ಸಕಲ ಪಾಪ ಕರ್ಮಗಳನ್ನು ಕಳೆಯುವ ಮಹಾತಾಯಿ ಚೌಡೇಶ್ವರಮ್ಮ

ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಮೂಲ ಮೂಲೆಯಲ್ಲಿಯೂ ಚಿರಪರಿಚಿತವಾಗಿರುವ ಶ್ರೀ ಸಿಗಂದೂರು ಚೌಡೇಶ್ವರಿ ತಾಯಿಯ ದೇವಸ್ಥಾನ ಹಾಗೂ ಮಹಿಮೆಯ ಬಗ್ಗೆ ಕಿರು ಪರಿಚಯವನ್ನು ಇಂದು ನಾವು ನೀಡುತ್ತೇವೆ ಕೇಳಿ. ಶ್ರೀ ತಾಯಿ ಸಿಗಂದೂರು ಚೌಡೇಶ್ವರಿ ನೀನೇ ಎಲ್ಲಾ ಎಂದು ಬೇಡಿ ಬರುವ ಭಕ್ತರಿಗೆ ಇದುವರೆಗೂ ಬೇಡಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತ ನಮ್ಮೆಲ್ಲರನ್ನೂ ಕಾಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಶರಾವತಿ ನದಿಯ ಹಿನ್ನೀರಿನ ಪ್ರದೇಶದಲ್ಲಿ ಸಿಗಂದೂರಿನ ಕಾನನದಲ್ಲಿ ಕುಳಿತು ದೇಶದ ಮೂಲೆ ಮೂಲೆಯಿಂದ ಭಕ್ತರನ್ನು ತನ್ನಲ್ಲಿ ಕರೆಸಿಕೊಳ್ಳುವ ಶ್ರೀ ಸಿಗಂದೂರು ಚೌಡೇಶ್ವರಿ ತಾಯಿಯ ಆಸ್ಥಾನದ ಬಗ್ಗೆ ಹೇಳುವುದಾದರೇ,

ಸ್ನೇಹಿತರೇ, ನೀವು ಎರಡು ದಶಕಗಳ ಹಿಂದೆ ಈ ಗ್ರಾಮದ ಹೆಸರನ್ನು ಕೂಡ ಕೇಳಿರುವುದಿಲ್ಲ, ಅಷ್ಟು ಕುಗ್ರಾಮವಾಗಿದ್ದ ಈ ಗ್ರಾಮ ಸಿಗಂದೂರು, ಈಗ ಜಗನ್ಮಾತೆಯ ಉಪಸ್ಥಿತಿಯಿಂದ ದಿವ್ಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಪ್ರತಿ ದಿನವೂ ಲಕ್ಷಾಂತರ ಜನರು ತಮ್ಮ ಬೇಡಿಕೆಗಳನ್ನು ಹೊತ್ತು ತಾಯಿಯ ಬಳಿ ಬರುತ್ತಾರೆ. ಹೌದು ಸ್ನೇಹಿತರೇ, 25 ವರ್ಷಗಳ ಹಿಂದೆ ಸಿಗಂದೂರು ಐತಿಹಾಸಿಕ ಕ್ಷೇತ್ರ ವಾಗಿರಲಿಲ್ಲ, ಆದರೆ ಇದೀಗ ನಮ್ಮ ಕಣ್ಣ ಮುಂದೆಯೇ ಈಗ ಕಣ್ಣಿನ ಅಂದಾಜಿಗೂ ಸಿಗದಷ್ಟು ದೊಡ್ಡದಾಗಿ ಬೆಳೆದಿದೆ ಈ ಕ್ಷೇತ್ರ.

ಇನ್ನು ಇಲ್ಲಿನ ಚೌಡೇಶ್ವರಿ ತಾಯಿಯು 25 ವರ್ಷದ ಹಿಂದಿನವರೆಗೂ ಶಿವಮೊಗ್ಗ ಜಿಲ್ಲೆಯ ಶರವಾತಿ ನದಿಯ ತೀರದ ಗೊಂಡಾರಣ್ಯದ ಒಂದು ಗುಹೆಯೊಂದರಲ್ಲಿ ತಾಯಿ ನೆಲೆಸಿದ್ದರು. ಕೆಲವರು ಸೀಮಿತವಾದ ಭಕ್ತವೃಂದವನ್ನು ಹೊಂದಿದ್ದರು, ಅಂದರೆ ಕೆಲವು ನಿರ್ದಿಷ್ಟ ಕುಟುಂಬದವರು ತಾಯಿಯ ದರ್ಶನ ಪಡೆಯಲು ಬರುತ್ತಿದ್ದರು. ಆದರೆ ಅದೊಂದು ಶುಭದಿನ ದೇವಸ್ಥಾನದ ಇಂದಿನ ಧರ್ಮದರ್ಶಿ ಗಳಾಗಿರುವ ರಾಮಪ್ಪ ಹಾಗೂ ಪ್ರಧಾನ ಅರ್ಚಕರಾಗಿರುವ ಶೇಷಗಿರಿ ಭಟ್ಟರಿಗೆ ಪ್ರೇರಣೆಯನ್ನು ನೀಡಿದ್ದರು ಮಹಾತಾಯಿ. ಆ ಪ್ರೇರಣೆಯ ಫಲಶ್ರುತಿಯಾ ಕಾರಣದಿಂದಲೇ ಇಂದು ಚೌಡೇಶ್ವರಿ ತಾಯಿಯ ದೇವಸ್ಥಾನ ಕಂಗೊಳಿಸುತ್ತಿದೆ ಈ ದೇವಾಲಯಕ್ಕೆ ಈ ವರ್ಷ 25ನೇ ವರ್ಷದ ಸಂಭ್ರಮ ಸಹ ನಡೆದಿದೆ.

