ಮೊದಲ ಬಾರಿಗೆ ಕಾಂತಾರ ಸಿನಿಮಾ ನೋಡಿದ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತೇ?? ಪತ್ರ ಬರೆದ ಸುದೀಪ್ ಹೇಳಿದ್ದೆ ಬೇರೆ.

ನಮಸ್ಕಾರ ಸ್ನೇಹಿತರೆ ಕಾಂತರಾ ಸಿನಿಮಾ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರ ಬಾಯಲ್ಲಿ ಕೂಡ ಮೆಚ್ಚುಗೆ ಮಾತನ್ನು ಪಡೆದುಕೊಳ್ಳುತ್ತಿದೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ರಿಷಬ್ ಶೆಟ್ಟಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಪಕ್ಕಾ ಅಭಿಮಾನಿ. ಕಾಂತಾರ ಸಿನಿಮಾವನ್ನು ವೀಕ್ಷಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಾಂತಾರ ಸಿನಿಮಾದ ಬಗ್ಗೆ ಹಾಗೂ ರಿಶಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ ಬಗ್ಗೆ ಪತ್ರ ಒಂದರಲ್ಲಿ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಒಬ್ಬ ಪ್ರೇಕ್ಷಕನನ್ನು ಮಂತ್ರಮುಗ್ಧನನ್ನಾಗಿಸುವ ಅಪರೂಪದ ಸಿನಿಮಾಗಳಲ್ಲಿ ಕಾಂತಾರ ಕೂಡ ಒಂದು. ಸಿಂಪಲ್ ಫ್ಲಾಟ್ ಅನ್ನು ಅದ್ಭುತವಾಗಿ ಬರೆದು ಅಸಾಧಾರಣ ರೀತಿಯಲ್ಲಿ ಪರದೆ ಮೇಲೆ ತೋರಿಸಿರುವ ರಿಷಬ್ ಶೆಟ್ಟಿ ಅವರನ್ನು ಮುಕ್ತ ಕಂಠದಿಂದ ಕಿಚ್ಚ ಸುದೀಪ್ ರವರು ಹೊಗಳಿದ್ದಾರೆ. ಒಬ್ಬ ವ್ಯಕ್ತಿ ಈ ರೀತಿಯಲ್ಲಿ ಹೇಗೆ ಯೋಚಿಸಬಲ್ಲ ಎಂಬುದನ್ನು ಆಶ್ಚರ್ಯ ಪಟ್ಟು ಯೋಚಿಸುವುದಷ್ಟೆ ನಮ್ಮ ಕೆಲಸ. ನಿರ್ದೇಶಕ ಪೇಪರಲ್ಲಿ ಕಂಡ ಕನಸು ಯಥಾವತ್ತಾಗಿ ಅದ್ಭುತವಾಗಿ ತೆರೆಯ ಮೇಲೆ ಮೂಡಿ ಬಂದಿದೆ, ಇದು ನಿಜಕ್ಕೂ ಕೂಡ ಮೆಚ್ಚುಗೆಗೆ ಅರಹವಾಗಿರುವ ಸಿನಿಮಾ ಎಂಬುದಾಗಿ ಕಿಚ್ಚ ಹೊಗಳಿದ್ದಾರೆ.

sudeep abt kantara | ಮೊದಲ ಬಾರಿಗೆ ಕಾಂತಾರ ಸಿನಿಮಾ ನೋಡಿದ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತೇ?? ಪತ್ರ ಬರೆದ ಸುದೀಪ್ ಹೇಳಿದ್ದೆ ಬೇರೆ.
ಮೊದಲ ಬಾರಿಗೆ ಕಾಂತಾರ ಸಿನಿಮಾ ನೋಡಿದ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತೇ?? ಪತ್ರ ಬರೆದ ಸುದೀಪ್ ಹೇಳಿದ್ದೆ ಬೇರೆ. 2

ಇಂತಹ ಕಥೆಯ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ಹೊಂಬಾಳೆ ಫಿಲಂಸ್ ಗೆ ಧನ್ಯವಾದಗಳು, ಅಜನೀಶ್ ಅವರು ಮಾಸ್ಟರ್ ಎನ್ನುವುದಾಗಿ ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಮ್ಯೂಸಿಕ್ ಅನ್ನು ಕೂಡ ಹೊಗಳಿದ್ದಾರೆ. ಸಿನಿಮಾ ನೋಡಿದಾಗ ಅದರ ಬಗ್ಗೆ ಕೇಳಿದ್ದ ಎಲ್ಲಾ ವಿಮರ್ಶೆಗಳನ್ನು ಕೂಡ ಮೀರಿಸುವಂತೆ ಸಿನಿಮಾ ಮೂಡಿ ಬಂದಿದೆ ಎಂಬುದಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾವನ್ನು ಮನ ತುಂಬಿ ಹೊಗಳಿ ಪತ್ರದಲ್ಲಿ ಬರೆದಿದ್ದಾರೆ. ಕಿಚ್ಚ ಸುದೀಪ್ ಅವರ ಪ್ರತಿಕ್ರಿಯೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.