ಕೊಹ್ಲಿ ಹಾಗೂ ರಾಹುಲ್ ರವರಿಗೆ ಮತ್ತೊಂದು ಶಾಕ್: ಎದುರಾಯ್ತು ತಂಡದಲ್ಲಿ ಹೊಸ ಪೈಪೋಟಿ. ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಸತತವಾಗಿ ಐಪಿಎಲ್ ಮುಗಿದ ನಂತರ ಹಲವಾರು ಸರಣಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಇದರ ನಡುವೆ ಹಲವಾರು ಹಿರಿಯ ಹಾಗೂ ಅನುಭವಿ ಆಟಗಾರರು ತಂಡದಿಂದ ಇಂಜುರಿ ಕಾರಣದಿಂದ ಹೊರ ಬಿದ್ದಿದ್ದಾರೆ ಇನ್ನು ಕೆಲವರು ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

ಅದರಲ್ಲೂ ವಿಶೇಷವಾಗಿ ಏಷ್ಯಾ ಕಪ್ ನಲ್ಲಿ ಆಯ್ಕೆ ಮಾಡುವ ತಂಡದ ಆಟಗಾರರೇ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಟಿ20 ವಿಶ್ವಕಪ್ ನಲ್ಲಿಯೂ ಕೂಡ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ಒಳ ಮೂಲಗಳು ಸುದ್ದಿಯನ್ನು ಹರಿಬಿಟ್ಟಿವೆ. ಸದ್ಯಕ್ಕೆ ಐಪಿಎಲ್ ನಲ್ಲಿ ಮಂಕಾಗಿದ್ದ ರೋಹಿತ್ ಶರ್ಮ ರವರು ಕೂಡ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನವನ್ನು ತೋರ್ಪಡಿಸುತ್ತಿದ್ದಾರೆ. ವಿಶ್ರಾಂತಿಯ ಹಿನ್ನೆಲೆಯಲ್ಲಿ ತಂಡದಿಂದ ಹೊರಗೆ ಬಿದ್ದಿರುವ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ರವರು ತಮ್ಮ ಸ್ಥಾನಕ್ಕೆ ನ್ಯಾಯ ಒದಗಿಸುವಂತಹ ಪ್ರದರ್ಶನವನ್ನು ನೀಡದಿದ್ದರೆ ಮುಂದಿನ ದಿನಗಳಲ್ಲಿ ತಂಡದಿಂದ ಹೊರಬೀಳಬೇಕಾದ ಪರಿಸ್ಥಿತಿ ಎದ್ದು ಕಾಣುತ್ತಿದೆ ಯಾಕೆಂದರೆ ಅವರ ಸ್ಥಾನವನ್ನು ಪಡೆಯಲು ಯುವ ಆಟಗಾರರು ತಂಡದಲ್ಲಿ ಹಾತೊರೆಯುತ್ತಿದ್ದಾರೆ.

kl vk 1 | ಕೊಹ್ಲಿ ಹಾಗೂ ರಾಹುಲ್ ರವರಿಗೆ ಮತ್ತೊಂದು ಶಾಕ್: ಎದುರಾಯ್ತು ತಂಡದಲ್ಲಿ ಹೊಸ ಪೈಪೋಟಿ. ಯಾರ್ಯಾರು ಗೊತ್ತೇ??
ಕೊಹ್ಲಿ ಹಾಗೂ ರಾಹುಲ್ ರವರಿಗೆ ಮತ್ತೊಂದು ಶಾಕ್: ಎದುರಾಯ್ತು ತಂಡದಲ್ಲಿ ಹೊಸ ಪೈಪೋಟಿ. ಯಾರ್ಯಾರು ಗೊತ್ತೇ?? 2

ಹೌದು ಗೆಳೆಯರೇ ಅದರಲ್ಲೂ ಕೂಡ ಸ್ಟ್ರೈಕ್ ರೇಟ್ ಹಾಗೂ ತಂಡದ ಗೆಲುವಿನ ವಿಚಾರದಲ್ಲಿ ತಂಡಕ್ಕೆ ಸಹಾಯಕಾರಿ ಆಗಿರುವ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ ದೀಪಕ್ ಹೂಡಾ ಹಾಗೂ ಸೂರ್ಯ ಕುಮಾರ್ ಯಾದವ್ ಮೊದಲ ಸ್ಥಾನದಲ್ಲಿ ಕಂಡು ಬರುತ್ತಿದ್ದಾರೆ. ಇದಾದ ನಂತರ ಸಂಜು ಸ್ಯಾಮ್ಸನ್ ಕೂಡ ಅತ್ಯುತ್ತಮ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ರವರು ತಮ್ಮ ಸ್ಥಾನವನ್ನು ಸಾಬೀತುಪಡಿಸಿಕೊಳ್ಳುವಂತಹ ಆಟವನ್ನು ತೋರ್ಪಡಿಸಬೇಕಾದ ಒತ್ತಡದಲ್ಲಿದ್ದಾರೆ.

Comments are closed.