ಈ ದೇವಸ್ಥಾನದ ಹಿನ್ನೆಲೆಯನ್ನು ನಾವು ಗಮನಿಸುವುದಾದರೇ ಶೇಷಪ್ಪ ಎಂಬುವವರು ಇಲ್ಲಿನ ಗೊಂಡಾರಣ್ಯದ ಪ್ರದೇಶದಲ್ಲಿ ದಾರಿ ತಪ್ಪಿ ಕಳೆದು ಹೋಗುತ್ತಾರೆ. ದಾರಿ ಕಾಣದೇ ಬೇರೆ ಸುಸ್ತಾಗಿ ಮರದ ಕೆಳಗೆ ವಿಶ್ರಮಿಸಲು ಕುಳಿತು ನಿದ್ದೆ ಮಾಡೋಣ ಎದ್ದು ನಿದ್ದೆಗೆ ಜಾರುತ್ತಾರೆ. ಅದೇ ಸಮಯದಲ್ಲಿ ಶೇಷಪ್ಪ ಅವರ ಕನಸಿನಲ್ಲಿ ಶ್ರೀ ಸಿಗಂದೂರು ಚೌಡೇಶ್ವರಿ ತಾಯಿ ಪ್ರತ್ಯಕ್ಷರಾಗಿ ನನಗಾಗಿ ಒಂದು ದೇವಾಲಯ ನಿರ್ಮಿಸುವಂತೆ ಅಲ್ಲಿರುವ ವಿಗ್ರಹದ ಕುರಿತು ಶೇಷಪ್ಪ ಅವರಿಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ. ಈ ಕನಸಿನಲ್ಲಿ ಹೇಳಿದ ಪ್ರದೇಶದಲ್ಲಿ ಶೇಷಪ್ಪನವರು ನದಿಯಲ್ಲಿ ದೇವಿಯ ವಿಗ್ರಹವನ್ನು ಹುಡುಕಿ, ತನ್ನ ಊರಿನ ಬ್ರಾಹ್ಮಣ ಪುರೋಹಿತರ ದುಗ್ಗಜ್ಜನೊಂದಿಗೆ ಸೇರಿಕೊಂಡು ದೇವಿಯನ್ನು ಪ್ರತಿಷ್ಠಾಪಿಸಿ ದೇವಾಲಯವನ್ನು ನಿರ್ಮಾಣ ಮಾಡಿಯೇಬಿಡುತ್ತಾರೆ.

ಇತಿಹಾಸ ತಿಳಿದು ಕೊಂಡಿದ್ದಾಯಿತು, ಇನ್ನು ಇಲ್ಲಿನ ವಿಶೇಷವೇನೆಂದರೆ ಇಲ್ಲಿನ ಜನರು ಕಳ್ಳರಿಂದ ತಮ್ಮ ಮನೆ, ಜಮೀನು, ಹೊಲಗಳಿಗೆ ರಕ್ಷಣೆ ಪಡೆಯಲು ಬೋರ್ಡ್ ಹಾಕುವ ಪದ್ದತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಹೌದು ಸ್ನೇಹಿತರೇ, ಆಶ್ಚರ್ಯ ಪಡಬೇಡಿ, ಇಲ್ಲಿನ ಜಮೀನು, ತೋಟ, ಗದ್ದೆ ಮತ್ತು ಯಾವುದೇ ಹೊಸ ಕಟ್ಟಡಗಳಲ್ಲಿನ ವಸ್ತುಗಳಿಗೆ ಬೋರ್ಡ್ ಹಾಕಿದರೇ ಕಳ್ಳತನವಾಗುವುದಿಲ್ಲ ಎಂದು ನಂಬಲಾಗಿದೆ ಹಾಗೂ ಅದು ನಿಜವೂ ಕೂಡ. ಇದೇ ಕಾರಣಕ್ಕಾಗಿ ನೀವು ಈ ಕ್ಷೇತ್ರಕ್ಕೆ ಭೇಟಿ ನೀಡಿದ ತಕ್ಷಣವೇ ಶಿವಮೊಗ್ಗ ಸುತ್ತಮುತ್ತ ಮನೆಯ ಬಾಗಿಲುಗಳಲ್ಲಿ ಚೌಡೇಶ್ವರಿ ದೇವಿಯ ಕಾವಲಿದೆ ಎಂಬ ಬೋರ್ಡುಗಳನ್ನು ಕಾಣುತ್ತೀರಿ. ಹೀಗೆ ಹೇಳುತ್ತಾ ಹೋದರೆ ಈ ತಾಯಿಯ ಮಹಿಮೆಯನ್ನು ವಿವರಿಸಲು ನಮಗೆ ದಿನಗಳು ಬೇಕಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಯ ಹಿನ್ನೀರಿನಲ್ಲಿ ಇರುವ ಈ ದೇವಸ್ಥಾನಕ್ಕೆ ಸಮಯ ಮಾಡಿಕೊಂಡು ಒಮ್ಮೆ ಭೇಟಿ ನೀಡಿ.

Comments are closed.