ಕಾಂಗ್ರೆಸ್ ಪಕ್ಷದ ಕುರಿತು ಮಹತ್ವದ ಹೇಳಿಕೆ ನೀಡಿ ಶಾಕ್ ನೀಡಿದ ಕಪಿಲ್ ಸಿಬಲ್ !

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ರವರ ನಾಯಕತ್ವದ ಕುರಿತು ಬರೋಬ್ಬರಿ 23 ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಧ್ವನಿಯೆತ್ತಿದ್ದರು. ಆ 23 ಮುಖಂಡರಲ್ಲಿ ಕಪಿಲ್ ಸಿಬಲ್ ಕೂಡ ಧ್ವನಿ ಎತ್ತುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಹಿರಿಯ ನಾಯಕರು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ ಎಂಬ ಸ್ಪಷ್ಟ ಸಂದೇಶ ಸಾರಿದರು.

ಆದರೆ ಒಂದು ಹಲವಾರು ಮಾತುಕತೆಗಳ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂಬಂತೆ ಕಾಂಗ್ರೆಸ್ ಪಕ್ಷ ಅಧಿಕೃತ ಘೋಷಣೆ ಮಾಡಿತು. ಆದರೆ ಇದೀಗ ಬಹಿರಂಗವಾಗಿ ಕಪಿಲ್ ಸಿಬಲ್ ಅವರು ಮಾತನಾಡಿದ್ದು ನಾವು ಹಲವಾರು ಜನರು ನಮ್ಮ ಅಭಿಪ್ರಾಯಗಳನ್ನು ಪೆನ್ನಿನಿಂದ ಕಾಗದದ ಮೇಲೆ ಬರೆದಿದ್ದವು. ಮುಂದಿನ ಹಾದಿಯಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಿದರೆ ಗೆಲುವು ಕಾಣಬಹುದು ಎಂಬುದನ್ನು ತಿಳಿಸಿದ್ದೆವು ಆದರೆ ಕಾಂಗ್ರೆಸ್ ಪಕ್ಷ ನಮ್ಮ ಕಡೆಗೆ ಬೆನ್ನು ತೋರಿಸಿದೆ.

ಕಾಂಗ್ರೆಸ್ ಪಕ್ಷವು ತಾನು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಹರಿಸದೆ ಪರಿಹಾರವನ್ನು ಪರಿಗಣಿಸದೇ ಇರುವ ಕಾರಣಕ್ಕಾಗಿಯೇ ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆ ಮತ್ತು ದೇಶದ ಎಲ್ಲೆಡೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿದೆ, ಕಾಂಗ್ರೆಸ್ ಪಕ್ಷದ ನಾಯಕತ್ವ ಹಾಗೂ ಪಕ್ಷ ರಚನೆ ಮಾಡುವಲ್ಲಿ ಹಲವಾರು ಬದಲಾವಣೆ ಆಗಬೇಕು ಎಂದು ಹಲವಾರು ದಿನಗಳಿಂದ ನಾವು ಹೇಳುತ್ತಿದ್ದೇವೆ. ಪಕ್ಷದಲ್ಲಿ ದಿನೇದಿನೇ ಸಮಸ್ಯೆಗಳು ಹೆಚ್ಚುತ್ತಿವೆ. ಅದು ಕಾಂಗ್ರೆಸ್ ಪಕ್ಷಕ್ಕೆ ಕೂಡ ಚೆನ್ನಾಗಿ ತಿಳಿದಿದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೂಡ ತಿಳಿದಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಪರಿಹಾರವನ್ನು ಗುರುತಿಸಿ ಇತ್ಯರ್ಥ ಮಾಡುವ ಆಸಕ್ತಿ ಹೊಂದಿಲ್ಲ, ಆತ್ಮಾವಲೋಕನ ಮಾಡದೆ ಕಳೆದ ಆರು ವರ್ಷಗಳಿಂದ ಕಾಲ ಕಳೆಯುತ್ತಿದೆ. ಖಂಡಿತ ಮುಂದೊಂದು ದಿನ ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುತ್ತದೆ ಎಂಬ ಭರವಸೆ ಇದೆ ಎಂದು ಹಲವಾರು ನಾಯಕರು ಹೇಳುತ್ತಿದ್ದಾರೆ. ಆದರೆ ಆರು ವರ್ಷಗಳಿಂದ ನಡೆಯದ ಆತ್ಮಾವಲೋಕನ ಇವಾಗ ಹೇಗೆ ನಡೆಯುತ್ತದೆ? ಕಾಂಗ್ರೆಸ್ ನಲ್ಲಿ ಇರುವ ಸಮಸ್ಯೆ ಏನು ಎಂಬುದು ನಮಗೆ ತಿಳಿದಿದೆ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನಾತ್ಮಕ ತೆ ಇಲ್ಲ ಅದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಪ್ರತಿದಿನ ಕುಸಿಯುತ್ತಿದೆ ಎಂದು ಪಕ್ಷಕ್ಕೆ ಮುಜುಗರ ವಾಗುವಂತಹ ಹೇಳಿಕೆ ನೀಡಿದ್ದಾರೆ.

Comments are closed.