ತಾನು ಬಿಗ್ ಬಾಸ್ ಅನ್ನು ಹಣಕ್ಕಾಗಿ ಮಾಡುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟ ಸುದೀಪ್ : ಮತ್ತು ಯಾಕೆ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೆ ಆಗಸ್ಟ್ 6ರಿಂದ ಬಿಗ್ ಬಾಸ್ ಕನ್ನಡ ಓ ಟಿ ಟಿ ಸೀಸನ್ 1 ಪ್ರಾರಂಭವಾಗಲಿದೆ. ಇನ್ನು ಈ ಕಾರ್ಯಕ್ರಮವನ್ನು ಕೂಡ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಡೆಸಿಕೊಡಲಿದ್ದಾರೆ. ಈ ಬಿಗ್ ಬಾಸ್ ಮುಗಿದ ನಂತರವಷ್ಟೇ ಮುಖ್ಯ ಬಿಗ್ ಬಾಸ್ ಅಂದರೆ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭವಾಗಲಿದೆ.

ಇನ್ನು ಬಿಗ್ ಬಾಸ್ ಓಟಿಟಿ ಕುರಿತಂತೆ ಮಾತನಾಡುವುದಾದರೆ 16 ಸ್ಪರ್ಧಿಗಳು 24 ಗಂಟೆಗಳ ಕಾಲ ಬರೋಬ್ಬರಿ 42 ದಿನಗಳ ಸಮಯದವರೆಗೆ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ. ಇನ್ನು ಈ ಕಾರ್ಯಕ್ರಮವನ್ನು ಅದೇ ಉತ್ಸಾಹ ದೊಂದಿಗೆ ಕಿಚ್ಚ ಸುದೀಪ್ ರವರ ನಡೆಸಿಕೊಡಲಿದ್ದಾರೆ. ಬಿಗ್ ಬಾಸ್ ಕುರಿತಂತೆ ಮಾತನಾಡುತ್ತ ಕಿಚ್ಚ ಸುದೀಪ್ ರವರು ಈ ಬಾರಿಯೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಪ್ಲಾಟ್ ಫಾರ್ಮ್ ನಲ್ಲಿ ಸಾಧನೆ ಮಾಡಿ ಜನರ ಮನಸ್ಸನ್ನು ಗೆದ್ದವರನ್ನು ಈ ಬಾರಿ ಓ ಟಿ ಟಿ ಅಂದರೆ ವೂಟ್ ಬಿಗ್ ಬಾಸ್ ಮೂಲಕ ನಾವು ನಿಮ್ಮ ಮುಂದೆ ತರಲು ಪ್ರಯತ್ನ ಮಾಡುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಇನ್ನು ಬಿಗ್ ಬಾಸ್ ಅನ್ನು ನಾನು ನಿರೂಪಕನಾಗಿ ಹಣಕ್ಕಾಗಿ ಮಾಡುತ್ತಿಲ್ಲ ಬದಲಾಗಿ ಬಿಗ್ ಬಾಸ್ ಕುರಿತಂತೆ ನನಗೆ ವಿಶೇಷವಾದ ಪ್ರೀತಿ ಇದೆ ಎಂಬುದಾಗಿ ಹೇಳಿದ್ದಾರೆ.

bbk sudeep | ತಾನು ಬಿಗ್ ಬಾಸ್ ಅನ್ನು ಹಣಕ್ಕಾಗಿ ಮಾಡುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟ ಸುದೀಪ್ : ಮತ್ತು ಯಾಕೆ ಅಂತೇ ಗೊತ್ತೇ??
ತಾನು ಬಿಗ್ ಬಾಸ್ ಅನ್ನು ಹಣಕ್ಕಾಗಿ ಮಾಡುತ್ತಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟ ಸುದೀಪ್ : ಮತ್ತು ಯಾಕೆ ಅಂತೇ ಗೊತ್ತೇ?? 2

ಇದಕ್ಕೆ ಉದಾಹರಣೆ ನೀಡುತ್ತಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಕಾರ್ಯಕ್ರಮದ ಚಿತ್ರೀಕರಣಕ್ಕೆ ಭಾಗಿಯಾಗಬೇಕು ಎನ್ನುವ ಕಾರಣಕ್ಕಾಗಿ ವಿದೇಶದಲ್ಲಿ ಸಿನಿಮಾ ಚಿತ್ರೀಕರಣ ಇದ್ದರೂ ಕೂಡ ಎರಡು ಮೂರು ವಿಮಾನಗಳನ್ನು ಬದಲಿಸಿ ಕೂಡ ಬಂದಿದ್ದಿದೆ. ಬೆನ್ನು ನೋ’ವು ಇದ್ದ ಸಂದರ್ಭದಲ್ಲಿ ಕೂಡ ಐಸ್ ಪ್ಯಾಕ್ ಇಟ್ಟುಕೊಂಡು ನಾನು ನಿರೂಪಣೆ ಮಾಡಿದ್ದೇನೆ, ಹೇರ್ ಲೈನ್ ಫ್ಯಾಕ್ಚರ್ ಆದ ಸಂದರ್ಭದಲ್ಲಿ ಕೂಡ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಅದರ ಮೇಲೆ ಶೂ ಹಾಕಿಕೊಂಡು ನಿರೂಪಣೆ ಮಾಡಿದ್ದೇನೆ. ಬಿಗ್ ಬಾಸ್ ಮೂಲಕ ಜನರ ಮನಸ್ಸನ್ನು ತಲುಪುವುದು ನನಗೆ ಇಷ್ಟವಾದ ಕೆಲಸ ಇದಕ್ಕಾಗಿ ನಾನು ದುಡ್ಡನ್ನು ಮೊದಲಿಗೆ ನೋಡುವುದಿಲ್ಲ ಎಂಬುದಾಗಿ ಕಿಚ್ಚ ಸುದೀಪ್ ರವರು ಹೇಳಿದ್ದಾರೆ. ಅದಕ್ಕಾಗಿಯೇ ತಾನೆ ವಾರಕ್ಕೆ ಬಂತೆಂದರೆ ಸಾಕು, ಲಕ್ಷಾಂತರ ವೀಕ್ಷಕರು ಕಿಚ್ಚ ಸುದೀಪ್ ರವರನ್ನು ನೋಡೋದಕ್ಕಾಗಿಯೇ ಟಿವಿ ಮುಂದೆ ಕುಳಿತಿರುತ್ತಾರೆ.

Comments are closed.