ತುಂಡು ಬಟ್ಟೆ ಹಾಕಿಕೊಂಡರೆ ತಪ್ಪೇನು?? ಇದ್ದಕ್ಕಿದ್ದ ಹಾಗೆ ಷಾಕಿಂಗ್ ವಿಚಾರ ಬಹಿರಂಗ ಪಡಿಸಿದ ಸಾಯಿ ಪಲ್ಲವಿ. ಹೇಳಿದ್ದೇನು ಗೊತ್ತೇ??

ಖ್ಯಾತ ನಟಿ ಸಾಯಿಪಲ್ಲವಿ ಅವರು 7 ವರ್ಷಗಳಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಾಯಿಪಲ್ಲವಿ ಅವರು ಬೇರೆ ನಟಿಯರಿಗಿಂತ ಬಹಳ ಭಿನ್ನವಾಗಿದ್ದಾರೆ. ಇವರು ಧರಿಸುವ ಬಟ್ಟೆಗಳು ಬಹಳ ಡೀಸೆಂಟ್ ಆಗಿರುತ್ತದೆ, ಬಹಳಷ್ಟು ಸಮಯಗಳಲ್ಲಿ, ಕಾರ್ಯಕ್ರಮಗಳಲ್ಲಿ ಸೀರೆಯನ್ನೇ ಧರಿಸುತ್ತಾರೆ. ಹಾಗೂ ಇವರು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಸಹ ಜನರಿಗೆ ಬಹಳ ಇಷ್ಟವಾಗಿದೆ. ಸಾಯಿಪಲ್ಲವಿ ಅಭಿನಯಿಸುವ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈ ಶುಕ್ರವಾರ ಸಾಯಿಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಅಭಿನಯಿಸಿರುವ ವಿರಾಟ ಪರ್ವಂ ಸಿನಿಮಾ ಬಿಡುಗಡೆ ಆಗುತ್ತಿದೆ.

ಸಾಯಿಪಲ್ಲವಿ ಅವರು ಅಭಿಮಾನಿಗಳ ಜೊತೆಗೆ ವಿಶೇಷವಾದ ಬಂಧ ಅಥವಾ ಅವರು ಅಭಿಮಾನಿಗಳಿಂದ ವಿಶೇಷವಾದ ಪ್ರೀತಿ ಪಡೆದಿರುವುದೇ ಸಾಯಿಪಲ್ಲವಿ ಅವರು ಬೇರೆ ಹೀರೋಯಿನ್ ಗಳ ಹಾಗೆ ತುಂಡು ಬಟ್ಟೆ ಧರಿಸುವುದಿಲ್ಲ ಗ್ಲಾಮರ್ ಪ್ರಪಂಚದಿಂದ ದೂರ ಉಳಿದಿದ್ದಾರೆ ಎನ್ನುವ ಕಾರಣಕ್ಕೆ. ಆದರೆ ಈಗ ವಿರಾಟ ಪರ್ವಂ ಸಿನಿಮಾಗಾಗಿ ಸಾಯಿಪಲ್ಲವಿ ಅವರು ಸಾಕಷ್ಟು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆ ಒಂದು ಸಂದರ್ಶನದಲ್ಲಿ ಸಾಯಿಪಲ್ಲವಿ ಅವರಿಗೆ ಶಾರ್ಟ್ ಡ್ರೆಸ್, ಮಾಡರ್ನ್ ಡ್ರೆಸ್ ಗಳನ್ನು ತಾವು ಯಾಕೆ ಧರಿಸುವುದಿಲ್ಲ ಎನ್ನುವ ಪ್ರಶ್ನೆ ಕೇಳಲಾಗಿತ್ತು, ಆ ಪ್ರಶ್ನೆಗೆ ಸಾಯಿಪಲ್ಲವಿ ಅವರು ಕೊಟ್ಟಿರುವ ಉತ್ತರ, ನಿಜಕ್ಕೂ ನೆಟ್ಟಿಗರಿಗೆ ಹಾಗೂ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸಾಯಿಪಲ್ಲವಿ ಅವರು ಹೇಳಿರುವ ಪ್ರಕಾರ, ಅವರು ಮಾಡರ್ನ್ ಬಟ್ಟೆಗಳ ವಿರುದ್ಧವಾಗಿ ಇಲ್ಲ, ಚಿಕ್ಕ ವಯಸ್ಸಿನಿಂದಲೂ ಸ್ಪೋರ್ಟ್ಸ್, ರನ್ನಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.

