ಅಂದಿನಿಂದ ಕನ್ನಡಿಗರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿರುವ ಸ್ಪರ್ಶ ರೇಖಾ ರವರ ತಂಗಿ ಕೂಡ ನಟಿ ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗ ಇದುವರೆಗೂ ಹಲವಾರು ನಾಯಕನಟ ಹಾಗೂ ನಾಯಕ ನಟಿಯರನ್ನು ಕಂಡಿದೆ. ಅವರಲ್ಲಿ ಕೆಲ ನಾಯಕ ನಟಿಯರು ಇಂದು ನಟಿಸಿದ್ದರು ಕೂಡ ಜನಮಾನಸದಲ್ಲಿ ಅಚ್ಚಳಿಯದಂತೆ ಹಸಿರಾಗಿ ಉಳಿದಿದ್ದಾರೆ. ಇಲ್ಲಿ ನಾವು ಮಾತನಾಡಲು ಹೊರಟಿರುವುದು ನಟಿ ಸ್ಪರ್ಶ ಖ್ಯಾತಿಯ ರೇಖಾ ರವರ ಕುರಿತಂತೆ. ಇಂದು ಅವರು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಇರಬಹುದು.

ಆದರೆ ಅಂದಿನ ಕಾಲದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಸ್ಪರ್ಶ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮೆಜೆಸ್ಟಿಕ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವಂತಹ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಹಲವಾರು ಚಿತ್ರಗಳಲ್ಲಿ ನಟಿ ರೇಖಾ ರವರು ಕಾಣಿಸಿಕೊಂಡಿದ್ದರು. ಇದರ ನಡುವಲ್ಲಿ ನಟಿ ರೇಖಾ ರವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದರು. ನಂತರ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಆಗಿರುವ ಬಿಗ್ ಬಾಸ್ ಮೂಲಕ ಮತ್ತೊಮ್ಮೆ ವಾಪಸಾಗುತ್ತಾರೆ. ಈಗ ಕೆಲವೊಂದು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಡಾಲಿ ಧನಂಜಯ ನಟನೆಯ ಸೂಪರ್ ಸೆನ್ಸೇಷನಲ್ ಚಿತ್ರ ಬಡವ ರಾಸ್ಕಲ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

nikitha narayan | ಅಂದಿನಿಂದ ಕನ್ನಡಿಗರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿರುವ ಸ್ಪರ್ಶ ರೇಖಾ ರವರ ತಂಗಿ ಕೂಡ ನಟಿ ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.
ಅಂದಿನಿಂದ ಕನ್ನಡಿಗರ ನೆಚ್ಚಿನ ನಟಿಯರಲ್ಲಿ ಒಬ್ಬರಾಗಿರುವ ಸ್ಪರ್ಶ ರೇಖಾ ರವರ ತಂಗಿ ಕೂಡ ನಟಿ ಯಾರು ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ. 2

ಇನ್ನು ಕೇವಲ ರೇಖಾ ರವರು ಮಾತ್ರವಲ್ಲದೆ ಅವರ ತಂಗಿ ಕೂಡ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ಅದು ಕೂಡ ಕೆಲವು ವರ್ಷಗಳ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ರವರ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದರು. ಹಾಗಿದ್ದರೆ ಅವರ್ಯಾರು ಎಂದು ತಿಳಿಯುವುದಾದರೆ ಅವರ ಹೆಸರು ನಿಖಿತಾ ನಾರಾಯಣ್ ಎಂದು. ಸಂಬಂಧದಲ್ಲಿ ರೇಖಾ ರವರಿಗೆ ಅವರು ನಾರಾಯಣ್ ರವರು ತಂಗಿ ಆಗುತ್ತಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಗುಳ್ನಗೆ ಚಿತ್ರದಲ್ಲಿ ನಾಲ್ಕು ಜನ ನಾಯಕಿಯರಲ್ಲಿ ಪಟ್ಟಣದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ಕನ್ನಡ ಚಿತ್ರರಂಗದಲ್ಲಿ ನಿಖಿತಾ ರವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ನಟಿ ರೇಖಾ ಅವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.

Comments are closed.