ಕೆಜಿಎಫ್ ನಲ್ಲಿ ಹೊಸ ಜವಾಬ್ದಾರಿ ವಹಿಸಿಕೊಂಡ ಕನ್ನಡದ ಹಿರಿಯ ನಟಿಯರು, ಸುಧಾರಾಣಿ ಹಾಗೂ ಶ್ರುತಿ ರವರಿಗೆ ಮಹತ್ವದ ಕೆಲಸ ಏನು ಗೊತ್ತೇ??

ನಮಸಾರ ಸ್ನೇಹಿತರೇ, ಇದೀಗ ಕರೋನಾ ದಿಂದಾಗಿ ಚಿತ್ರಮಂದಿರಗಳು ಮುಚ್ಚಿದ್ದು ಯಾವ ಹೊಸ ಚಿತ್ರಗಳೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುವುದೇ ಸಾಕಷ್ಟು ಕಷ್ಟದ ವಿಷಯವಾಗಿದೆ. ಇನ್ನು ಕೆಲವು ಚಿತ್ರಗಳು ನಿರ್ಮಾಣವನ್ನು ಮುಗಿಸಿ ತೆರೆ ಮೇಲೆ ಬರಲು ಕಾಯ್ತಾ ಇವೆ. ಆದರೆ ಕೇವಲ ಶೇ 50 ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿತ್ತು ಸರ್ಕಾರ. ಹಾಗಾಗಿ ಬಾಕ್ಸ್ ಆಫೀಸ್ ಫುಲ್ ಆಗುವ ನಿರೀಕ್ಷೆ ಇರುವ ಚಿತ್ರಗಳು ಕೇವಲ ಓಟಿಟಿ ಪ್ಲಾರ್‍ ಫಾರ್ಮ್ ನಲ್ಲಿ ಮಾತ್ರ ತೆರೆಕಾಣುವಂತಾಗಿದೆ.

ಇನ್ನು ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿ ಎಫ್ 2 ಮಾತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕನ್ನಡದಲ್ಲಿ ಮಾತ್ರವಲ್ಲ ಇತರ ಭಾಷಾ ಸಿನಿ ಪ್ರಿಯರು ಕಾತುರದಿಂದ ಎದುರು ನೋಡುತ್ತಿದ್ದಾರೆ. ಜನರ ಈ ನಿರೀಕ್ಷೆಗೆ ಉತ್ತರವನ್ನು ನೀಡಿದ್ದಾರೆ ಕೆ ಜಿ ಎಫ್ 2 ನಿರ್ಮಾಪಕ ವಿಜಯ್ ಕಿರಗಂದೂರು ಅವರು 2022, ಏಪ್ರಿಲ್ 14ರಂದು ಈ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಕೆ ಜಿ ಎಫ್ 2 ಚಿತ್ರವನ್ನು ಜೀ ಕನ್ನಡ ಟಿವಿ ಪ್ರಸಾರದ ಹಕ್ಕನ್ನು ಪಡೆದಿರುವುದು ಈಗಾಗಲೇ ಎಲ್ಲರಿಗೂ ತಿಳಿಸಿದೆ.

ಇತರ ಭಾಷೆಗಳಲ್ಲಿಯೂ ಕೂಡ ಆಯಾ ಜೀ ಕನ್ನಡ ವಾಹಿನಿ ಪ್ರಸಾರದ ಹಕ್ಕನ್ನು ಪಡೆದು ಕೊಂಡಿದೆ. ಆದರೆ ಥಿಯೇಟರ್ ನಲ್ಲಿ ಪ್ರಸಾರವಾದ ನಂತರವಷ್ಟೇ ಟಿವಿಯಲ್ಲಿ ಪ್ರಸಾರವಾಗುತ್ತದೆ ಕೆಜಿಎಫ್ 2. ಇನ್ನು ಕೆಜಿಎಫ್ 2 ತಾರಾಗಣ ಬಹಳ ದೊಡ್ದದಿದೆ. ಕನ್ನಡದ ನಟರೂ ಮಾತ್ರವಲ್ಲದೇ ಬಾಲಿವುಡ್ ನಟರೂ ಕೂಡ ಕೆ ಜಿ ಎಫ್ 2 ಯಶಸ್ಸಿಗೆ ಕಾರಣವಾಗಲಿದ್ದಾರೆ. ಇದರ ಜೊತೆಗೆ ನಟಿ ಸುಧಾರಾಣಿ ಹಾಗೂ ನಟಿ ಶ್ರುತಿ ಹೆಸರು ಕೂಡ ಕೇಳಿಬರುತ್ತಿದೆ. ಆದರೆ ಇವರು ನಟಿಸುತ್ತಿಲ್ಲ ಬದಲಾಗಿ ಇತರ ಪಾತ್ರಗಳಿಗೆ ಧ್ವನಿಯಾಗಲಿದ್ದಾರೆ. ರವೀನ ತಂಡನ್ ರವರ ರಮಿಕ ಸೆನ್ ಪಾತ್ರಕ್ಕೆ ನಟಿ ಸುಧಾರಾಣಿ ಹಾಗೂ ಈಶ್ವರಿ ರಾವ್ ಪಾತ್ರಕ್ಕೆ ಕನ್ನಡದಲ್ಲಿ ಶ್ರುತಿ ಕಂಠದಾನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.