾಜ್ ಹಾಗೂ ಲೀಲಾವತಿಯವರಿಗೆ ಆ ದೇವರು ಒಳ್ಳೆಯದು ಮಾಡಲಿ ಎಂಬುದಾಗಿ ಹಾರೈಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.