sai | ತುಂಡು ಬಟ್ಟೆ ಹಾಕಿಕೊಂಡರೆ ತಪ್ಪೇನು?? ಇದ್ದಕ್ಕಿದ್ದ ಹಾಗೆ ಷಾಕಿಂಗ್ ವಿಚಾರ ಬಹಿರಂಗ ಪಡಿಸಿದ ಸಾಯಿ ಪಲ್ಲವಿ. ಹೇಳಿದ್ದೇನು ಗೊತ್ತೇ??
ತುಂಡು ಬಟ್ಟೆ ಹಾಕಿಕೊಂಡರೆ ತಪ್ಪೇನು?? ಇದ್ದಕ್ಕಿದ್ದ ಹಾಗೆ ಷಾಕಿಂಗ್ ವಿಚಾರ ಬಹಿರಂಗ ಪಡಿಸಿದ ಸಾಯಿ ಪಲ್ಲವಿ. ಹೇಳಿದ್ದೇನು ಗೊತ್ತೇ?? 2

ಪಲ್ಲವಿ ಅವರು 12ನೇ ತರಗತಿ ವರೆಗೂ ಶಾರ್ಟ್ಸ್ ಧರಿಸುತ್ತಿದ್ದರಂತೆ. ಜಾರ್ಜಿಯ ಗೆ ಮೆಡಿಸನ್ ಓದಲು ಹೋದ ಬಳಿಕ, ಪಲ್ಲವಿ ಅವರು ಅಲ್ಲಿ ಟ್ಯಾಂಗೋ ಡ್ಯಾನ್ಸ್ ಕಲಿತು, ಅದರ ಪ್ರದರ್ಶನಕ್ಕಾಗಿ ಒಂದು ಸ್ಲಿಟ್ ಡ್ರೆಸ್ ಧರಿಸಿದ್ದರಂತೆ, ಆ ಸಮಯದಲ್ಲಿ ತಂದೆ ತಾಯಿಯ ಒಪ್ಪಿಗೆ ಪಡೆದೆ ಪಲ್ಲವಿ ಅವರು ಆ ಡ್ರೆಸ್ ಧರಿಸಿದ್ದರು. ಆದರೆ ಪ್ರೇಮಮ್ ಸಿನಿಮಾ ಬಳಿಕ ಸೋಷಿಯಲ ಮೀಡಿಯಾದಲ್ಲಿ ಆ ಡ್ಯಾನ್ಸ್ ವಿಡಿಯೋ ವೈರಲ್ ಆಗಿ, ಜನರು ಬೇರೆಯದೇ ರೀತಿಯಲ್ಲಿ ಆ ವಿಡಿಯೋ ಬಗ್ಗೆ ಮಾತನಾಡಲು ಶುರು ಮಾಡಿದ್ದರಂತೆ. ಹಾಗಾಗಿ ಜನರು ತನ್ನನ್ನು ನೋಡಿ, ಜಡ್ಜ್ ಮಾಡುವ ರೀತಿ ಬದಲಾಗುವ ವರೆಗು ತಮ್ಮನ್ನು ತಾವು ಪ್ರೊಟೆಕ್ಟ್ ಮಾಡಿಕೊಳ್ಳಲು ಸಾಯಿ ಪಲ್ಲವಿ ಅವರು ಮಾಡರ್ನ್ ಅಥವಾ ಶಾರ್ಟ್ ಡ್ರೆಸ್ ಧರಿಸುವುದಿಲ್ಲವಂತೆ. ಹಾಗೆಯೇ ತಾವೇನು ಮಾಡರ್ನ್ ಡ್ರೆಸ್ ಗಳ ವಿರೋಧಿ ಅಲ್ಲ, ಮಾಡರ್ನ್ ಡ್ರೆಸ್ ಗಳನ್ನು ಧರಿಸುವುದು ತಪ್ಪಲ್ಲ ಎಂದು ಹೇಳುತ್ತಾರೆ ಸಾಯಿಪಲ್ಲವಿ.

Comments are closed.