ಹುಟ್ಟುಹಬ್ಬ ಸಂಭ್ರಮದಲ್ಲಿರುವ ಶ್ರೀ ಲೀಲಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಇವರು ಎಷ್ಟು ಚಿಕ್ಕವರು ಎಂದು ತಿಳಿದರೆ ನಂಬಲು ಕೂಡ ಸಾಧ್ಯವಿಲ್ಲ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೂಡ ಹಲವಾರು ಉದಯೋನ್ಮುಖ ನಟಿಯರು ಕಾಲಿಟ್ಟು ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ನಟಿ ಶ್ರೀಲೀಲಾ ರವರು ಅಗ್ರಗಣ್ಯರಾಗಿ ಕಾಣಸಿಗುತ್ತಾರೆ. ಹೌದು ಗೆಳೆಯರೇ ನಟಿ ಶ್ರೀಲೀಲಾ ರವರು ಮೊದಲಿಗೆ ಎಪಿ ಅರ್ಜುನ್ ನಿರ್ದೇಶನದಲ್ಲಿ ವಿರಾಟ್ ನಾಯಕ ನಟನಾಗಿ ನಟಿಸಿರುವ ಕಿಸ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ.

ಮೊದಲ ಚಿತ್ರದಲ್ಲೇ ಅಪೂರ್ವ ನಟನೆಯ ಮೂಲಕ ಪ್ರೇಕ್ಷಕರ ನೆಚ್ಚಿನ ನಾಯಕ ನಟಿ ಯಾಗುತ್ತಾರೆ. ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ರವರ ಜೊತೆಗೆ ಭರಾಟೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಕೂಡ ನಟಿಸಿರುವ ಶ್ರೀಲೀಲಾ ರವರು ಹಲವಾರು ಸಿನಿಮಾಗಳಲ್ಲಿ ಭವಿಷ್ಯದಲ್ಲಿ ನಟಿಸುವ ಭರವಸೆ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ನಟಿ ಶ್ರೀ ಲೀಲ ರವರು ಕನ್ನಡ ತೆಲುಗು ಚಿತ್ರರಂಗಗಳಲ್ಲಿ ತಮ್ಮದೇ ಆದಂತಹ ಪ್ರಭಾವವನ್ನು ಬೀರುತ್ತಿದ್ದು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಸ್ಟಾರ್ ನಟಿಯಾಗುವ ಎಲ್ಲಾ ಭರವಸೆಯನ್ನು ಕೂಡ ಪ್ರೇಕ್ಷಕರಲ್ಲಿ ಮೂಡಿಸಿದ್ದಾರೆ.

ಇನ್ನು ಇಷ್ಟೊಂದು ಪ್ರಬುದ್ಧವಾಗಿ ನಟಿಸುತ್ತಿರುವ ನಟಿ ಶ್ರೀಲೀಲಾ ರವರು ಜೂನ್ 14ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ಶ್ರೀಲೀಲಾ ರವರಿಗೆ ಎಷ್ಟು ವರ್ಷ ವಯಸ್ಸಾಗಿರಬಹುದು ಎಂಬುದಾಗಿ ಕುತೂಹಲವಿದೆ. ನಿಮ್ಮ ಈ ಕುತೂಹಲವನ್ನು ಹಾಗೂ ಗೊಂದಲವನ್ನು ಇಂದು ನಾವು ಪರಿಹರಿಸುತ್ತೇವೆ ಬನ್ನಿ. ಹೌದು ಗೆಳೆಯರೆ ನಟಿ ಶ್ರೀಲೀಲಾ ರವರಿಗೆ ವಯಸ್ಸು 21. ಆದರೆ ಅವರ ನಟನೆಯನ್ನು ನೋಡಿದರೆ ಖಂಡಿತವಾಗಿ ಅವರಿಗೆ 21 ವರ್ಷ ವಯಸ್ಸು ಎಂದು ಅನಿಸುವುದಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಅವಕಾಶಗಳು ಅವರಿಗೆ ಹುಡುಕಿಕೊಂಡು ಬರಲಿ ಎಂಬುದಾಗಿ ಹಾರೈಸೋಣ.

Comments are closed.