ನನಗೆ ಪುನೀತ್ ಬಿಟ್ಟರೇ ಮತ್ತೊಬ್ಬ ತಮ್ಮನಂತೆ ಇರುವುದು ಈತನೊಬ್ಬನೇ ಎಂದು ಖ್ಯಾತ ಕಲಾವಿದನನ್ನು ಆಯ್ಕೆ ಮಾಡಿದ ಶಿವಣ್ಣ, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ನಾವು ದೈಹಿಕವಾಗಿ ಕಳೆದುಕೊಂಡು ಈಗಾಗಲೇ ಹಲವಾರು ತಿಂಗಳುಗಳು ಕಳೆದರೂ ಕೂಡ ಅಜಾತಶತ್ರು ವಿನಂತೆ ಇದ್ದಂತಹ ಆ ಬಂಗಾರದ ವ್ಯಕ್ತಿತ್ವದ ಮನುಷ್ಯ ನಮ್ಮನ್ನೆಲ್ಲ ಬಿಟ್ಟು ಹೋಗಿರುವುದು ನಮ್ಮ ಕುಟುಂಬದವರನ್ನು ಕಳೆದುಕೊಂಡಷ್ಟೆ ದುಃಖ ಇಂದಿಗೂ ಕೂಡ ನೀಡುತ್ತಿದೆ.

ಇನ್ನು ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಇದೇ ಮಾರ್ಚ್ 17ರಂದು ಅವರ ಜನ್ಮದಿನದ ವಿಶೇಷವಾಗಿ ಪಂಚ ಭಾಷೆಗಳಲ್ಲಿ ದೇಶ-ವಿದೇಶದ ಅತ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲು ಸಜ್ಜಾಗಿ ನಿಂತಿದೆ. ಈಗಾಗಲೇ ಟೀಸರ್ ಹಾಗೂ ಟ್ರೈಲರ್ ಗಳು ಸಿನಿಮಾದ ನಿರೀಕ್ಷೆಯನ್ನು ಎಲ್ಲಾ ಪ್ರೇಕ್ಷಕರಲ್ಲಿ ಹೆಚ್ಚು ಮಾಡಿದೆ. ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಹಾಗೂ ಪ್ರೇಕ್ಷಕರು ಕೂಡ ಸಿದ್ಧರಾಗಿ ನಿಂತಿದ್ದಾರೆ. ಇತ್ತೀಚಿಗಷ್ಟೇ ಜೇಮ್ಸ್ ಚಿತ್ರದ ಪತ್ರಿಕಾಗೋಷ್ಠಿ ಕೂಡ ಮಾಧ್ಯಮಗಳ ಎದುರು ನಡೆಯಿತು. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಹೋದರ ನಾಗಿರುವ ಕರುನಾಡ ಚಕ್ರವರ್ತಿ ಶಿವಣ್ಣನವರು ಕೂಡ ಇದ್ದರು. ನಿಮಗೆ ತಿಳಿದಿರಲಿ ಸ್ನೇಹಿತರೆ ದ್ವಿತೀಯಾರ್ಧದಲ್ಲಿ ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರ ಪಾತ್ರದ ಧ್ವನಿಯನ್ನು ಶಿವಣ್ಣನವರೇ ನೀಡಿದ್ದಾರೆ.

ಇದಕ್ಕೆ ಅವರು 1 ರೂಪಾಯಿ ಸಂಭಾವನೆಯನ್ನು ಕೂಡ ಎಷ್ಟೇ ಒತ್ತಾಯ ಮಾಡಿದರೂ ತೆಗೆದುಕೊಂಡಿಲ್ಲ. ಇನ್ನು ಈ ಸಂದರ್ಭದಲ್ಲಿ ಅಪ್ಪು ಅವರನ್ನು ಬಿಟ್ಟರೆ ನನ್ನ ತಮ್ಮನಂತೆ ಕಾಣುವುದು ಅವರು ಎಂಬುದಾಗಿ ಖ್ಯಾತ ನಟನ ಹೆಸರನ್ನು ಹೇಳಿದ್ದಾರೆ. ಹಾಗಿದ್ದರೆ ಆ ನಟ ಯಾರು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಜೇಮ್ಸ್ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯಲ್ಲಿ ಅಪ್ಪು ಅವರ ಕುರಿತಂತೆ ಮಾತನಾಡುತ್ತ ಶಿವಣ್ಣನವರು ಭಾವುಕರಾಗಿ ರಾಜಕುಮಾರ ಚಿತ್ರದಲ್ಲಿ ಅಪ್ಪು ಅವರ ಜೊತೆಗೆ ಚಿಕ್ಕಣ್ಣ ನಟಿಸಿದ ನಂತರ ಅವರು ನನ್ನ ತಮ್ಮನಂತೆ ಎಂಬುದಾಗಿ ಹೇಳಿದ್ದಾರೆ. ಚಿತ್ರದ ಪ್ರಮೋಷನ್ ಗೆ ಯಾವಾಗ ಬೇಕಾದರೂ ಕರೆಯಿರಿ ನಾನು ಬಂದು ಮಾಡಿಕೊಡುತ್ತೇನೆ ಎಂಬುದಾಗಿ ಕೂಡ ಚಿತ್ರತಂಡಕ್ಕೆ ಧೈರ್ಯ ತುಂಬಿದ್ದಾರೆ. ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಉಪಸ್ಥಿತರಿದ್ದರು.

Comments are closed.