ಮೊದಲ ಬಾರಿಗೆ ನೇರವಾಗಿ ಖಡಕ್ ಪ್ರಶ್ನೆ ಕೇಳಿದ ಸೋನು ಗೌಡ: ಮೊದಲ ಬಾರಿಗೆ ಸೋನು ಬೆಂಬಲಕ್ಕೆ ನಿಂತ ಪ್ಯಾಟೆ ಮಂದಿ. ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಅಂತು ಇಂತು ಕೊನೆಗೂ ಕೂಡ ಬಿಗ್ ಬಾಸ್ ಎನ್ನುವ ಅರಮನೆಯಲ್ಲಿ ಸ್ಪರ್ಧಿಗಳು ಹಣಕ್ಕಾಗಿ ಕಾಂಪೀಟ್ ಮಾಡುವ ಕಾರ್ಯಕ್ರಮ ಪ್ರಾರಂಭವಾಗಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿಯ ಓ ಟಿ ಟಿ ಬಿಗ್ ಬಾಸ್ ಪ್ರಾರಂಭವಾಗಿದ್ದು ಹಲವಾರು ವಿವಿಧ ಕ್ಷೇತ್ರಗಳ ಖ್ಯಾತ ನಾಮ ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಮನೆಯ ಒಳಗೆ ಕಾಲಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಎರಡನೇ ಸ್ಪರ್ಧಿಯಾಗಿ ಕಾಲಿಟ್ಟಿರುವ ಸೋನು ಶ್ರೀನಿವಾಸ್ ಗೌಡ ಅವರ ಕುರಿತಂತೆ ಎಲ್ಲಾ ಕಡೆ ಅಪಸ್ವರಗಳು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿವೆ.
ಸೋನು ಶ್ರೀನಿವಾಸ ಗೌಡರವರು ಶಾರ್ಟ್ ವಿಡಿಯೋ ಫಾರ್ಮೆಟ್ ನಲ್ಲಿ ತಮ್ಮ ಜನಪ್ರಿಯತೆಯನ್ನು ಸಾಧಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಆದರೆ ಅವರ ಖಾಸಗಿ ಫೋಟೋ ಹಾಗೂ ವಿಡಿಯೋಗಳು ಕೆಲವು ಸಮಯಗಳ ಹಿಂದೆಯೇ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು ಅದರ ಕುರಿತಂತೆ ಸ್ಪಷ್ಟಿಕರಣ ನೀಡುತ್ತಾ ಸೋನು ಶ್ರೀನಿವಾಸ ಗೌಡ ನಾನಲ್ಲ ಎಂಬುದಾಗಿ ಕೂಡ ಹೇಳಿದ್ದರು. ಆದರೆ ಪ್ರೇಕ್ಷಕರು ಇದನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ, ಈಗಲೂ ಕೂಡ ಇಂತಹ ವ್ಯಕ್ತಿಗಳನ್ನು ಬಿಗ್ ಬಾಸ್ ಮನೆಗೆ ಆಹ್ವಾನಿಸುತ್ತಿದ್ದೀರಲ್ಲ ನಿಮಗೆ ಮರ್ಯಾದೆ ಇಲ್ವಾ ಎನ್ನುವುದಾಗಿ ವಾಹಿನಿಯವರನ್ನು ಕೂಡ ಬಿಡದೆ ಜಾಡಿಸುತ್ತಿದ್ದಾರೆ. ಇದೆಲ್ಲದರ ನಡುವೆಯೂ ಕೂಡ ಸೋನು ಶ್ರೀನಿವಾಸ ಗೌಡರವರು ಈಗಾಗಲೇ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ರೂಪೇಶ್ ಅವರು ತಾನು ಸ್ಮೋಕಿಂಗ್ ಮಾಡುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸೋನು ಶ್ರೀನಿವಾಸ ಗೌಡ ನೀವು ಸ್ಮೋಕ್ ಮಾಡುದಿಲ್ವಾ? ನಾನು ಮಾಡ್ತೀನಿ ಎಂಬುದಾಗಿ ಉತ್ತರ ನೀಡಿದ್ದಾರೆ. ಇದಕ್ಕೆ ರೂಪೇಶ್ ರವರು ಆಶ್ಚರ್ಯದಿಂದ ನೀವು ಸ್ಮೋಕಿಂಗ್ ಮಾಡ್ತೀರಾ ಎಂಬುದಾಗಿ ಉದ್ಘರಿಸಿದ್ದಾರೆ. ಅದಕ್ಕೆ ಸೋನು ಶ್ರೀನಿವಾಸ ಗೌಡರವರು ನಾನು ಸಿಗರೇಟ್ ಸೇದುತ್ತೇನೆ ಅದರಲ್ಲಿ ತಪ್ಪೇನಿದೆ ಎಂಬುದಾಗಿ ಖಡಕ್ ಆಗಿ ಮರು ಪ್ರಶ್ನೆ ಹಾಕಿದ್ದಾರೆ. ಸೋನು ಗೌಡ ಅವರ ಈ ಹೇಳಿಕೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಪ್ಪದೇ ಶೇರ್ ಮಾಡಿಕೊಳ್ಳಿ.
Comments are closed.