ಕಾಂತಾರ ಸಿನಿಮಾ ನೋಡಿದ ಬಳಿಕ “ಧಿಮಾಕಿ” ನ ನಟ ಹೇಳಿದ್ದೇನು ಗೊತ್ತೇ?? ರಿಷಬ್ ಎದುರಿಗೆ ಬಂದರೆ ಏನು ಮಾಡುತ್ತಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ರಿಷಬ್ ಶೆಟ್ಟಿ ನಾಯಕನಟನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ವೇಗ ಕಡಿಮೆಯಾಗದಂತೆ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಾ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಕೂಡ ಆಕಾಶದ ಎತ್ತರವನ್ನು ಏರುತ್ತಲೇ ಇದೆ. ಕಾಂತಾರ ಸಿನಿಮಾದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ನಮ್ಮ ಕರ್ನಾಟಕ ರಾಜ್ಯದಲ್ಲಿ ಕೂಡ ಈಗಾಗಲೇ ದಿನದಿಂದ ದಿನಕ್ಕೆ ಕಾಂತಾರ ಸಿನಿಮಾಗೆ ಇರುವ ಥಿಯೇಟರ್ ಗಳು ಹಾಗೂ ಸ್ಕ್ರೀನ್ಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತಲೇ ಇದ್ದಾರೆ.

ಕೇವಲ ಇಷ್ಟು ಮಾತ್ರವಲ್ಲದೆ ಪರ ಭಾಷೆಗಳಲ್ಲಿ ಕೂಡ ಕಾಂತಾರ ಸಿನಿಮಾವನ್ನು ನೋಡಲೇಬೇಕು ಎನ್ನುವ ಪ್ರೇಕ್ಷಕರ ಹಠ ಹಾಗೂ ಬೇಡಿಕೆಗಳು ಹೆಚ್ಚಾಗಿದ್ದು ಅತಿ ಶೀಘ್ರದಲ್ಲೇ ಕಾಂತಾರ ಸಿನಿಮಾ ಹಿಂದಿಗೆ ಡಬ್ ಆಗಿ ಬಿಡುಗಡೆಯಾಗಲಿದೆ. ಇನ್ನೂ ಬೇರೆ ಬೇರೆ ಭಾಷೆಗಳಿಂದ ಬೇಡಿಕೆ ಹೆಚ್ಚುತ್ತಿದ್ದು ಮುಂದಿನ ದಿನಗಳಲ್ಲಿ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಕಾಣಿಸಿಕೊಂಡರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಕರಾವಳಿಯ ಸಂಸ್ಕೃತಿ ಹಾಗೂ ಭೂತಕೋಲ ಆಚರಣೆಯನ್ನು ಪ್ರತಿಯೊಬ್ಬ ಕನ್ನಡಿಗ ಹಾಗೂ ಪ್ರತಿಯೊಬ್ಬ ಭಾರತೀಯ ವೀಕ್ಷಿಸಿ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಎಲ್ಲರೂ ರಿಷಬ್ ಶೆಟ್ಟಿ ಅವರ ಕಲ್ಪನೆಗೆ ಸಲಾಂ ಹೊಡೆಯಲೇಬೇಕು.

naveen abt kantara | ಕಾಂತಾರ ಸಿನಿಮಾ ನೋಡಿದ ಬಳಿಕ "ಧಿಮಾಕಿ" ನ ನಟ ಹೇಳಿದ್ದೇನು ಗೊತ್ತೇ?? ರಿಷಬ್ ಎದುರಿಗೆ ಬಂದರೆ ಏನು ಮಾಡುತ್ತಾರಂತೆ ಗೊತ್ತೇ??
ಕಾಂತಾರ ಸಿನಿಮಾ ನೋಡಿದ ಬಳಿಕ "ಧಿಮಾಕಿ" ನ ನಟ ಹೇಳಿದ್ದೇನು ಗೊತ್ತೇ?? ರಿಷಬ್ ಎದುರಿಗೆ ಬಂದರೆ ಏನು ಮಾಡುತ್ತಾರಂತೆ ಗೊತ್ತೇ?? 2

ಇನ್ನು ರಿಷಬ್ ಶೆಟ್ಟಿ ಅವರ ನಟನೆಯನ್ನು ನೋಡಿ ದಿಮಾಕು ಖ್ಯಾತಿಯ ನಟ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ಮಗ ಆಗಿರುವ ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ಅವರು, ರಿಷಬ್ ಶೆಟ್ಟಿ ಅವರೇ ನೀವು ಎದುರಿಗೆ ಸಿಕ್ಕರೆ ನಿಮ್ಮ ಕಾಲಿಗೆ ಮುಗಿವೆ. ನಿಮಗಲ್ಲ ನಿಮ್ಮ ಕಲೆಗೆ ಎಂಬುದಾಗಿ ಟ್ವೀಟ್ ಮಾಡಿದ್ದಾರೆ. ನೀವು ಕೇವಲ ನಟಿಸಿಲ್ಲ ಬದಲಾಗಿ ಆ ಪಾತ್ರದಲ್ಲಿ ಜೀವಿಸಿದ್ದೀರಿ ಎಂಬುದಾಗಿ ಕಂಠ ತುಂಬ ನವೀನ್ ಕೃಷ್ಣ ರಿಶಬ್ ಶೆಟ್ಟಿ ಅವರನ್ನು ಹೊಗಳಿದ್ದಾರೆ. ಧಿಮಾಕು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ತಮ್ಮ ಗುರುತನ್ನು ಸ್ಥಾಪಿಸಿದ್ದ ನವೀನ್ ಕೃಷ್ಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಪ್ರತಿಯೊಬ್ಬ ಕಲಾವಿದರು ಕೂಡ ಕಾಂತಾರ ಸಿನಿಮಾದ ಗುಣಗಾನ ಮಾಡುತ್ತಿರುವುದು ಚಿತ್ರ ಕನ್ನಡ ಚಿತ್ರರಂಗದಲ್ಲಿ ಯಾರು ಮಾಡಿದ ಅದೇನೋ ಒಂದು ಸಾಧನೆ ಮಾಡಿದೆ ಎನ್ನುವುದನ್ನು ಎರಡನೇ ಮಾತಿಲ್ಲದೇ ಒಪ್ಪಿಕೊಳ್ಳಬೇಕಾಗಿದೆ.

Comments are closed.