ಮನೆಯಿಂದ ಹೊರಹೋದ ಶುಭ ಪೂಂಜಾ ರವರಿಗೆ ಸಿಕ್ಕ ಅಸಲಿ ಸಂಭಾವನೆ ಎಷ್ಟು ಗೊತ್ತಾ?? ಪಾಪ ಇಷ್ಟು ಕಡಿಮೇನಾ??

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಮಗುವಿನ ರೀತಿ ಆಟವಾಡಿ ಎಲ್ಲರನ್ನೂ ಮನರಂಜಿಸುವಲ್ಲಿ ಯಶಸ್ವಿಯಾಗಿದ್ದ ಶುಭ ಪೂಜಾ ರವರು ಈ ವಾರ ನಿಮಗೆಲ್ಲರಿಗೂ ತಿಳಿದಿರುವಂತೆ ಮನೆಯಿಂದ ಹೊರ ಬಂದಿದ್ದಾರೆ. 14 ವಾರಗಳ ಕಾಲ ಯಶಸ್ವಿಯಾಗಿ ಮನೆಯಲ್ಲಿ ಇದ್ದು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದ ಶುಭ ಪೂಂಜಾ ರವರು, ಇಷ್ಟು ದಿವಸಗಳಲ್ಲಿ ಎಂದಿಗೂ ಕೂಡ ಮನರಂಜನೆ ಎಂಬ ಪದವನ್ನು ಮರೆತಂತೆ ಕಾಣಲೇ ಇಲ್ಲ.

ಹೆಚ್ಚಾಗಿ ಯಾವುದೇ ಟಾಸ್ಕ್ ನಲ್ಲಿ ಗೆಲ್ಲದೆ ಇದ್ದರೂ ಕೂಡ ಇಲ್ಲಿಯವರೆಗೂ ಯಶಸ್ವಿಯಾಗಿ ಮನೆಯಲ್ಲಿದ್ದರು ಎಂದರೆ ಅರ್ಥ ಮಾಡಿಕೊಳ್ಳಿ ಶುಭ ಪೂಂಜಾ ರವರಿಗೆ ಎಷ್ಟರಮಟ್ಟಿಗೆ ಪ್ರೇಕ್ಷಕರ ಮನ ಗೆದ್ದಿದ್ದಾರೆ ಎಂದು. ಯಾಕೆಂದರೆ ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಲ್ಲಿ ಗೆದ್ದರೆ ಮಾತ್ರ ಹೆಚ್ಚು ವಾರಗಳಿಗೆ ಇರುವ ಅವಕಾಶ ಪಡೆಯುತ್ತಾರೆ ಆದರೆ ಶುಭ ಪೂಂಜಾ ರವರು ನಿಜಕ್ಕೂ ಯಾರು ಅಂದುಕೊಳ್ಳದ ರೀತಿಯಲ್ಲಿ ಮನರಂಜನೆ ನೀಡಿದ್ದಾರೆ ಹಾಗೂ ಗಾಳಿಸುದ್ದಿ ಯಲ್ಲಿ ಶುಭಪುಂಜ ರವರ ಕುರಿತು ಕೇಳಿ ಬರುತ್ತಿದ್ದ ಹಲವಾರು ವಿವಿಧ ರೀತಿಯ ಅಭಿಪ್ರಾಯಗಳನ್ನು ಬದಲಾಯಿಸಿ ಶುಭ ಪೂಂಜಾ ಎಂದರೆ ಒಂದು ಮುಗ್ಧ ಹಾಲಿನಂತೆ ಮನಸ್ಸು ಹೊಂದಿರುವ ನಟಿ ಎಂದು ಸ್ಪಷ್ಟಪಡಿಸಿ ಮನೆಯಿಂದ ಹೊರ ಹೋಗಿದ್ದಾರೆ.

ಇನ್ನು ಇವರು ಬಿಗ್ ಬಾಸ್ ಮನೆಗೆ ಹೋದಾಗ ಕ್ಷಣದಿಂದಲೂ ಕೂಡ ಶುಭ ಪೂಂಜಾ ರವರ ಸಂಭಾವನೆ ಕುರಿತು ಹಲವಾರು ಚರ್ಚೆಗಳು ನಡೆದಿವೆ, ಪ್ರತಿ ಬಾರಿಯೂ ಕೂಡ ಶುಭ ಪೂಂಜಾ ರವರಿಗೆ ಅಷ್ಟು ಸಾವಿರ ಸಂಭಾವನೆ ಇಷ್ಟು ಸಾವಿರ ಸಂಭಾವನೆಗೆ ಎಂದೆಲ್ಲ ಲೆಕ್ಕಾಚಾರಗಳು ಕೇಳಿಬಂದಿದೆ, ಆದರೆ ಇದೀಗ ಶುಭಪೂಂಜಾ ರವರ ಅಸಲಿ ಸಂಭಾವನೆಯ ಲೆಕ್ಕಾಚಾರಗಳು ಬಿಡುಗಡೆಯಾಗಿದ್ದು ವಾರಕ್ಕೆ ಕೇವಲ 35 ಸಾವಿರ ರೂಪಾಯಿಗಳನ್ನು ಸಂಭಾವನೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಒಟ್ಟಾರೆಯಾಗಿ 14 ವಾರಕ್ಕೆ 480000 ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂಬುದು ತಿಳಿದು ಬಂದಿದೆ. ಇನ್ನು ಇದೇ ಸಮಯದಲ್ಲಿ ಇವರ ಕುರಿತು ಹಾಗೂ ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ

Comments are closed.