ಉಪಚುನಾವಣೆಯಲ್ಲಿ ಸೋಲಿನ ಕುರಿತು ಹೈಕಮಾಂಡಿಗೆ ವರದಿ ಸಲ್ಲಿಸಿದ ಡಿಕೆಶಿ ! ಮತ್ತದೇ ರಾಗ ಅದೇ ಹಾಡು

ಇದೀಗ ಕಾಂಗ್ರೆಸ್ ಪಕ್ಷವು ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲನ್ನು ಕಂಡಿದೆ. ಉಪಚುನಾವಣೆ ಎಕ್ಸ್ಪರ್ಟ್ ಎಂದು ಬೀಗುತ್ತಿದ್ದ ಡಿಕೆ ಶಿವಕುಮಾರ್ ರವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊಟ್ಟಮೊದಲ ಚುನಾವಣೆಯಲ್ಲಿಯೆ ಸೋಲನ್ನು ಕಂಡಿದ್ದಾರೆ. ಅಸಲಿಗೆ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಜಾತಿ ಲೆಕ್ಕಾಚಾರದ ಮೇರೆಗೆ ಮತಗಳನ್ನು ಪಡೆಯಬಹುದು ಎಂದು ಕಾಂಗ್ರೆಸ್ ಪಕ್ಷ ಆಲೋಚನೆ ನಡೆಸಿದ್ದು ಸುಳ್ಳಲ್ಲ.

ಈಗಾಗಲೇ ಮುಸ್ಲಿಂ ಮತ ಬ್ಯಾಂಕನ್ನು ದಿನೇದಿನೇ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷವು ಕೇವಲ ಮುಸ್ಲಿಂ ಸಮುದಾಯದ ಮತಗಳನ್ನಸ್ಟೇ ನಂಬಿಕೊಂಡು ಇರಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ಹಲವಾರು ನಾಯಕರನ್ನು ಕೆಪಿಸಿಸಿ ಮಟ್ಟದಲ್ಲಿ ಆಯ್ಕೆ ಮಾಡುವ ಮೂಲಕ ಪ್ರತಿ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇವೇ ಎಂಬ ಅಂಶವನ್ನು ಸಾರಲು ಪ್ರಯತ್ನಪಟ್ಟಿತ್ತು. ಆದರೆ ಕಾಂಗ್ರೆಸ್ ಪಕ್ಷದ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿ ಎರಡು ಕ್ಷೇತ್ರಗಳಲ್ಲಿ ಹೀನಾಯ ಸೋಲನ್ನು ಕಂಡಿದೆ.

ಇನ್ನು ಇದೀಗ ಉಪ ಚುನಾವಣೆಯ ಸೋಲಿನ ಕಾರಣಗಳನ್ನು ತಿಳಿಸಿ ವರಿಷ್ಠರಿಗೆ ರಿಪೋರ್ಟ್ ನೀಡಿರುವ ಡಿಕೆ ಶಿವಕುಮಾರ್ ಅವರು ನೀಡಿದ ಕಾರಣಗಳನ್ನು ನೋಡಿದರೆ ವಿಪಕ್ಷಗಳಿಗೆ ಮತ್ತೊಂದು ವ್ಯಂಗ್ಯದ ಬಾಣ ಸಿಕ್ಕಂತಾಗಿದೆ. ಹೌದು, ಇದೀಗ ಉಪ ಚುನಾವಣೆಯ ಸೋಲಿನ ಕುರಿತು ವಿಮರ್ಶೆ ನಡೆಸಿ ರಿಪೋರ್ಟ್ ಸಲ್ಲಿಸಿರುವ ಡಿಕೆ ಶಿವಕುಮಾರ್ ಅವರು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಲೆಯೇ ಇರಲಿಲ್ಲ. ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಅಸಮಾಧಾನಗೊಂಡಿದ್ದರೂ ಅವರು ನನ್ನ ಬಳಿಗೆ ಬಿಜೆಪಿ ಪಕ್ಷ ಸೋಲುತ್ತದೆ ಎಂದು ಹೇಳಿದ್ದರು. ಇನ್ನು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಸ್ತಿತ್ವವೇ ಇರಲಿಲ್ಲ ಆದರೂ ಕೂಡ ಬಿಜೆಪಿ ಪಕ್ಷ ಗೆದ್ದಿದೆ ಎಂದರೆ ಇದಕ್ಕೆ ಈವಿಎಂ ಹ್ಯಾ’ಕ್ ಹಾಗಿರುವುದೇ ಕಾರಣ. ಈವಿಎಂ ಹ್ಯಾ’ಕ್ ಮಾಡದೆ ಬಿಜೆಪಿ ಪಕ್ಷ ಎರಡು ಕ್ಷೇತ್ರಗಳಲ್ಲೂ ಗೆಲ್ಲಲು ಸಾಧ್ಯವೇ ಇಲ್ಲ. ಇನ್ನು ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಜೆಡಿಎಸ್ ಪಕ್ಷ ಕೂಡಾ ಕಾರಣ ಯಾಕೆಂದರೆ ಜೆಡಿಎಸ್ ಪಕ್ಷವು ತನ್ನ ಮತಗಳನ್ನು ಉಳಿಸಿಕೊಳ್ಳುವುದರಲ್ಲಿ ವಿಫಲವಾಗಿರುವ ಕಾರಣ ಜೆಡಿಎಸ್ ಪಕ್ಷದ ಮತಗಳು ಬಿಜೆಪಿ ಪಕ್ಷಕ್ಕೆ ಹೋಗಿ ಬಿಜೆಪಿ ಪಕ್ಷ ಎರಡು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ. ಎಂದು ರಿಪೋರ್ಟ್ ಸಲ್ಲಿಸಿದ್ದಾರೆ.

Comments are closed.